ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಧ್ರಾರೈಲು ದುರಂತಕ್ಕೆ ಅಗ್ನಿ ಆಕಸ್ಮಿಕ ಕಾರಣ : ಉನ್ನತ ಸಮಿತಿ ವರದಿ

By Staff
|
Google Oneindia Kannada News

ಗೋಧ್ರಾರೈಲು ದುರಂತಕ್ಕೆ ಅಗ್ನಿ ಆಕಸ್ಮಿಕ ಕಾರಣ : ಉನ್ನತ ಸಮಿತಿ ವರದಿ
ಸಾಬರ ಮತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ 59 ಮಂದಿ ಜೀವಂತವಾಗಿ ಭಸ್ಮವಾಗಿದ್ದ ಘಟನೆಗೆ ಹೊಸ ವ್ಯಾಖ್ಯಾನ

ನವದೆಹಲಿ : ಕೋಮುಗಲಭೆಗೆ ಕಾರಣವಾಗಿದ್ದ ಗೋಧ್ರಾ ರೈಲು ದುರಂತವನ್ನು ಆಕಸ್ಮಿಕ ಅಗ್ನಿ ದುರಂತ ಎಂದು ಈ ಬಗ್ಗೆ ತನಿಖೆ ನಡೆಸಿದ ಉನ್ನತ ಮಟ್ಟದ ಸಮಿತಿ ಬಣ್ಣಿಸಿದೆ.

ಸೋಮವಾರ(ಜ.17) ರೈಲ್ವೆ ಮಂಡಳಿ ಮುಖ್ಯಸ್ಥ ಆರ್‌.ಕೆ. ಸಿಂಗ್‌ ಅವರಿಗೆ ಸಮಿತಿ ವರದಿ ಸಲ್ಲಿಸಿತು. 2002ರಲ್ಲಿ ಗುಜರಾತ್‌ನ ಗೋಧ್ರಾ ಬಳಿ ಸಂಭವಿಸಿದ ರೈಲು ದುರಂತ 59ಮಂದಿಯನ್ನು ಬಲಿತೆಗೆದುಕೊಂಡಿತ್ತು. ಆ ನಂತರ ಕೋಮು ಗಲಭೆ ನಡೆದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ಯು.ಸಿ ಬ್ಯಾನರ್ಜಿ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ರೈಲ್ವೆ ಸಚಿವ ಲಾಲೂಪ್ರಸಾದ್‌ ಯಾದವ್‌ ರಚಿಸಿದ್ದರು.

ಸಾಬರ್‌ಮತಿ ಎಕ್ಸ್‌ಪ್ರೆಸ್‌ನ ಎಸ್‌-6 ಭೋಗಿಗೆ ಆಕಸ್ಮಿಕವಾಗಿ ವಿದ್ಯುತ್‌ ಬೆಂಕಿ ಬಿದ್ದು, ಅದು ಇಡೀ ರೈಲಿಗೆ ವ್ಯಾಪಿಸಿ ದುರಂತಕ್ಕೆ ದಾರಿ ಮಾಡಿದೆ. ಇದೊಂದು ಅಗ್ನಿ ಆಕಸ್ಮಿಕ ಎಂದು ಸಮಿತಿಯ ವರದಿ ತಿಳಿಸಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X