• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಡುಪಿ, ಬೈಂದೂರು, ಬ್ರಹ್ಮಾವರ, ಕಾರ್ಕಳಗಳಲ್ಲಿ ‘ಕನ್ನಡ ಭವನ’!

By Staff
|

ಉಡುಪಿ, ಬೈಂದೂರು, ಬ್ರಹ್ಮಾವರ, ಕಾರ್ಕಳಗಳಲ್ಲಿ ‘ಕನ್ನಡ ಭವನ’!

ಜಿಲ್ಲೆಯುದ್ದಗಲಕ್ಕೂ ಕನ್ನಡ ದೀಪ ಹಚ್ಚುವ ಉತ್ಸಾಹದಲ್ಲಿ ಕಸಾಪ ಜಿಲ್ಲಾಧ್ಯಕ್ಷರು

ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳ ವ್ಯಾಪ್ತಿಯನ್ನು ಹಿಗ್ಗಲಿಸುವ ಮೂಲಕ ಉಡುಪಿ ಜಿಲ್ಲೆಯಲ್ಲಿ ಕನ್ನಡ ಚಟುವಟಿಕೆಗಳಿಗೆ ಹೊಸ ಆಯಾಮ ನೀಡಲು ಜಿಲ್ಲಾ ಕಸಾಪ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಮುಂದಾಗಿದ್ದಾರೆ.

ತಮ್ಮ ಅಧಿಕಾರಾವಧಿಯಲ್ಲಿ ಸಾಹಿತ್ಯ ಪರಿಷತ್‌ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹೊಳ್ಳ ನಿರ್ಧರಿಸಿದ್ದಾರೆ. ಈ ಚಟುವಟಿಕೆಗಳಲ್ಲಿ ಮುಖ್ಯವಾದುದು ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕನ್ನಡ ಭವನಗಳ ನಿರ್ಮಾಣ.

ಕನ್ನಡ ಭವನಗಳೆಂದರೆ ಕನ್ನಡ ಚಟುವಟಿಕೆಗಳ ಮಂಟಪಗಳೆಂದೇ ಅರ್ಥ. ಹಾಗಾಗಿ ಉಡುಪಿ, ಕಾರ್ಕಳ, ಬೈಂದೂರು, ಬ್ರಹ್ಮಾವರ ಹಾಗೂ ಕುಂದಾಪುರಗಳಲ್ಲಿ ಕನ್ನಡ ಭವನ ನಿರ್ಮಿಸಲು ಚಂದ್ರಶೇಖರ ಹೊಳ್ಳ ಉದ್ದೇಶಿಸಿದ್ದಾರೆ.

ಉಡುಪಿ, ಬೈಂದೂರು ಹಾಗೂ ಬ್ರಹ್ಮಾವರಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಈಗಾಗಲೇ ನಿವೇಶನ ಗುರ್ತಿಸಲಾಗಿದೆ. ನಿವೇಶನ ಗುರ್ತಿಸುವ ಕಾರ್ಯ ಮುಗಿದ ನಂತರ ಉಳಿದ ಕೇಂದ್ರಗಳಲ್ಲೂ ಕನ್ನಡ ಭವನ ನಿರ್ಮಾಣ ಆರಂಭಿಸಲಾಗುವುದು. ಸರ್ಕಾರದಿಂದ ಭೂಮಿಯನ್ನು ಪಡೆಯಲು ಪ್ರಯತ್ನಿಸಲಾಗುವುದು. ಸರ್ಕಾರಿ ಭೂಮಿ ಸಿಗದಿದ್ದರೆ ದಾನಿಗಳ ನೆರವಿನಿಂದ ಖಾಸಗಿ ಭೂಮಿಯನ್ನು ಕೊಳ್ಳಲಾಗುವುದು ಎಂದು ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತಿಗೆ ಸಿಕ್ಕ ಹೊಳ್ಳ ಹೇಳಿದರು.

ಕನ್ನಡ ಭವನ ನಿರ್ಮಾಣ, ನಿವೇಶನಗಳ ಗುರ್ತಿಸಲಿಕ್ಕಾಗಿ ಸಮಿತಿಯಾಂದನ್ನು ರಚಿಸಲಾಗಿದೆ. ಪ್ರತಿಯಾಂದು ಕನ್ನಡ ಭವನದ ನಿರ್ಮಾಣಕ್ಕೆ 7ರಿಂದ 8 ಲಕ್ಷ ರುಪಾಯಿ ಖರ್ಚು ತಗುಲಲಿದೆ ಎಂದರು.

ಜಿಲ್ಲೆಯ ಇತಿಹಾಸ, ಸಂಸ್ಕೃತಿಯ ಅಧ್ಯಯನ ಹಾಗೂ ಪ್ರಚಾರಕ್ಕೆ ಸಾಹಿತ್ಯ ಪರಿಷತ್‌ ಒತ್ತು ನೀಡುವುದು. ಅಂತೆಯೇ ಎಲೆಮರೆ ಕಾಯಿಯಂತಿರುವ ಜಿಲ್ಲಾ ಸಾಹಿತಿಗಳ ಪ್ರೋತ್ಸಾಹಕ್ಕೂ ಪರಿಷತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ತಮ್ಮ ಕನಸುಗಳನ್ನು ಹೊಳ್ಳ ಹಂಚಿಕೊಂಡರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more