• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೌಲ್ಯಾಧಾರಿತ ರಾಜಕಾರಣಕ್ಕೆ ಮತ್ತೊಂದು ಹೆಸರು ರಾಮಕೃಷ್ಣ ಹೆಗಡೆ

By Staff
|

ಮೌಲ್ಯಾಧಾರಿತ ರಾಜಕಾರಣಕ್ಕೆ ಮತ್ತೊಂದು ಹೆಸರು ರಾಮಕೃಷ್ಣ ಹೆಗಡೆ

ಧಾರವಾಡ ವಿವಿಯಲ್ಲಿ ಹೆಗಡೆ ಕುರಿತು ಅಧ್ಯಯನ ಪೀಠಕ್ಕೆ ಒತ್ತಾಯ, ಸವಿನೆನಪು ಅನಾವರಣ

ಬೆಂಗಳೂರು : ರಾಮಕೃಷ್ಣ ಹೆಗಡೆ ಎಂದಿಗೂ ಅವಕಾಶವಾದಿ ರಾಜಕಾರಣ ಮಾಡಿದವರಲ್ಲ. ಸಂಘರ್ಷದ ಹಾದಿ ತುಳಿದು ಮೇಲೆ ಬಂದಿದ್ದ ಹೆಗಡೆ, ಜಾತಿ ಲೆಕ್ಕಾಚಾರಗಳನ್ನು ಇಟ್ಟುಕೊಂಡಿರಲಿಲ್ಲ ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ(ಜ.12) ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರ ಮೊದಲ ವರ್ಷದ ಪುಣ್ಯತಿಥಿ ಸಮಾರಂಭವನ್ನು ಆಯೋಜಿಸಿತ್ತು. ಸಮಾರಂಭದಲ್ಲಿ ಹೆಗಡೆ ಬದುಕು-ಸಾಧನೆ ಬಿಂಬಿಸುವ ‘ಸವಿ ನೆನಪು’ ಸಂಸ್ಮರಣ ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಂದಾಯ ಸಚಿವ ಎಂ.ಪಿ.ಪ್ರಕಾಶ್‌ ಮಾತನಾಡಿ, ವಿನೋಬಾ ಭಾವೆ ಆಶ್ರಮದಲ್ಲಿದ್ದಾಗ ಹೆಗಡೆ ಹಳ್ಳಿಗರ ಅಮೇಧ್ಯವನ್ನು ಎತ್ತಬೇಕಾಗಿತ್ತು. ಇದರಿಂದ ನನ್ನಲ್ಲಿನ ಬ್ರಾಹ್ಮಣತ್ವ, ವಿದ್ಯೆ, ಸೌಂದರ್ಯದ ಹುಸಿ ಅಹಂಕಾರ ಹೋಗಲು ಸಹಾಯವಾಯಿತೆಂದು ಅವರು ಹೇಳುತ್ತಿದ್ದರು ಎಂದು ನೆನಪಿಸಿಕೊಂಡರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್‌.ಅನಂತ ಮೂರ್ತಿ, ಮಾಜಿ ಸಚಿವ ಬಿ.ಸೋಮಶೇಖರ್‌, ಅರುಂಧತಿನಾಗ್‌, ಕೇಂದ್ರ ಸಚಿವ ಎಂ.ವಿ.ರಾಜಶೇಖರನ್‌, ಶಕುಂತಲಾ ಹೆಗಡೆ, ಭರತ್‌ ಹೆಗಡೆ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಆಗ್ರಹ: ರಾಮಕೃಷ್ಣ ಹೆಗಡೆ ಕುರಿತು ಅಧ್ಯಯನ ನಡೆಸಲು ಧಾರವಾಡದ ವಿಶ್ವವಿದ್ಯಾನಿಲಯದಲ್ಲಿ ಪೀಠವೊಂದನ್ನು ಅನುಷ್ಠಾನಗೊಳಿಸುವ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಕೂಡಲೇ ಪೀಠ ಸ್ಥಾಪನೆಗೆ ಸರಕಾರ ಮುಂದಾಗ ಬೇಕೆಂದು ಹೆಗಡೆ ಅಭಿಮಾನಿಗಲು ಆಗ್ರಹಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more