• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಸಿಡಿ/ ಸಿ.ಡಿ.ಯಲ್ಲಿ ದಾಸ ಶ್ರೇಷ್ಠ ಪುರಂದರರ ಬದುಕು-ಬರಹದ ಚಿತ್ರ

By Staff
|

ವಿಸಿಡಿ/ ಸಿ.ಡಿ.ಯಲ್ಲಿ ದಾಸ ಶ್ರೇಷ್ಠ ಪುರಂದರರ ಬದುಕು-ಬರಹದ ಚಿತ್ರ

ಜ.16- ಗಾಯನ ಸಮಾಜದಲ್ಲಿ ರಾಜ್ಯಪಾಲ ಚತುರ್ವೇದಿ ಅವರಿಂದ ಸಿಡಿ ಅನಾವರಣ

ಬೆಂಗಳೂರು: ದಾಸರಲ್ಲಿ ಅಗ್ರಗಣ್ಯರಾದ ಪುರಂದರದಾಸರನ್ನು ಜನಮಾನಸದಲ್ಲಿ ಮತ್ತಷ್ಟು ಆತ್ಮೀಯಗೊಳಿಸುವ ಪ್ರಯತ್ನವಿದು. ಪ್ರಪ್ರಥಮ ಬಾರಿಗೆ ಪುರಂದರದಾಸರ ಬರಹ-ಬದುಕನ್ನು ಬಿಂಬಿಸುವ ಚಿತ್ರದ ಅನಿಮೇಟೆಡ್‌ ವಿಸಿಡಿ/ಸಿಡಿ ರ್ಯಾಮ್‌ಗಳನ್ನು ರೂಪಿಸಲಾಗಿದೆ.

ಬೆಂಗಳೂರಿನ ಕೆ.ಆರ್‌.ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ ಭಾನುವಾರ(ಜ.16) ಬೆಳಗ್ಗೆ 10ಗಂಟೆಗೆ ವಿಸಿಡಿಯನ್ನು ರಾಜ್ಯಪಾಲ ಚತುರ್ವೇದಿ ಬಿಡುಗಡೆ ಮಾಡುವರು. ಸಂತ ಭದ್ರಗಿರಿ ಅಚ್ಯುತದಾಸರು, ಸಂಗೀತ ಕಲಾನಿಧಿ ಡಾ.ಆರ್‌.ಕೆ.ಶ್ರೀಕಂಠನ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

‘ದಾಸರೆಂದರೆ...ಪುರಂದರ ದಾಸರಯ್ಯ’ ವಿಸಿಡಿಯನ್ನು ಜಯನಗರದ ಶ್ರೀ ಪುರಂದರಗಾನ ವೈಭವ ಮತ್ತು ಮೀಡಿಯಾಟೆಕ್‌ ಐ ಸೊಲ್ಯೂಷನ್ಸ್‌ ಪ್ರೆೃವೆಟ್‌ ಲಿಮಿಟೆಡ್‌ ಹೊರತಂದಿದೆ ಎಂದು ಎಸ್‌.ವೇಣುಗೋಪಾಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

53 ನಿಮಿಷಗಳ ಅನಿಮೇಷನ್‌ ಚಲನಚಿತ್ರದಲ್ಲಿ 22 ದಾಸರ ಹಾಡುಗಳಿವೆ. ದಾಸರ ಪದಗಳಿಗೆ ತಮ್ಮ ಶ್ರೀಮಂತ ಕಂಠದಿಂದ ವಿದ್ವಾನ್‌ ವಿದ್ಯಾಭೂಷಣ್‌, ವಿದ್ವಾನ್‌ ಎಸ್‌.ಶಂಕರ್‌, ವಿದುಷಿ ಕಲಾವತಿ ಅವಧೂತ್‌ ಜೀವ ತುಂಬಿದ್ದಾರೆ. ಎಸ್‌.ಕೃಷ್ಣ ಮೂರ್ತಿ ಚಿತ್ರಕತೆ ಮತ್ತು ಸಂಗೀತ ಒದಗಿಸಿದ್ದಾರೆ. ಪುರಂದರದಾಸರ ಅರ್ಥಭರಿತ ತತ್ವಪದಗಳನ್ನು ಸಹೃದಯರಿಗೆ ಹೊಸ ಮಾಧ್ಯಮದ ಮೂಲಕ ತಲುಪಿಸುವ ಪ್ರಯತ್ನ ಇದಾಗಿದೆ.

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ : 9845518495, 080-26639752. 080-23392426 ಸಂಪರ್ಕಿಸಬಹುದು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more