ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಚಿಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ಜನವರಿ 20 ಕ್ಕೆ ವಿಚಾರಣೆ

By Staff
|
Google Oneindia Kannada News

ಕಂಚಿಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ಜನವರಿ 20 ಕ್ಕೆ ವಿಚಾರಣೆ
ಕಂಚಿ ಮಠದಲ್ಲಿ ಧನುರ್‌ಮಾಸದ ಪೂಜಾ ವಿಧಿ ಭಂಗ, ಮುರಿದು ಬಿದ್ದ 2500 ವರ್ಷದ ಇತಿಹಾಸ

ಚೆನ್ನೈ: ತಮ್ಮ ಮೇಲಿನ ಮೂರನೇ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಚಿ ಶ್ರೀ ಜಯೇಂದ್ರಸರಸ್ವತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಚೆನ್ನೈನ ಸೆಷನ್‌ ಕೋರ್ಟ್‌ ಜ.20ಕ್ಕೆ ಮುಂದೂಡಿದೆ.

ಶ್ರೀಗಳ ಪರವಾಗಿ ಕೆ.ಎಸ್‌.ದಿನಕರನ್‌, ಸರಕಾರದ ಪರವಾಗಿ ದೊರೈಸ್ವಾಮಿ ವಾದಿಸಿದರು. ವಿಚಾರಣೆಯನ್ನು ಬುಧವಾರ(ಜ.12)ನ್ಯಾಯಮೂರ್ತಿ ಪಿ.ಮುರುಗೇಶನ್‌ ಮುಂದೂಡಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಕಂಚಿ ದೇವಸ್ಥಾನದ ಅರ್ಚಕ ಮಾಧವನ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ಶ್ರೀಗಳನ್ನು ಅರೋಪಿಗಳೆಂದು ಗುರ್ತಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನಿಗೆ ಶ್ರೀಗಳು ಅರ್ಜಿಸಲ್ಲಿಸಿದ್ದರು.

ಶಂಕರರಾಮನ್‌ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕಂಚಿಶ್ರೀಗಳಿಗೆ ಸುಪ್ರಿಂಕೋರ್ಟ್‌ ಜಾಮೀನು ನೀಡಿದೆ. ಜೈಲಿನಿಂದ ಹೊರಬಂದಿರುವ ಶ್ರೀಗಳನ್ನು, ಮತ್ತೊಂದು ಪ್ರಕರಣದಲ್ಲಿ ತಮಿಳುನಾಡು ಪೋಲೀಸರು ಮತ್ತೆ ಬಂಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಧನುರ್‌ ಮಾಸದ ಪೂಜೆ: ಸುಮಾರು 2500ವರ್ಷಗಳಿಂದ ನಿರಂತರವಾಗಿ ಕಂಚಿ ಮಠದಲ್ಲಿ ನಡೆದುಕೊಂಡು ಬಂದಿದ್ದ ಧನುರ್‌ ಮಾಸದ ಪೂಜಾವಿಧಿ ಮಂಗಳವಾರ ಸ್ಧಗಿತಗೊಂಡಿದೆ. ಕಂಚಿ ಪೀಠಾಧ್ಯಕ್ಷರು ಪೂಜಾವಿಧಿಗಳನ್ನು ನಡೆಸುವುದು ಇಲ್ಲಿ ಸಂಪ್ರದಾಯ. ಕೊಲೆ ಆರೋಪದಿಂದ ಜೈಲು ಸೇರಿದ್ದ ಹಿರಿಯ ಶ್ರೀಗಳಿಗೆ ಮಠ ಪ್ರವೇಶಿಸದಂತೆ ಸುಪ್ರಿಂಕೋರ್ಟ್‌ ನಿರ್ಬಂಧ ವಿಧಿಸಿದೆ. ಅವರ ಅನುಪಸ್ಥಿತಿಯಲ್ಲಿ ಕಿರಿಯ ಶ್ರೀ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಧನುರ್‌ ಮಾಸದ ಪೂಜೆಗೆ ಚಾಲನೆ ನೀಡಿದ್ದರು.

ಶಂಕರರಾಮನ್‌ ಕೊಲೆ ಪ್ರಕರಣದ ವಿಚಾರಣೆಗೆಂದು ಕಿರಿಯ ಶ್ರೀಗಳನ್ನು ಜ.10ರಂದು ಪೋಲೀಸರು ಬಂಧಿಸಿದ್ದರು. ಇಬ್ಬರು ಶ್ರೀಗಳ ಅನುಪಸ್ಥಿತಿಯಿಂದ ಕಂಚಿಮಠದಲ್ಲಿ ಧನುರ್‌ಮಾಸದ ಪೂಜೆಗೆ ಭಂಗ ಉಂಟಾಗಿದೆ.

ಮಠಕ್ಕೆ ಐವತ್ತು ಕಿ.ಮೀ.ದೂರದಲ್ಲಿನ ಕಲವೈನಲ್ಲಿ ತಂಗಿರುವ ಶ್ರೀಜಯೇಂದ್ರ ಸರಸ್ವತಿ ಸ್ವಾಮೀಜಿ, ಧನುರ್‌ಮಾಸದ ಪೂಜೆಯನ್ನು ಅಲ್ಲಿಯೇ ಪ್ರಾರಂಭಿಸಿದ್ದಾರೆ. ಅವರ ದರ್ಶನಕ್ಕೆ ನೂರಾರು ಜನರು ಆಗಮಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ

ಮರು ಪರಿಶೀಲನೆ ಅರ್ಜಿ: ಶಂಕರರಾಮನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಚಿಶ್ರೀಗಳಿಗೆ ಜಾಮೀನು ನೀಡಿರುವುದರಿಂದ, ತನಿಖೆಗೆ ತೊಂದರೆಯಾಗುತ್ತಿದೆ. ಜಾಮೀನು ನೀಡಿಕೆಯ ತೀರ್ಪನ್ನು ಮರು ಪರಿಶೀಲಿಸುವಂತೆ ಬುಧವಾರ ತಮಿಳುನಾಡು ಪೋಲೀಸರು ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X