ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಕೃಷ್ಣ ದೇವಾಲಯ ಸ್ವಾಧೀನಕ್ಕೆ ಸರಕಾರ ಕ್ರಮ -ಸಿದ್ಧರಾಮಯ್ಯ

By Staff
|
Google Oneindia Kannada News

ಉಡುಪಿ ಕೃಷ್ಣ ದೇವಾಲಯ ಸ್ವಾಧೀನಕ್ಕೆ ಸರಕಾರ ಕ್ರಮ -ಸಿದ್ಧರಾಮಯ್ಯ
ಸತ್ಯಶೋಧನಾ ಸಮಿತಿ ವರದಿಯನ್ನು ತಿಪ್ಪೆಗೆ ಎಸೆಯಿರಿ-ಕುರುಬರ ಬೃಹತ್‌ ರ್ಯಾಲಿ

ಬೆಂಗಳೂರು : ಉಡುಪಿಯ ಶ್ರೀಕೃಷ್ಣ ದೇವಾಲಯ ಸಾರ್ವಜನಿಕ ಆಸ್ತಿ. ಅದಕ್ಕೂ ಅಷ್ಟ ಮಠಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸುಪ್ರಿಂಕೋರ್ಟ್‌ ತಿಳಿಸಿದೆ. ಮುಜರಾಯಿ ಇಲಾಖೆಗೆ ಸೇರಿರುವ ದೇವಸ್ಥಾನವನ್ನು ಸ್ವಾಧೀನ ಪಡಿಸಿಕೊಂಡು, ಆಡಳಿತಾಧಿಕಾರಿ ನೇಮಕಕ್ಕೆ ಸರಕಾರ ಮುಂದಾಗಲಿದೆ ಎಂದು ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ನಗರದ ಆರಮನೆ ಮೈದಾನದಲ್ಲಿ ಕರ್ನಾಟಕ ಕುರುಬರ ಸಂಘ, ಕನಕಗೋಪುರ ಧ್ವಂಸವನ್ನು ಖಂಡಿಸಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಕನಕಗೋಪುರ ಧ್ವಂಸದಿಂದ ಕುರುಬ ಜನಾಂಗಕ್ಕೆ ಮಾತ್ರವಲ್ಲ, ಇಡೀ ಶೋಷಿತ ಜನಾಂಗಕ್ಕೆ ಅವಮಾನವಾಗಿದೆ. ಇಂತಹ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಚಿತ್ರದುರ್ಗದ ಶಿವಮೂರ್ತಿ ಮುರುಘ ರಾಜೇಂದ್ರ ಶರಣರು ಮಾತನಾಡಿ, ಕನಕ ಗೋಪುರದ ಪುನರ್‌ ನಿರ್ಮಾಣಕ್ಕೆ ಎಲ್ಲರೂ ಸಂಘಟಿತ ಹೋರಾಟಕ್ಕೆ ಕೈಜೋಡಿಸಬೇಕು. ದಲಿತರು ಮತ್ತು ಅಲ್ಪ ಸಂಖ್ಯಾತರ ಮಠ ಸ್ಥಾಪನೆಗೆ ಮುಂದಾದರೆ, ನಮ್ಮ ಮಠ ಚಿತ್ರದುರ್ಗ ಜಿಲ್ಲೆಯಲ್ಲಿ ಭೂಮಿ ನೀಡಲಿದೆ. ದಲಿತರ ಮೇಲಿನ ದಬ್ಬಾಳಿಕೆ ಕೊನೆಯಾಗ ಬೇಕು ಎಂದು ಅಭಿಪ್ರಾಯಪಟ್ಟರು.

ಕಾಗಿನೆಲೆ ಬೀರೇಂದ್ರ ತಾರಕನಂದಪುರಿ ಸ್ವಾಮೀಜಿ ಸಮಾವೇಶದ ದಿವ್ಯಸಾನಿಧ್ಯವಹಿಸಿದ್ದರು. ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಡಾ.ವೈ ನಾಗಪ್ಪ, ಮಾಜಿ ಸಚಿವ ಎಚ್‌.ವಿಶ್ವನಾಥ್‌, ಮಾಜಿ ಸಂಸದ ಸಿ.ಕೆ.ಜಾಫರ್‌ ಷರೀಫ್‌, ಪತ್ರಕರ್ತೆ ಗೌರಿಲಂಕೇಶ್‌ ಮತ್ತಿತರರು ಹಾಜರಿದ್ದರು.

ಮತ್ತೆ ಕನಕ ವಿವಾದ: ಕನಕ ಗೋಪುರದ ಹಿನ್ನೆಲೆ ಬಗ್ಗೆ ಸಾಮರಸ್ಯ ವೇದಿಕೆ ರಚಿಸಿದ್ದ ಸತ್ಯಶೋಧನಾ ಸಮಿತಿ ವರದಿ ಈಗ ವಿವಾದಕ್ಕೆ ಕಾರಣವಾಗಿದೆ. ಹಿಂದೆ ಕನಕ ಗೋಪುರ ಇರಲಿಲ್ಲ. ಕೃಷ್ಣ ದೇವಾಲಯ ಮತ್ತು ಕನಕಗೋಪುರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದೆ ಸಮಿತಿಯ ವರದಿ.

ಸಮಿತಿಯ ವರದಿಗೆ ಬದ್ಧರಾಗಿರುವುದಾಗಿ ಅಷ್ಟ ಮಠಗಳು ತಿಳಿಸಿದ್ದರೆ, ಈ ಸಮಿತಿಯ ವರದಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಕುರುಬ ಸಮುದಾಯ ಹೇಳಿದೆ. ನೀವು ಏನನ್ನುತ್ತೀರಿ?

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X