ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಟಿಡಿ, ಐಎಸ್‌ಡಿ ದರ ಕಡಿತ- ಟ್ರಾಯ್‌ ಹೊಸವರ್ಷ ಕೊಡುಗೆ

By Staff
|
Google Oneindia Kannada News

ಎಸ್‌ಟಿಡಿ, ಐಎಸ್‌ಡಿ ದರ ಕಡಿತ- ಟ್ರಾಯ್‌ ಹೊಸವರ್ಷ ಕೊಡುಗೆ
ದೂರದ ಕರೆಗಳಿಗೆ ಅರ್ಧಕ್ಕರ್ಧ ದರ ಕಡಿತ, ಸ್ಥಳೀಯ ಕರೆಗಳ ದರದಲ್ಲಿ ವ್ಯತ್ಯಾಸವಿಲ್ಲ

ಬೆಂಗಳೂರು : ಎಸ್‌ಟಿಡಿ, ಐಎಸ್‌ಡಿ ಬಳಸುವ ಗ್ರಾಹಕರಿಗೆ ನಿಜಕ್ಕೂ ಹೊಸವರ್ಷ ಹಿತಾನುಭವ ನೀಡಲಿದೆ. ಟ್ರಾಯ್‌ ದೂರದ ಕರೆಗಳಿಗೆ ಎಡಿಸಿ ಶುಲ್ಕವನ್ನು ಕಡಿತಗೊಳಿಸುವಂತೆ ಬಿಎಸ್‌ಎನ್‌ಎಲ್‌ಗೆ ಸೂಚಿಸಿದೆ. ಆ ಪರಿಣಾಮ ಎಸ್‌ಟಿಡಿ ದರ ಪಲ್ಸ್‌ಗೆ 80ಪೈಸೆಯಿಂದ 30ಪೈಸೆಗೆ, ಐಎಸ್‌ಡಿ ದರ ರೂ. 4.25 ಪೈಸೆಯಿಂದ ರೂ. 2.50 ಕಡಿಮೆಯಾಗುವ ಸಾಧ್ಯತೆಗಳಿವೆ.

ಗ್ರಾಮೀಣ ಭಾಗಗಳ ಕಾರ್ಯಚರಣೆಗಾಗಿ ಖಾಸಗಿ ದೂರವಾಣಿ ನಿರ್ವಾಹಕರು, ಬಿಎಸ್‌ಎನ್‌ಎಲ್‌ಗೆ ನೀಡುತ್ತಿರುವ ಆಕ್ಸೆಸ್‌ ಡೆಫಿಸಿಟ್‌ ಚಾರ್ಚ್‌(ಎಡಿಸಿ)ಶುಲ್ಕದಲ್ಲಿ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಕಡಿತ ಮಾಡಿದೆ. ಶುಲ್ಕದ ಇಳಿಕೆಯಿಂದ ಉಂಟಾಗುವ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಖಾಸಗಿ ದೂರವಾಣಿ ಕಂಪನಿಗಳು ಮುಂದಾಗಿವೆ.

ಫೆ.1ರಿಂದ ಈ ರಿಯಾಯಿತಿ ಗ್ರಾಹಕರಿಗೆ ದಕ್ಕಲಿದೆ. ಸ್ಥಳೀಯ ಕರೆಗಳಿಗೆ ವಿಧಿಸುವ ಎಡಿಸಿಯಲ್ಲಿ ಯಾವುದೇ ಕಡಿತವಾಗಿಲ್ಲ , ವ್ಯತ್ಯಾಸವಿಲ್ಲ. ಹೀಗಾಗಿ ಸೆಲ್‌ನಿಂದ ಸೆಲ್‌ಗೆ, ಸೆಲ್‌ನಿಂದ ಸ್ಥಿರ ದೂರವಾಣಿಗೆ, ಸ್ಥಿರ ದೂರವಾಣಿಯಿಂದ ಸೆಲ್‌ಫೋನ್‌ಗೆ ಮಾಡುವ ಸ್ಥಳೀಯ ಕರೆಗಳ ದರದಲ್ಲಿ ಯಾವುದೇ ವ್ಯತ್ಯಾಸಗಳಿರುವುದಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X