• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಸುನಾಮಿ ಪರಿಣಾಮ 5,322 ಕೋಟಿ ರೂ. ಆರ್ಥಿಕ ನಷ್ಟ

By Staff
|

ಭಾರತದಲ್ಲಿ ಸುನಾಮಿ ಪರಿಣಾಮ 5,322 ಕೋಟಿ ರೂ. ಆರ್ಥಿಕ ನಷ್ಟ

ಅಂಡಮಾನ್‌ ನಿಕೋಬಾರ್‌ನಲ್ಲಿ ಮುಂದುವರೆದ ಅಂದಾಜು ಪ್ರಕ್ರಿಯೆ-ಗೃಹಇಲಾಖೆ ವರದಿ

ನವದೆಹಲಿ : ಭೂಮಿ ನಡುಕ ಕಡಿಮೆಯಾಗಿದ್ದು, ಕಡಲು ಶಾಂತಗೊಂಡಿದೆ. ಸುನಾಮಿ ಪರಿಣಾಮವನ್ನು, ಅದು ಉಂಟು ಮಾಡಿದ ಆರ್ಥಿಕ ನಷ್ಟವನ್ನು ಕೇಂದ್ರ ಸರಕಾರ ಅಂದಾಜು ಮಾಡಿದೆ. ಡಿ.26ರ ಸುನಾಮಿ ಅಬ್ಬರದಿಂದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಪಾಂಡಿಚೇರಿಗಳಲ್ಲಿ ಸುಮಾರು 5,322.05 ಕೋಟಿ ರೂ.ನಷ್ಟವಾಗಿದೆ. 9,682 ಮಂದಿ ಸಾವನ್ನಪ್ಪಿದ್ದಾರೆ.

ಕೇಂದ್ರ ಗೃಹ ಇಲಾಖೆ ಗುರುವಾರ(ಜ.6)ಪ್ರಕಟಿಸಿದ ಆರಂಭಿಕ ಅಂದಾಜಿನ ವರದಿಯ ಪ್ರಕಾರ, ತಮಿಳುನಾಡಿನಲ್ಲಿ 2730.70ಕೋಟಿ, ಆಂಧ್ರಪ್ರದೇಶದಲ್ಲಿ 720.72ಕೋಟಿ, ಕೇರಳದಲ್ಲಿ 1358.62ಕೋಟಿ, ಪಾಂಡಿಚೇರಿಯಲ್ಲಿ 512ಕೋಟಿ ಸೇರಿದಂತೆ ಒಟ್ಟಾರೇ ಆಗಿರುವ ಆರ್ಥಿಕ ನಷ್ಟ 1.18 ಬಿಲಿಯನ್‌ ಡಾಲರ್‌ ಎನ್ನಲಾಗಿದೆ.

ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಇನ್ನು ನಷ್ಟದ ಅಂದಾಜು ಕಾರ್ಯ ಮುಗಿದಿಲ್ಲ. ಶ್ರೀಲಂಕ, ಮಾಲ್ಡೀವ್ಸ್‌ , ಥೈಲ್ಯಾಂಡ್‌ ಮತ್ತು ಇಂಡೋನೇಷ್ಯಾದಲ್ಲಿ ಭಾರತದ ಹನ್ನೆರಡು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 12-15 ಭಾರತೀಯರು ಶ್ರೀಲಂಕಾದಲ್ಲಿ ನಾಪತ್ತೆಯಾಗಿದ್ದಾರೆ. ಸುನಾಮಿ ಅನಾಹುತದಿಂದ 6,011ಮಂದಿ ನಾಪತ್ತೆಯಾಗಿದ್ದಾರೆಂದು ವರದಿ ತಿಳಿಸಿದೆ.

ಪರಿಹಾರ : ಸಂತ್ರಸ್ತ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳು ಬಿರುಸಾಗಿವೆ. 1922.20 ಮೆಟ್ರಿಕ್‌ಟನ್‌ ಪರಿಹಾರ ಸಾಮಾಗ್ರಿಗಳನ್ನು ಅಂಡಮಾನ್‌ ಮತ್ತು ನಿಕೋಬಾರ್‌ಗೆ ಕೇಂದ್ರ ರವಾನಿಸಲಾಗಿದೆ. 499.90ಮೆಟ್ರಿಕ್‌ಟನ್‌ ಆಹಾರ, 486.14 ಮೆಟ್ರಿಕ್‌ಲೀಟರ್‌ ಕುಡಿಯುವ ನೀರು, 104.24ಮೆಟ್ರಿಕ್‌ ಟನ್‌ ಔಷಧಿಗಳನ್ನು ಕಳುಹಿಸಲಾಗಿದೆ. 10,045 ಟೆಂಟ್‌ಗಳು, 25,562 ಟಾರ್ಚ್‌ಗಳು, 715 ಜನರೇಟರ್‌ ಮತ್ತು 82 ಪಂಪ್‌ಸೆಟ್‌ಗಳನ್ನು ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.

ಸುನಾಮಿ ರುದ್ರನರ್ತನದಿಂದ ನಾಪತ್ತೆಯಾದವರನ್ನು ಹಾಗೂ ಶವಗಳನ್ನು ಪತ್ತೆ ಹಚ್ಚಲು ಶ್ವಾನಗಳ ನೆರವನ್ನು ಬಳಸಿಕೊಳ್ಳಲಾಗುತ್ತಿದೆ. ಮಾನಸಿಕವಾಗಿ ಆಘಾತಕ್ಕೆ ಒಳಗಾದವರಿಗೆ ಮಾನಸಿಕತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಬಲಿಯಾದವರ ಲೆಕ್ಕ : ಗುರುವಾರ ಲಭ್ಯವಾಗಿರುವ ಅಧಿಕೃತ ವರದಿಗಳ ಪ್ರಕಾರ ಭೂಕಂಪ ಮತ್ತು ಸುನಾಮಿಯಿಂದ ಸತ್ತವರ ಸಂಖ್ಯೆ 1,46,000.

ಇಂಡೋನೇಷ್ಯಾದಲ್ಲಿ 94,200 ಮಂದಿ ಸಾವನ್ನಪ್ಪಿದ್ದು 6,700 ಮಂದಿ ನಾಪತ್ತೆಯಾಗಿದ್ದಾರೆ. ಶ್ರೀಲಂಕದಲ್ಲಿ 30,513,ಥೈಲ್ಯಾಂಡ್‌ನಲ್ಲಿ 5,288,ಮಾಯನ್ನಾರ್‌ನಲ್ಲಿ 59, ಮಾಲ್ಡೀವ್ಸ್‌ನಲ್ಲಿ 82, ಮಲೇಷ್ಯಾದಲ್ಲಿ 68ಮಂದಿ ಸುನಾಮಿಗೆ ಬಲಿಯಾಗಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more