ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮ ಕಾಲದಲ್ಲಾದರೂ ಗೋವಾ ಯೋಧರಿಗೆ ಪಿಂಚಣಿ ಸಿಗುತ್ತಾ?

By Staff
|
Google Oneindia Kannada News

ಧರ್ಮ ಕಾಲದಲ್ಲಾದರೂ ಗೋವಾ ಯೋಧರಿಗೆ ಪಿಂಚಣಿ ಸಿಗುತ್ತಾ?
ಚಳವಳಿಕಾರರ ಸಂಘದಿಂದ ಪಿಂಚಣಿಗಾಗಿ ಪ್ರದರ್ಶನ

ಬೆಳಗಾವಿ : ಪೋರ್ಚುಗೀಸರ ಆಳ್ವಿಕೆಯಿಂದ ಗೋವಾ ವಿಮೋಚನೆಗೆ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡಬೇಕೆಂದು ಕರ್ನಾಟಕ ಗೋವಾ ಸ್ವಾತಂತ್ರ್ಯ ಹೋರಾಟಗಾರರ ಸಂಘ ಹಾಗೂ ಬೈಲಹೊಂಗಲದ ಗೋವಾ ವಿಮೋಚನಾ ಚಳವಳಿಕಾರರ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.

ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜನವರಿ 5ರಂದು ಪ್ರದರ್ಶನ ನಡೆಸಿದ ಎರಡೂ ಸಂಸ್ಥೆಗಳ ಪ್ರತಿನಿಧಿಗಳು ಗೋವಾ ಸ್ವಾತಂತ್ರ್ಯ ಚಳವಳಿಕಾರರಿಗೆ ಸರ್ಕಾರ ಪಿಂಚಣಿ ನೀಡಬೇಕೆಂದು ಆಗ್ರಹಿಸಿದರು.

ಜೀವದ ಹಂಗು ತೊರೆದು ಚಳವಳಿಕಾರರು ಗೋವಾ ವಿಮೋಚನೆಗಾಗಿ ಹೋರಾಡಿದ್ದಾರೆ. 1955ರ ಆಗಸ್ಟ್‌ 9ರಂದು ಗೋವಾದ ಕೊಂಕಣದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಪೋರ್ಚುಗೀಸರಿಂದ ಪೆಟ್ಟನ್ನೂ ತಿಂದಿದ್ದಾರೆ. ಈ ಯೋಧರನ್ನು ಸರ್ಕಾರ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಪ್ರದರ್ಶನದ ಮುಂಚೂಣಿಯಲ್ಲಿದ್ದ ಸುರೇಂದ್ರ ಅವಲಕ್ಕಿ ಹೇಳಿದರು.

1990ರಲ್ಲಿ ಆಗಿನ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ 2200 ಮಂದಿಗೆ ಪಿಂಚಣಿ ಮಂಜೂರು ಮಾಡಿದ್ದರು. ಆದರೆ ಮುಖ್ಯ ಕಾರ್ಯದರ್ಶಿಗಳ ಕಾರ್ಯಾಲಯ ಪಿಂಚಣಿ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿತು. ಅಂದಿನಿಂದ ನೆನೆಗುದಿಗೆ ಬಿದ್ದಿರುವ ಪಿಂಚಣಿ ಪ್ರಸ್ತಾಪಕ್ಕೆ ಜೀವ ಬಂದಿಲ್ಲ . ಎಸ್ಸೆಂ.ಕೃಷ್ಣರ ಕಾಲದಲ್ಲಿ ಮನವಿ ಸಲ್ಲಿಸಿದ್ದೇ ಬಂತು, ಉಪಯೋಗವಾಗಲಿಲ್ಲ ಎಂದು ಸುರೇಂದ್ರ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X