ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ರೂ.ಗೆ ಪಹಣೆ ಪತ್ರ, ರಾಜ್ಯದಿ 36 ತಾಲೂಕುಗಳ ರಚನೆಗೆ ಯತ್ನ

By Staff
|
Google Oneindia Kannada News

ಐದು ರೂ.ಗೆ ಪಹಣೆ ಪತ್ರ, ರಾಜ್ಯದಿ 36 ತಾಲೂಕುಗಳ ರಚನೆಗೆ ಯತ್ನ
ಚೆನ್ನಮ್ಮನ ಕಿತ್ತೂರು ತಾಲೂಕಾಗಿ ರೂಪುಗೊಳ್ಳಲಿದೆ....

ಹುಕ್ಕೇರಿ(ಬೆಳಗಾವಿ ಜಿಲ್ಲೆ): ಜನರ ಬೇಡಿಕೆಗಳಿಗೆ ಸ್ಪಂದಿಸಿ ಮತ್ತು ಆಡಳಿತವನ್ನು ಸುಗಮಗೊಳಿಸಲು, ವರ್ಷದೊಳಗೆ 36 ಹೊಸ ತಾಲೂಕುಗಳನ್ನು ರಚಿಸುವ ಗುರಿ ಹೊಂದಲಾಗಿದೆ ಎಂದು ಕಂದಾಯ ಸಚಿವ ಎಂ.ಪಿ.ಪ್ರಕಾಶ್‌ ಹೇಳಿದರು.

ಹುಕ್ಕೇರಿಯಲ್ಲಿ ಮಿನಿವಿಧಾನಸೌಧವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಕಿತ್ತೂರು ಹೊಸ ತಾಲೂಕುಗಳಲ್ಲಿ ಒಂದಾಗಿದೆ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡನೆ ಪ್ರಕ್ರಿಯೆ ನಡೆಯುತ್ತಿದೆ. ಅದು ಮುಗಿದ ನಂತರ, ಹೊಸ ತಾಲೂಕು ರಚನೆಗೆ ಮುಂದಾಗುವುದಾಗಿ ಹೇಳಿದರು.

ವಿಶಿಷ್ಟ ಭೂಮಿ : ರಾಷ್ಟ್ರದಲ್ಲಿಯೇ ವಿನೂತನವಾದ ಭೂಮಿ ಯೋಜನೆಯನ್ನು ಕರ್ನಾಟಕದಲ್ಲಿ , ರಾಜ್ಯ ಸರಕಾರ ಪ್ರಪ್ರಥಮವಾಗಿ ಜಾರಿಗೆ ತಂದಿದೆ. ಈ ಪರಿಣಾಮ ಜಮೀನಿನ ಪಹಣೆಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುತ್ತಿವೆ. ರಾಜ್ಯದಲ್ಲಿ ಹೋಬಳಿಗೊಂದರಂತೆ ಭೂಮಿ ಕೇಂದ್ರಗಳನ್ನು ತೆರೆಯುವ ಉದ್ದೇಶವಿದೆ.

2000 ನಿರುದ್ಯೋಗಿ ಯುವಕರಿಗೆ ಕಂಪ್ಯೂಟರ್‌ ಮೂಲಕ ಪಹಣೆ ಪತ್ರವಿತರಿಸಲು ಲೈಸನ್ಸ್‌ ನೀಡಲಾಗುವುದು. ಪಹಣೆ ಪತ್ರವನ್ನು 15ರೂ.ನಿಂದ 10ರೂ.ಗೆ ಕಡಿಮೆ ಮಾಡಲಾಗಿತ್ತು. ಪಹಣೆ ಪತ್ರಗಳ ಹಿಂದೆ ಜಾಹೀರಾತು ಪ್ರಕಟಿಸಿ, ಆದಾಯ ಪಡೆಯಲಾಗುವುದು. ಮಾರ್ಚಿ ತಿಂಗಳಿನಿಂದ ಕೇವಲ ಐದು ರೂಪಾಯಿಗೆ ಪಹಣಿ ಪತ್ರ ವಿತರಿಸಲು ಸರಕಾರ ನಿರ್ಧರಿಸಿದೆ ಎಂದು ಎಂ.ಪಿ.ಪ್ರಕಾಶ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X