ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನೂನು ಇಲಾಖೆಯಲ್ಲಿ ಘಮಘಮಿಸಲಿದೆ ಕನ್ನಡ - ಎಚ್ಕೆ. ಪಾಟೀಲ್‌

By Staff
|
Google Oneindia Kannada News

ಕಾನೂನು ಇಲಾಖೆಯಲ್ಲಿ ಘಮಘಮಿಸಲಿದೆ ಕನ್ನಡ - ಎಚ್ಕೆ. ಪಾಟೀಲ್‌
ಇಲಾಖೆಯಲ್ಲಿ ಅತಿ ಕನಿಷ್ಟ ಮಟ್ಟದಲ್ಲಿ ಕನ್ನಡ ಬಳಕೆ, ಕನ್ನಡೀಕರಣದಿಂದ ಕಾನೂನು ಪ್ರಜ್ಞೆ

ಬೆಂಗಳೂರು : ಕಾನೂನು ಇಲಾಖೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕನ್ನಡಕ್ಕೆ ಜೀವ ತುಂಬಲಾಗುವುದು. ಇಲಾಖೆ ಆಡಳಿತದಲ್ಲಿ ಶೇ.100ರಷ್ಟು ಕನ್ನಡ ಬಳಕೆಯನ್ನು ಇಂದಿನಿಂದಲೇ ಜಾರಿಗೆ ತರಲು ಸಂಕಲ್ಪಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಇಲಾಖೆಗಳಿಗೆ ಹೋಲಿಸಿದರೆ ಕಾನೂನು ಇಲಾಖೆ ಕನ್ನಡ ಬಳಕೆಯಲ್ಲಿ ಸಾಕಷ್ಟು ಹಿಂದೆ ಬಿದ್ದಿದೆ. ಕನ್ನಡ ಬಳಕೆ ಮೂಲಕ ಜನರಲ್ಲಿ ಕಾನೂನು ಪ್ರಜ್ಞೆಯನ್ನು ಮೂಡಿಸಲಾಗುವುದು ಎಂದರು.

ಕನ್ನಡವನ್ನು 1976ರಲ್ಲಿ ಆಡಳಿತ ಭಾಷೆಯೆಂದು ಘೋಷಿಸಿದ್ದರೂ ಸಹ, ರಚನಾತ್ಮಕವಾಗಿ ಜಾರಿಗೆ ಬಂದಿಲ್ಲ. ಕಾನೂನು ಇಲಾಖೆಯ ಶಾಖಾಧಿಕಾರಿಗಳ ಮಟ್ಟದಲ್ಲಿ ಕನ್ನಡ ಜಾರಿ ಶೇ.42ರಷ್ಟು, ಅಧೀನ ಕಾರ್ಯದರ್ಶಿಗಳ ಮಟ್ಟದಲ್ಲಿ ಶೇ.33ರಷ್ಟು, ಅವರ ಕಾರ್ಯದರ್ಶಿಗಳ ಮಟ್ಟದಲ್ಲಿ ಶೇ.3.5ರಷ್ಟು ಕಡಿಮೆ ಪ್ರಮಾಣದಲ್ಲಿ ಕನ್ನಡ ಬಳಕೆಯಾಗುತ್ತಿದೆ. ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.

ಎಲ್ಲ ಹಂತಗಳಲ್ಲೂ ಸಂಪೂರ್ಣವಾಗಿ ಕನ್ನಡ ಅನುಷ್ಠಾನಕ್ಕೆ ಪ್ರಯತ್ನಗಳು ನಡೆದಿವೆ. ಕೇಂದ್ರ ಸರಕಾರ, ಸುಪ್ರಿಂಕೋರ್ಟ್‌ ಮತ್ತು ನೆರೆ ರಾಜ್ಯಗಳೊಂದಿಗೆ ವ್ಯವಹರಿಸುವ ಸಂದರ್ಭ ಹೊರತು ಪಡಿಸಿ, ಕಾನೂನು ಇಲಾಖೆಯಲ್ಲಿನ ಎಲ್ಲ ಆಡಳಿತ ಇನ್ನು ಮುಂದೆ ಕನ್ನಡದಲ್ಲಿಯೇ ನಡೆಯಲಿದೆ ಎಂದು ಎಚ್‌.ಕೆ.ಪಾಟೀಲ್‌ ಹೇಳಿದರು.

(ಇನ್ಪೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X