ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಹಬ್ಬದ ಸಡಗರದಲ್ಲಿ ಮಂಗಳೂರಿನ ಗಣಪತಿ ಮಾದರಿ ಶಾಲೆ

By Staff
|
Google Oneindia Kannada News

ಚಿನ್ನದ ಹಬ್ಬದ ಸಡಗರದಲ್ಲಿ ಮಂಗಳೂರಿನ ಗಣಪತಿ ಮಾದರಿ ಶಾಲೆ
ಕಳೆದ ಎಂಟು ವರ್ಷಗಳಿಂದಲೂ ಉಚಿತ ಮಧ್ಯಾಹ್ನದ ಊಟ

ಮಂಗಳೂರು : ಕಡಲ ನಗರಿಯ ಅತ್ಯಂತ ಹಳೆಯ ಶಾಲೆಗಳಲ್ಲೊಂದಾದ ಗಣಪತಿ ಉನ್ನತ ಪ್ರಾಥಮಿಕ ಶಾಲೆ ಪ್ರಸಕ್ತ ವರ್ಷದಲ್ಲಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ.

ಸುವರ್ಣ ಮಹೋತ್ಸವದ ಅಂಗವಾಗಿ ವರ್ಷ ಪೂರ್ತಿ ವಿವಿಧ ಚಟುವಟಿಕೆಗಳು ನಡೆಯಲಿದ್ದು , ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಜೆ. ಭಾಸ್ಕರಪ್ಪ ಚಿನ್ನದ ಹಬ್ಬದ ಆರಂಭಕ್ಕೆ ಇತ್ತೀಚೆಗೆ ಚಾಲನೆ ನೀಡಿದರು.

ಗಣಪತಿ ಉನ್ನತ ಪ್ರಾಥಮಿಕ ಶಾಲೆಯನ್ನು 135 ವರ್ಷಗಳ ಇತಿಹಾಸವಿರುವ ಸರಸ್ವತಿ ಶಿಕ್ಷಣ ಸಮಾಜ ನಡೆಸುತ್ತಿದೆ. 1955ರಲ್ಲಿ ಪ್ರಾರಂಭವಾದ ಗಣಪತಿ ಉನ್ನತ ಪ್ರಾಥಮಿಕ ಶಾಲೆ ಬಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾದಾನ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಪ್ರಾರಂಭವಾದುದು ಇತ್ತೀಚೆಗಾದರೂ, ಗಣಪತಿ ಉನ್ನತ ಪ್ರಾಥಮಿಕ ಶಾಲೆಯಲ್ಲಿ ಕಳೆದ ಎಂಟು ವರ್ಷಗಳಿಂದಲೂ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಸರ್ಕಾರಿ ನೆರವು ಪಡೆದಿಲ್ಲ ಎನ್ನುವುದು ಉಲ್ಲೇಖನೀಯ.

ಕನ್ನಡ ಶಾಲೆಯ ಮಕ್ಕಳಿಗೆ ಉಚಿತ ಕಂಪ್ಯೂಟರ್‌ ಕಲಿಕೆಯ ಅವಕಾಶವನ್ನೂ ಗಣಪತಿ ಉನ್ನತ ಪ್ರಾಥಮಿಕ ಶಾಲೆ ಕಲ್ಪಿಸಿದ್ದು , ಶಾಲಾ ಮಕ್ಕಳಿಗೆ ನಿಯಮಿತ ಆರೋಗ್ಯ ತಪಾಸಣೆ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X