• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಡಲ ಮಕ್ಕಳು ಮತ್ತೆ ಕಡಲಿಗೆ ಇಳಿದರು, ನಿಲ್ಲದ ಭೂತಾಯಿಯ ಕಂಪನ!

By Staff
|

ಕಡಲ ಮಕ್ಕಳು ಮತ್ತೆ ಕಡಲಿಗೆ ಇಳಿದರು, ನಿಲ್ಲದ ಭೂತಾಯಿಯ ಕಂಪನ!

ಚಪಾತಿ, ಹಳೆಯ ಬಟ್ಟೆಗೆ ಸಂತ್ರಸ್ತರಿಂದ ನಿರಾಕರಣೆ- ಶವಗಳ ತಿಂದ ಮೀನನ್ನು ತಿನ್ನುವುದೇ?

ನಾಗಪಟ್ಟಣಂ(ತಮಿಳುನಾಡು) : ತಮ್ಮವರನ್ನು ತಿಂದು ಬದುಕನ್ನು ಮೂರಾಬಟ್ಟೆ ಮಾಡಿದ್ದರೂ, ಮೀನುಗಾರರಿಗೆ ಕಡಲೇ ಬದುಕು. ಸುನಾಮಿ ಕೊಲೆಗಡುಕ ಅಲೆಗಳ ಅಬ್ಬರವಿಲ್ಲದೇ, ಸಮುದ್ರ ಈಗ ಶಾಂತಗೊಂಡಿದೆ. ಡಿ.26ರ ನಂತರ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಮಂಗಳವಾರ(ಜ.4)ಬೆಳಿಗ್ಗೆ ಕಡಲಿನ ಮಕ್ಕಳು, ಮೀನಿಗಾಗಿ ಸಮುದ್ರಕ್ಕಿಳಿದಿದ್ದಾರೆ.

ತುಸು ಆತ್ಮವಿಶ್ವಾಸದೊಂದಿಗೆ, ಮತ್ತೆ ಕಡಲು ಮುನಿಯುವುದಿಲ್ಲ ಎನ್ನುವ ಮೊಂಡು ಧೈರ್ಯದೊಂದಿಗೆ, ಹೊಟ್ಟೆಪಾಡಿಗಾಗಿ ಮೀನುಗಾರರು ತಮ್ಮ ದೈನಂದಿನ ಕೆಲಸವನ್ನು ಆರಂಭಿಸಿದ್ದಾರೆ. ಇಲ್ಲಿನ ಅಕ್ಕರೈಪೆಟ್ಟೈಎನ್ನುವ ಊರಿನಲ್ಲಿಯೇ ಸುಮಾರು 7000 ಮೀನುಗಾರರ ಕುಟುಂಬಗಳಿವೆ. ಅದರ ಸಮೀಪದ ಕೀಚಮ್‌ಕುಪ್ಪಂ ಒಣ ಮೀನುಗಳ ಮಾರಾಟಕ್ಕೆ ಪ್ರಖ್ಯಾತವಾಗಿದೆ.

ವಿಶೇಷವಾಗಿ ಉಪ್ಪಿನಕಾಯಿಗೆ ಬಳಕೆಯಾಗುವ ಒಣಮೀನುಗಳು ಮೀನುಗಾರರ ಹೊಟ್ಟೆಗೊಂದು ದಾರಿಯಾಗಿವೆ. ಪ್ರತಿ ತಿಂಗಳು ಸುಮಾರು ಒಂದು ಕೋಟಿ ವಹಿವಾಟು ಇಲ್ಲಿ ನಡೆಯುತ್ತದೆ. ಪ್ರಸ್ತುತ ಮೀನುಗಳ ಸಂಗ್ರಹವೆಲ್ಲ ಕೊಚ್ಚಿ ಹೋಗಿದೆ. ಮತ್ತೆ ಎಂದಿನಂತೆ ವ್ಯಾಪಾರ ಸುಧಾರಿಸಲು 2-3 ತಿಂಗಳು ಬೇಕು ಎನ್ನುತ್ತಾನೆ ಮೀನು ಮಾರಾಟಗಾರ ಮಾರಿಮುತ್ತು.

ಸುನಾಮಿ ರುದ್ರನರ್ತನಕ್ಕೆ ಸುಮಾರು 2500 ಮಂದಿ ಅಕ್ಕರೈಪೆಟ್ಟೈ ಮತ್ತು ಕೀಚಮ್‌ಕುಪ್ಪಂ ಹಳ್ಳಿಗಳಲ್ಲಿ ಸಾವನ್ನಪ್ಪಿದ್ದಾರೆ.

ಮೀನನ್ನು ಕೇಳೋರಿಲ್ಲ : ಶ್ರೀಲಂಕಾದಲ್ಲಿ ಮೀನುಗಾರರು ಮತ್ತೊಂದು ರೀತಿಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸುನಾಮಿಯಿಂದ ಸಮುದ್ರದ ಪಾಲಾದ ಸಾವಿರಾರು ಜನರ ಶವಗಳನ್ನು ಮೀನುಗಳು ತಿಂದಿರಬಹುದೆಂಬ ಶಂಕೆಯಿಂದ, ಜನರು ಮೀನು ಖರೀದಿಸಲು ಮೀನಾಮೇಷ ಎಣಿಸುತ್ತಿದ್ದಾರೆ.

ಹೊಸ ಬದುಕು : ಸಂತ್ರಸ್ತ ಪ್ರದೇಶಗಳಲ್ಲಿ ಹೊಸ ಬದುಕು ಕಟ್ಟುವ ಪ್ರಯತ್ನಗಳು ಬಿರುಸಿನಿಂದ ನಡೆಯುತ್ತಿವೆ. ಮೀನುಗಾರರ ಮುರಿದ ದೋಣಿಗಳನ್ನು ಸೇನೆಯ ಸಹಕಾರದೊಂದಿಗೆ ಬೆಂಗಳೂರು ಮೂಲದ ಮದ್ರಾಸ್‌ ಇಂಜಿನಿಯರಿಂಗ್‌ ಗ್ರೂಫ್ಸ್‌ ಸರಿಪಡಿಸುತ್ತಿದೆ. ಸೇನೆ ಮತ್ತು ಸ್ವಯಂ ಸೇವಕರು, ಸಂತ್ರಸ್ತ ಸ್ಥಳಗಳ ಸ್ವಚ್ಛಗೊಳಿಸುತ್ತಿದ್ದಾರೆ. ಅಲ್ಲದೇ ರಸ್ತೆ, ವಿದ್ಯುತ್‌, ಕುಡಿಯುವ ನೀರು ಮತ್ತಿತರ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.

ನಾವು ಭಿಕ್ಷುಕರಲ್ಲ : ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರು ಹಳೆಯ ಬಟ್ಟೆ-ಬರೆ, ಹಳೆಯ ಪಾತ್ರೆಗಳು ಮತ್ತು ಚಪಾತಿಯನ್ನು ನಿರಾಕರಿಸಿದ್ದಾರೆ. ನಾವು ಭಿಕ್ಷುಕರಲ್ಲ...ಹೀಗಾಗಿ ಹಳೆಯ ಬಟ್ಟೆಗಳು ಬೇಡ. ಮಾನವೀಯತೆಯಿದ್ದರೆ ಹೊಸಬಟ್ಟೆ ನೀಡಿ ಎನ್ನುತ್ತಿದ್ದಾರೆ.

ಬದುಕಿಡೀ ಇಡ್ಲಿ-ಅನ್ನ ಬಿಟ್ಟರೆ ಬೇರೊಂದನ್ನು ಅರಿಯದ ತಮಿಳರು ಚಪಾತಿಯನ್ನೇ ನೋಡಿಲ್ಲ. ಅತ್ಯುತ್ಸಾಹದಿಂದ ನಮ ್ಮಜನ ತಯಾರಿಸಿದ ಲಕ್ಷಗಟ್ಟಲೇ ಚಪಾತಿಗಳು, ಮತ್ತೆ ಮರಳಿ ಬಂದಿವೆ.

ನಮಗೆ ಅಕ್ಕಿ ಕೊಡಿ, ಹೊಸ ಬಟ್ಟೆ ಕೊಡಿ, ಬಾಣಂತಿಯರಿಗೆ ಹೊಸಬೆಡ್‌ಶೀಟ್‌ ಕೊಡಿ. ಹಳೆಯವು ಬೇಡ ಎನ್ನುವ ಸಂತ್ರಸ್ತರ ಮಾತು ತುಸು ಒರಟಾಗಿ ಕಂಡರೂ, ಅರ್ಥವಿದೆ ಅನ್ನಿಸುತ್ತದೆ.

ಸಂತ್ರಸ್ತರ ಹೆಸರಲ್ಲಿ ಸಂಗ್ರಹಿಸಲಾಗಿದ್ದ ಲೋಡ್‌ಗಟ್ಟಲೇ ಹಳೆಯ ಬಟ್ಟೆಗಳನ್ನು ಅವರು ಕಣ್ಣೆತ್ತಿ ಸಹ ನೋಡುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಬೆಂಗಳೂರಿನ ಎಚ್‌ಎಎಲ್‌ ಸಂಘ, ತಾನು ಸಂಗ್ರಹಿಸಿದ್ದ ಎರಡು ಲೋಡ್‌ ಬಟ್ಟೆಗಳನ್ನು ಹರಾಜು ಹಾಕಿದೆ. ಆ ಮೂಲಕ ಸಂಗ್ರಹಿಸಿದ 40ಸಾವಿರ ರು. ಹಾಗೂ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ್ದ 2.75 ಲಕ್ಷಗಳನ್ನು ಸಂತ್ರಸ್ತರ ತುರ್ತು ಅಗತ್ಯಗಳಿಗೆ ಖರ್ಚು ಮಾಡಲು ನಿರ್ಧರಿಸಿದೆ.

ಈ ಮಧ್ಯೆ ಮಂಗಳವಾರ ತಮಿಳುನಾಡಿನ ಚೆನ್ನೈ ಮತ್ತು ಗ್ರೇಟ್‌ ನಿಕೋಬರ್‌ನಲ್ಲಿ ಭೂಮಿ ಕಂಪಿಸಿದ ಬಗೆಗೆ ವರದಿಗಳು ಬಂದಿವೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more