ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಸೆನ್ನೆಲ್‌ನ ರುಪಾಯಿ ಬಿಲ್ಲೆ ಫೋನ್‌ ಡಬ್ಬಿಗಳ ಕರೆದರ ದುಪ್ಪಟ್ಟು

By Staff
|
Google Oneindia Kannada News

ಬಿಎಸ್ಸೆನ್ನೆಲ್‌ನ ರುಪಾಯಿ ಬಿಲ್ಲೆ ಫೋನ್‌ ಡಬ್ಬಿಗಳ ಕರೆದರ ದುಪ್ಪಟ್ಟು
90 ಸೆಕೆಂಡ್‌ಗಳ ಕರೆ ಅವಧಿ 120 ಸೆಕೆಂಡ್‌ಗಳಿಗೆ ಹೆಚ್ಚಳ

ಚಿತ್ರದುರ್ಗ : ಬಡ ಜನತೆ ಹಾಗೂ ಮಧ್ಯಮ ವರ್ಗದ ಪಾಲಿಗೆ ಅತ್ಯಂತ ಪ್ರಿಯವಾಗಿದ್ದ ರುಪಾಯಿ ಬಿಲ್ಲೆ ದೂರವಾಣಿ ಡಬ್ಬಿಗಳು ಕೆಲವೇ ವಾರಗಳಲ್ಲಿ ದುಬಾರಿಯಾಗಲಿವೆ.

ಒಂದು ರುಪಾಯಿ ನಾಣ್ಯ ಹಾಕುವ ಮೂಲಕ ಸಾರ್ವಜನಿಕ ದೂರವಾಣಿ ಡಬ್ಬಿಗಳ ಮೂಲಕ ದೂರವಾಣಿ ಸಂಪರ್ಕವನ್ನು ಭಾರತೀಯ ಸಂಚಾರ ನಿಗಮ ಈ ಮುನ್ನ ಕಲ್ಪಿಸಿತ್ತು . ಆದರೆ ಇನ್ನು ಮುಂದೆ ಒಂದು ರುಪಾಯಿ ಬದಲು ಎರಡು ರುಪಾಯಿ ಶುಲ್ಕವನ್ನು ಈ ಡಬ್ಬಿಗಳ ಪ್ರತಿಕರೆಗೆ ವಿಧಿಸಲು ಬಿಎಸ್‌ಎನ್‌ಎಲ್‌ ನಿರ್ಧರಿಸಿದೆ.

ದೂರವಾಣಿ ಶುಲ್ಕ ಎರಡು ರುಪಾಯಿಗೆ ಏರಿಕೆಯ ನಂತರ ಪ್ರಸ್ತುತ ಜಾರಿಯಲ್ಲಿರುವ 90 ಸೆಕೆಂಡ್‌ಗಳ ಕರೆ ಅವಧಿಯನ್ನು 120 ಸೆಕೆಂಡ್‌ಗಳಿಗೆ ಹೆಚ್ಚಿಸಲಾಗುವುದು. ಪ್ರಸ್ತುತ ಇರುವ ಎಲ್ಲ ಡಬ್ಬಿಗಳನ್ನು ಎರಡು ರುಪಾಯಿ ನಾಣ್ಯಕ್ಕೆ ಹೊಂದುವಂತೆ ಬದಲಿಸಲಾಗುವುದು ಎಂದು ಬಿಎಸ್‌ಎನ್‌ಎಲ್‌ ಮೂಲಗಳು ತಿಳಿಸಿವೆ.

ಏಪ್ರಿಲ್‌ 1ರೊಳಗೆ ಎರಡು ರುಪಾಯಿ ಶುಲ್ಕವನ್ನು ಜಾರಿಗೊಳಿಸುವಂತೆ ರಾಜ್ಯಗದ ಎಲ್ಲ ಜಿಲ್ಲಾಡಳಿತಗಳಿಗೆ ಬಿಎಸ್‌ಎನ್‌ಎಲ್‌ ಸೂಚಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X