• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಾಯುಕ್ತ ವೆಂಕಟಾಚಲ ಸಂದರ್ಶನ

By Staff
|

ಲೋಕಾಯುಕ್ತ ವೆಂಕಟಾಚಲ ಸಂದರ್ಶನ

ಉಪ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಪತ್ರಿ ಬಸವನಗೌಡರ ನೇಮಕವನ್ನು ವೆಂಕಟಾಚಲರ ಬಲಗುಂದಿಸುವ ಕ್ರಮ ಎಂದೇ ರಾಜಕೀಯ ವಲಯದಲ್ಲಿ ಅರ್ಥೈಸಲಾಗುತ್ತದೆ. ಇದಕ್ಕೆ ಸರಿಯಾಗಿ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದು ಉಪ ಲೋಕಾಯುಕ್ತರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಜಸ್ಟೀಸ್‌ ವೆಂಕಟಾಚಲ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

  • ಪಿ. ರಾಜೇಂದ್ರ
  • An interview with Justice Venkatachala* ಉಪ ಲೋಕಾಯುಕ್ತರ ನೇಮಕದಿಂದ ನಿಮ್ಮ ಅಧಿಕಾರಕ್ಕೆ ಕತ್ತರಿ ಹಾಕಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ ?

    ಹಾಗೇನೂ ಇಲ್ಲ. ಲೋಕಾಯುಕ್ತ ಕಾಯ್ದೆಯಲ್ಲಿ ಉಪ ಲೋಕಾಯುಕ್ತರ ನೇಮಕಕ್ಕೆ ಅವಕಾಶ ಇದೆ. ಮೂರು ವರ್ಷಗಳಿಂದ ಉಪಲೋಕಾಯುಕ್ತರ ನೇಮಕ ಆಗಿರಲಿಲ್ಲ. ಹಾಗಾಗಿ ಆ ಕೆಲಸ ಮತ್ತು ಜವಾಬ್ದಾರಿ ನನ್ನ ಮೇಲೆ ಇತ್ತು. ಈಗಿನ ನೂತನ ಉಪಲೋಕಾಯುಕ್ತರೂ ಭ್ರಷ್ಟಾಚಾರ ನಿರ್ಮೂಲನಕ್ಕೆ ಸಕ್ರಿಯವಾಗಿ ಮುಂದಾಗುವರೆಂಬ ವಿಶ್ವಾಸ ನನಗಿದೆ.

    * ಇನ್ನು ಮುಂದೆ ರಾಜ್ಯದಲ್ಲಿ ನಿಮ್ಮ ಪ್ರವಾಸ, ಹಠಾತ್‌ ಭೇಟಿ ಸುಗಮವೇ?

    ಉಪಲೋಕಾಯುಕ್ತರ ಜತೆ ಲೋಕಾಯುಕ್ತರು ರಾಜ್ಯದ ಯಾವುದೇ ಭಾಗಕ್ಕೆ ಭೇಟಿ ನೀಡಬಹುದು. ಯಾವುದಕ್ಕೂ ಕಾದು ನೋಡಬೇಕು. ಕಳೆದ ಮೂರೂವರೆ ವರ್ಷಗಳಲ್ಲಿ ರಾಜ್ಯದ ಸರಕಾರಿ ಆಸ್ಪತ್ರೆ, ತಾಲೂಕು ಕಚೇರಿ ಹಾಗೂ ಪುರಸಭೆಗಳಿಗೆ ಭೇಟಿ ನೀಡಿದ್ದರಿಂದ ಜನರನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಅಧಿಕಾರಿಗಳ ಭ್ರಷ್ಟ ಮುಖಗಳನ್ನು ಕಣ್ಣಾರೆ ನೋಡುವಂತಾಯಿತು. ನಾನು ರಾಜ್ಯದ ಪ್ರತಿಯಾಂದು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಜನರ ಕಷ್ಟ-ಸುಖ ವಿಚಾರಿಸಿ ಪರಿಹಾರ ಸೂಚಿಸಿದ್ದು ಸರಿಯೇ ತಪ್ಪೇ ಎಂಬುದನ್ನು ಜನರೇ ತೀರ್ಮಾನಿಸಬೇಕು.

    * ನಿಮ್ಮ ಜಿಲ್ಲಾ ಪ್ರವಾಸಗಳಿಗೆ ಅಡ್ಡಗಾಲು ಹಾಕಿ, ಮುಖ್ಯ ಕಾರ್ಯದರ್ಶಿ ಕೆ.ಕೆ. ಮಿಶ್ರಾ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆ....?

    ನನ್ನ ಪ್ರವಾಸ ಮೊಟಕುಗೊಳಿಸಲು ಮುಖ್ಯಕಾರ್ಯದರ್ಶಿಯಿಂದ ಸಾಧ್ಯವಿಲ್ಲ. ಅಧಿಕಾರಿಗಳು ನಾನು ನಡೆಸುವ ಬಹಿರಂಗ ನ್ಯಾಯಾಲಯ (open court proceedings)ಕಲಾಪಗಳಲ್ಲಿ ಪಾಲ್ಗೊಳ್ಳಬೇಕು. ಅಧಿಕಾರಿಗಳು ಪ್ರಭಾವಪೂರ್ವಕವಾಗಿ ಕೆಲಸ ಮಾಡಲು ನಾನು ಕೈಗೊಂಡ ಪ್ರವಾಸಗಳು ಒಂದು ಮಾದರಿ... ಜಿಲ್ಲಾ ಆಡಳಿತವರ್ಗ, ಜನರ ಕಷ್ಟ -ಕಾರ್ಪಣ್ಯಗಳನ್ನು ವಿಚಾರಿಸಿ ಪರಿಹಾರ ಸೂಚಿಸಿದರೆ, ಲೋಕಾಯುಕ್ತರೇಕೆ ಊರೂರು ಸುತ್ತಬೇಕು? ಅಧಿಕಾರಿಗಳಲ್ಲಿ ಪ್ರತಿಯಾಂದಕ್ಕೂ ‘ಲಂಚದ ವ್ಯಾಧಿ’ ಉಲ್ಬಣಿಸಿರುವುದರಿಂದ ‘ಲೋಕಾಯುಕ್ತ ’ ಈ ಕೆಲಸಕ್ಕೆ ಮುಂದಾಗ ಬೇಕಾಯಿತು.

    * ನಿಮ್ಮ ಬಿರುಸಿನ ಕಾರ್ಯಾಚರಣೆಗೆ ಅಧಿಕಾರಿಗಳೇ ಅಡ್ಡಗಾಲು ಹಾಕುತ್ತಿದ್ದಾರೆಯೇ?

    ಇಲ್ಲ, ಹಾಗೆಂದು ನಾನು ಭಾವಿಸುವುದಿಲ್ಲ. ನನ್ನ ಇದುವರೆಗಿನ ಕಾರ್ಯಾಚರಣೆ ಕದ್ದು- ಮುಚ್ಚಿ ನಡೆಸಿದ್ದಲ್ಲ. ಲಂಚಕ್ಕೆ ಕೈಯಾಡ್ಡಿದ ಎಷ್ಟೋ ಮಂದಿ ಅಧಿಕಾರಿಗಳು ಜನರ ಮುಂದೆಯೇ ಸಿಕ್ಕಿಬಿದ್ದರು. ಇಷ್ಟು ದಿನ ನಡೆದ ದಾಳಿಯ ಹಿಂದೆ ಅಗ್ಗದ ಪ್ರಚಾರದ ಗಿಮಿಕ್‌ ಇಲ್ಲ. ಲೋಕಾಯುಕ್ತ ಸಂಸ್ಥೆಯೂ ಭ್ರಷ್ಟಾಚಾರ ಸಂಹಾರದಲ್ಲಿ ಪಾರದರ್ಶಕತೆಯಿಂದ ಕೆಲಸ ಮಾಡಬಹುದೆಂದು ಸಾಬೀತುಪಡಿಸಿದ್ದೇನೆ. ಲೋಕಾಯುಕ್ತ ನ್ಯಾಯಾಲಯದ ಕಲಾಪಗಳನ್ನು ದೃಶ್ಯಮಾಧ್ಯಮ ಸೆರೆಹಿಡಿಯಲು ಅವಕಾಶ ಕಲ್ಪಿಸಿದ್ದೇನೆ. ಈ ದೇಶದ ಪ್ರತಿಯಾಬ್ಬನಿಗೆ ಲೋಕಾಯುಕ್ತ ಬಗ್ಗೆ ಅಂತಹ ಮಾಹಿತಿ ಪಡೆಯುವ ಹಕ್ಕಿದೆ. ಸತ್ಯ ಸಂಗತಿಗಳನ್ನು ಬಚ್ಚಿಡಲು ಸಾಧ್ಯವೇ ಇಲ್ಲ.

    *ಲೋಕಾಯುಕ್ತ ಸಂಸ್ಥೆಯಲ್ಲೇ ‘ಮೇಜರ್‌ ಸರ್ಜರಿ’ ಆಗಬೇಕೆಂದು ಆರಂಭದಲ್ಲಿ ನೀವು ಹೇಳಿದ್ದಿರಿ. ಈಗ ಏನಂತೀರಿ ?

    1986ರಲ್ಲಿ ರಾಜ್ಯದಲ್ಲಿ ಸ್ಥಾಪಿತವಾದ ‘ಲೋಕಾಯುಕ್ತ’ ಸಂಸ್ಥೆಯಲ್ಲಿ ಈಗ ಸಾಕಷ್ಟು ಬದಲಾವಣೆಯಾಗಿದೆ. ಭ್ರಷ್ಟ ಅಧಿಕಾರಿಗಳಿಂದ ಶೋಷಣೆಗೊಳಗಾದ ಸಾಮಾನ್ಯಜನರು ಧೈರ್ಯವಾಗಿ ಮುಂದೆ ಬಂದು ದೂರು ನೀಡುವ ವಾತಾವರಣ ನಿರ್ಮಾಣವಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (Pevention of Corruption Act) ಪ್ರಕಾರ ಹಲವಾರು ಆರೋಪಿಗಳ ಮೇಲೆ ಲೋಕಾಯುಕ್ತ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆದರೂ ಸರಕಾರ ಉನ್ನತ ಅಧಿಕಾರಿಗಳ ಮೇಲಿನ ಆರೋಪಗಳ ಸಮಗ್ರತನಿಖೆಗೆ ಲೋಕಾಯುಕ್ತರಿಗೆ ಮಾತ್ರ ಅಧಿಕಾರ ನೀಡಲು ಮೀನ- ಮೇಷ ಎಣಿಸುತ್ತಿದೆ. ಲೋಕಾಯುಕ್ತ ಕಾಯ್ದೆ ತಿದ್ದುಪಡಿಗೆ ಸರಕಾರಕ್ಕೆ ಸಲಹೆ ನೀಡಲಾಗಿದೆ.

    (ಸ್ನೇಹಸೇತು: ವಿಜಯಕರ್ನಾಟಕ)

    Post your views

    ಮುಖಪುಟ / ವಾಟ್ಸ್‌ ಹಾಟ್‌

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more