ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾನುವಾರುಗಳಿಗೆ ಉಚಿತ ಲಸಿಕೆ ; ರೈತರಿಗೆ ಹೊಸ ವರ್ಷದ ಕೊಡುಗೆ!

By Staff
|
Google Oneindia Kannada News

ಜಾನುವಾರುಗಳಿಗೆ ಉಚಿತ ಲಸಿಕೆ ; ರೈತರಿಗೆ ಹೊಸ ವರ್ಷದ ಕೊಡುಗೆ!
ರಾಜ್ಯದಲ್ಲಿ ಶೇ.10ರಷ್ಟು ಜಾನುವಾರುಗಳ ಸಂಖ್ಯೆ ಅಧಿಕ-ಮಿರಾಜುದ್ದೀನ್‌ ಪಟೇಲ್‌

ೆಂಗಳೂರು: ರೈತರ ಜಾನುವಾರುಗಳಿಗೆ ಜೀವರಕ್ಷಕ ಲಸಿಕೆಗಳನ್ನು ಉಚಿತವಾಗಿ ವಿತರಿಸಲು ರಾಜ್ಯ ಸರಕಾರ ಮುಂದಾಗಿದೆ. ಹೊಸವರ್ಷದ ಕೊಡುಗೆಯಾಗಿ ಶನಿವಾರ(ಜ.1)ದಿಂದಲೇ ಈ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ಪಶು ಸಂಗೋಪನಾ ಮತ್ತು ವಕ್ಫ್‌ ಖಾತೆ ಸಚಿವ ಮಿರಾಜುದ್ದೀನ್‌ ಪಟೇಲ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾನುವಾರುಗಳಿಗೆ ಮುಖ್ಯವಾಗಿ ಹನ್ನೆರಡು ಔಷಧಿ ಮತ್ತು ಲಸಿಕೆಗಳು ಬಳಕೆಯಾಗುತ್ತಿವೆ. ಉಚಿತವಾಗಿ ವಿತರಿಸುವುದರಿಂದ ಸರಕಾರಕ್ಕೆ ವಾರ್ಷಿಕ 7 ಕೋಟಿ ರೂ.ಗಳ ಹೊರೆ ಬೀಳಲಿದೆ ಎಂದರು.

ಈ ಹಿಂದೆ ಜಾನುವಾರುಗಳ ಲಸಿಕೆಗಾಗಿ ಕೇಂದ್ರಸರಕಾರ ಶೇ.50ರಷ್ಟು ಹಾಗೂ ರಾಜ್ಯ ಸರಕಾರ ಶೇ.25 ರಷ್ಟು ಹಣವನ್ನು ನೀಡುತ್ತಿತ್ತು. ಉಳಿಕೆ ಶೇ.25ರಷ್ಟು ಹಣವನ್ನು ರೈತರಿಂದ ಸಂಗ್ರಹಿಸಲಾಗುತ್ತಿತ್ತು. ಪ್ರಸ್ತುತ ಕೇಂದ್ರವೇ ಶೇ.75ರಷ್ಟು ಹಣ ಭರಿಸುತ್ತಿದೆ. ಹೀಗಾಗಿ ರೈತರ ಜಾನುವಾರುಗಳಿಗೆ ಉಚಿತವಾಗಿ ಲಸಿಕೆಗಳ ಪೂರೈಸಲು ಸರಕಾರ ನಿರ್ಧರಿಸಿದೆ ಎಂದರು.

ಪಶು ಸಂಗೋಪನಾ ಇಲಾಖೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಒಟ್ಟು 4,800 ಹುದ್ದೆಗಳು ಖಾಲಿ ಇವೆ. ಅವುಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುತ್ತದೆ. ಕಳೆದ ಹತ್ತು ವರ್ಷಗಳಿಂದ ಶೇ.10ರಷ್ಟು ಜಾನುವಾರುಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾಗಿದೆ ಎಂದು ಮಿರಾಜುದ್ದೀನ್‌ ಪಟೇಲ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X