• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಜಾನಪದಲೋಕ’ ಪ್ರೇಕ್ಷಣೀಯ ಸ್ಥಳವೆಂದು ಘೋಷಿಸಿ -ಶಿವರುದ್ರಪ್ಪ

By Staff
|

‘ಜಾನಪದಲೋಕ’ ಪ್ರೇಕ್ಷಣೀಯ ಸ್ಥಳವೆಂದು ಘೋಷಿಸಿ -ಶಿವರುದ್ರಪ್ಪ

ಜಾಗತೀಕರಣ, ಬದಲಾದ ಶಿಕ್ಷಣದಿಂದ ನಮ್ಮ ನೆಲಕ್ಕೆ ನಮ್ಮಿಂದಲೇ ದ್ರೋಹ-ಎಚ್‌.ಎಲ್‌.ನಾಗೇಗೌಡ

ಬೆಂಗಳೂರು : ನಶಿಸಿ ಹೋಗುತ್ತಿರುವ ಜಾನಪದ ಕಲೆ, ಸಂಸ್ಕೃತಿ, ಸಾಹಿತ್ಯ ಬಿಂಬಿಸುವ ರಾಮನಗರ ಸಮೀಪದ ಜಾನಪದ ಲೋಕವನ್ನು ಪ್ರೇಕ್ಷಣೀಯ ಸ್ಥಳ ಎಂದು ಸರಕಾರ ಘೋಷಿಸಬೇಕು. ಜಾನಪದ ಲೋಕ, ದೇಶ-ವಿದೇಶಗಳ ಜನರಿಗೆ ಜಾನಪದ ವೈವಿಧ್ಯತೆ ಪರಿಚಯಿಸಲು ಪೂರಕವಾಗಿದೆ ಎಂದು ಸಾಹಿತಿ ಡಾ.ಜಿ.ಎಸ್‌.ಶಿವರುದ್ರಪ್ಪ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಬೆಳ್ಳಿ ಹಬ್ಬ ಹಾಗೂ ಸಾಹಿತ್ಯ ಸದನ ಪ್ರಕಾಶನದ ಚಿನ್ನದ ಹಬ್ಬ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಲೋಕ ಪರಿಷತ್ತಿನ ಅಧ್ಯಕ್ಷ ಡಾ.ಎಚ್‌.ಎಲ್‌.ನಾಗೇಗೌಡ ಮಾತನಾಡಿ, ಜಾಗತೀಕರಣ ಮತ್ತು ಇಂದಿನ ಶೈಕ್ಷಣಿಕ ಪದ್ಧತಿಯಿಂದಾಗಿ ನಾವು ಹುಟ್ಟಿ ಬೆಳೆದ ಪರಿಸರವನ್ನೇ ಮರೆತು ದ್ರೋಹವೆಸಗುತ್ತಿದ್ದೇವೆ. ಹುಟ್ಟಿ ಬೆಳೆದ ಮಣ್ಣಿನ ಋಣ ತೀರಿಸಲು ಕಿಂಚಿತ್ತಾದರೂ ಸೇವೆ ಸಲ್ಲಿಸುವುದು ಪ್ರತಿಯಾಬ್ಬರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಡಾ.ಹಿ.ಶಿ.ರಾಮಚಂದ್ರೇಗೌಡ, ಡಾ.ಬಸವರಾಜ ಕಲ್ಗುಡಿ, ಮೈಸೂರಿನ ಧ್ವನ್ಯಾಲೋಕ ನಿರ್ದೇಶಕ ಡಾ.ಶ್ರೀನಾಥ್‌, ಡಾ.ಮಲ್ಲೇಪುರಂ ಜಿ.ವೆಂಕಟೇಶ್‌ ಮತ್ತಿತರರ್ಫುಕಾರ್ಯಕ್ರಮದಲ್ಲಿ ಹಾಜರಿದ್ದರು.

ಪುಸ್ತಕ ಬಿಡುಗಡೆ : ಎಚ್‌.ಎಲ್‌.ನಾಗೇಗೌಡರ ‘ಸೊನ್ನೆಯಿಂದ ಸೊನ್ನೆಗೆ’, ವೆರಿಯರ್‌ ಎಲ್ವಿನರ ‘ಗಿರಿಜನ ಪ್ರಪಂಚ’, ‘ಸರೋಜಿನಿ ನಾಯ್ಡು’, ‘ಪ್ರವಾಸಿ ಕಂಡ ಇಂಡಿಯಾ’ ಮತ್ತಿತರ ಪುಸ್ತಕಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

(ಇನ್ಪೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more