ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಾಂಗ ತಜ್ಞ, ರಾಷ್ಟ್ರೀಯ ಭದ್ರತಾ ಸಲಹೆಗಾರ ದೀಕ್ಷಿತ್‌ ನಿಧನ

By Staff
|
Google Oneindia Kannada News

ವಿದೇಶಾಂಗ ತಜ್ಞ, ರಾಷ್ಟ್ರೀಯ ಭದ್ರತಾ ಸಲಹೆಗಾರ ದೀಕ್ಷಿತ್‌ ನಿಧನ
ಭಾರತ ಮತ್ತು ಪಾಕಿಸ್ತಾನ ಸಂಬಂಧ ಸುಧಾರಣೆಯಲ್ಲಿ ಗಮನಾರ್ಹ ಪಾತ್ರವಹಿಸಿದ್ದರು...

ನವದೆಹಲಿ : ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯೋತೀಂದ್ರನಾಥ್‌ ಎನ್‌. ದೀಕ್ಷಿತ್‌ (69) ಸೋಮವಾರ ಹೃದಯಾಘಾತದಿಂದ ನಿಧನರಾದರು. ಬೆಳಗ್ಗೆ 6.30ಕ್ಕೆ ತೀವ್ರ ಹೃದಯಾಘಾತಕ್ಕೊಳಗಾದ ದೀಕ್ಷಿತ್‌ ಅಖಿಲ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೊನೆ ಉಸಿರೆಳೆದರು.

ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ದೀಕ್ಷಿತ್‌, ಮಾಲ್ಡೀವ್‌ ಹೊರತು ಪಡಿಸಿ ದಕ್ಷಿಣ ಏಷ್ಯಾದ ಎಲ್ಲಾ ರಾಷ್ಟ್ರಗಳಲ್ಲಿ ಹೈ ಕಮೀಷನರ್‌ ಆಗಿ ಕಾರ್ಯನಿರ್ವಹಿಸಿದ್ದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಭಿನ್ನಭಿಪ್ರಾಯಗಳನ್ನು ಶಮನಗೊಳಿಸುವಲ್ಲಿ ಉತ್ತಮ ಸಲಹೆ, ಸಂಬಂಧ ಕಲ್ಪಿಸುವಲ್ಲಿ ಇವರ ಪಾತ್ರ ಹಿರಿದಾಗಿತ್ತು. ಭಾರತ ಮತ್ತು ಪಾಕಿಸ್ತಾನ ಸಂಬಂಧಗಳ ತಜ್ಞರೆಂದೇ ದೀಕ್ಷಿತ್‌ ಖ್ಯಾತಿ ಪಡೆದಿದ್ದರು. 2003ರ ನಂತರ ಕಾಂಗ್ರೆಸ್‌ ಪಕ್ಷದ ವಿದೇಶಾಂಗ ವ್ಯವಹಾರ ಘಟಕದ ಜತೆ ಗುರುತಿಸಿಕೊಂಡಿದ್ದರು. ವಿದೇಶಾಂಗ ನೀತಿ, ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆ ಬಗ್ಗೆ ಚುನಾವಣೆ ಮುನ್ನ ಕರಡು ಪ್ರತಿ ಹೊರಡಿಸಿದ ಕೀರ್ತಿ ಇವರಿಗಿತ್ತು.

2004 ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕಗೊಂಡಿದರು. ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ದೀಕ್ಷಿತ್‌ ಆಗಲಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X