ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹೋದರರ ಸವಾಲ್‌: ಅನಿಲ್‌ ಅಂಬಾನಿ ‘ಐಪಿಸಿಎಲ್‌’ ಪದತ್ಯಾಗ!

By Staff
|
Google Oneindia Kannada News

ಸಹೋದರರ ಸವಾಲ್‌: ಅನಿಲ್‌ ಅಂಬಾನಿ ‘ಐಪಿಸಿಎಲ್‌’ ಪದತ್ಯಾಗ!
ರಿಲಯನ್ಸ್‌ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ

ನವದೆಹಲಿ : ರಿಲಯನ್ಸ್‌ ಸಮೂಹ ಕಂಪನಿ ಐಪಿಸಿಎಲ್‌ಗೆ ಉಪಾಧ್ಯಕ್ಷ ಮತ್ತು ನಿರ್ದೇಶಕ ಹುದ್ದೆಗೆ ಅನಿಲ್‌ ಅಂಬಾನಿ ರಾಜೀನಾಮೆ ನೀಡಿದ್ದಾರೆ.

ಜನವರಿ 3ರ ಸೋಮವಾರ ರಿಲಯನ್ಸ್‌ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನಕ್ಕೆ ಅನಿಲ್‌ ಅಂಬಾನಿ ರಾಜೀನಾಮೆ ಸಲ್ಲಿಸುವ ನಾಟಕೀಯ ಬೆಳವಣಿಗೆ ನಡೆಯಿತು. ಈ ಹಠಾತ್‌ ಬೆಳವಣಿಗೆ ಕಾರಣದಿಂದಾಗಿ ಧೀರುಭಾಯಿ ಅಂಬಾನಿ ಸಾಮ್ರಾಜ್ಯಕ್ಕಾಗಿ ನಡೆಯುತ್ತಿರುವ ಸಹೋದರರ ಸವಾಲ್‌ ಕುತೂಹಲಕಾರಿ ಘಟ್ಟ ಮುಟ್ಟಿದೆ.

ಧೀರುಭಾಯಿ ಪುತ್ರರಾದ ಮುಖೇಶ್‌ ಹಾಗೂ ಅನಿಲ್‌ ನಡುವೆ ಹಲವು ದಿನಗಳಿಂದ ಶೀತಲ ಯುದ್ಧ ನಡೆದಿತ್ತು . ರಿಲಯನ್ಸ್‌ ಸಮೂಹದ ಮೇಲೆ ಪ್ರಾಬಲ್ಯ ಸಾಧಿಸಲು ಇಬ್ಬರು ಸೋದರರ ಮಾಧ್ಯಮಗಳ ಮೊರೆ ಹೋಗಿದ್ದರು.

ಪ್ರಸ್ತುತ ಅನಿಲ್‌ ಅಂಬಾನಿ ರಾಜೀನಾಮೆಯಿಂದಾಗಿ ಸಹೋದರರ ಕಲಹ ಹೊಸ ಮಜಲು ಮುಟ್ಟಿದೆ. ಈ ರಾಜೀನಾಮೆ ಕುರಿತು ಅಂಬಾನಿ ಕುಟುಂಬ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ .

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X