ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಸುನಾಮಿ ಸಂತ್ರಸ್ತರಿಗೆ ಪೇಜಾವರ ಮಠದಿಂದ ಸೂರು

By Staff
|
Google Oneindia Kannada News

ತಮಿಳುನಾಡು ಸುನಾಮಿ ಸಂತ್ರಸ್ತರಿಗೆ ಪೇಜಾವರ ಮಠದಿಂದ ಸೂರು
ಸುನಾಮಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಪೇಜಾವರ ಶ್ರೀ

ಬೆಂಗಳೂರು : ದಯೆಯೇ ಧರ್ಮದ ಮೂಲವಯ್ಯ ಎಂದ ಶರಣರ ಹಾದಿಯಲ್ಲಿ ನಂಬಿಕೆಯುಳ್ಳ ಉಡುಪಿಯ ಪೇಜಾವರ ಮಠ ಸುನಾಮಿ ಸಂತ್ರಸ್ತರಿಗಾಗಿ ಮನೆಗಳನ್ನು ಕಟ್ಟಿಕೊಡಲು ಮುಂದಾಗಿದೆ.

ತಮಿಳುನಾಡಿನ ಕರಾವಳಿ ಪ್ರದೇಶದಲ್ಲಿ ಸುನಾಮಿ ಅಲೆಗಳಿಂದ ಸೂರು ಕಳೆದುಕೊಂಡವರಿಗೆ ಮನೆಗಳನ್ನು ಕಟ್ಟಿಕೊಡುವುದಾಗಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಸುನಾಮಿ ಪೀಡಿತ ಪ್ರದೇಶಗಳು ಹಾಗೂ ನಾಗಪಟ್ಟಣಂ, ಕುಡ್ಡಲೂರಿನ ಸಿಂಗರತೋಪು ಮುಂತಾದ ಪರಿಹಾರ ಕ್ಯಾಂಪುಗಳಿಗೆ ಭೇಟಿ ನೀಡಿದ ತಮ್ಮ ಅನುಭವಗಳನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡ ಸಂದರ್ಭದಲ್ಲಿ ಸ್ವಾಮೀಜಿ ಈ ವಿಷಯ ತಿಳಿಸಿದರು.

ಸದ್ಯಕ್ಕೆ ಪರಿಹಾರ ಕೇಂದ್ರಗಳಲ್ಲಿ ಆಹಾರದ ಕೊರತೆಯಿಲ್ಲ . ಹೊದಿಕೆ-ಹಾಸು, ಪಾತ್ರೆ ಪಡಗಗಳು ಸೇರಿದಂತೆ ಅಗತ್ಯ ವಸ್ತುಗಳು ಯಥೇಚ್ಛವಾಗಿವೆ. ಆದರೆ ಪ್ರಕೃತಿಯ ಉರಿಗಣ್ಣಿನಿಂದ ಜನರನ್ನು ಪಾರು ಮಾಡಲು ಮನೆಗಳನ್ನು ನಿಮಿಸುವ ಜರೂರು ನಮ್ಮ ಮುಂದಿದೆ ಎಂದು ವಿಶ್ವೇಶತೀರ್ಥರು ಹೇಳಿದರು.

ನಷ್ಟದ ಪ್ರಮಾಣವನ್ನು ಅಂದಾಜು ಮಾಡುವುದು ಕಷ್ಟದ ಕೆಲಸ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. ಶ್ರೀಲಂಕಾದಲ್ಲೂ ಮಠದ ವತಿಯಿಂದ ಪರಿಹಾರ ಕಾರ್ಯ ಕೈಗೊಳ್ಳುತ್ತೀರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ, ಮಠ ಆ ಮಟ್ಟಿಗೆ ಶ್ರೀಮಂತವಾಗಿಲ್ಲ ಎಂದರು.

ಎಪ್ಪತ್ತರ ದಶಕದಿಂದಲೂ ಜನರ ನೋವುಗಳಿಗೆ ಪೇಜಾವರ ಮಠ ಸ್ಪಂದಿಸುತ್ತಾ ಬಂದಿದೆ. ಬರದ ದವಡೆಗೆ ತುತ್ತಾಗಿದ್ದ ಬಿಜಾಪುರದ ಗೋವಿಂದಪುರದಲ್ಲಿ ಮಠ ಬಡಜನತೆಗೆ ಮನೆಗಳನ್ನು ಕಟ್ಟಿಕೊಟ್ಟಿತ್ತು . ಮಹಾರಾಷ್ಟ್ರದ ಲಾತೂರ್‌ ಭೂಕಂಪದಲ್ಲಿ ನಿರ್ವಸಿತರಾದವರಿಗೆ 60 ಮನೆಗಳನ್ನು ಕಟ್ಟಿಕೊಡಲಾಗಿತ್ತು . ಆಂಧ್ರದ ಬರಪೀಡಿತ ಪ್ರದೇಶ ಹಂಸಲಜೀವಿಯಲ್ಲಿ 50 ಮನೆಗಳನ್ನು ನಿರ್ಮಿಸಲಾಗಿದೆ. ಗುಲ್ಬರ್ಗಾ ಜಿಲ್ಲೆಯ ಅನೇಕ ಕಡೆಗಳಲ್ಲಿ ಗಂಜಿಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ಮಠದ ಚಟುವಟಿಕೆಗಳನ್ನು ಪೇಜಾವರ ಶ್ರೀಗಳು ವಿವರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X