ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು-ಬೆಂಗಳೂರು ರೈಲು 2005 ಜನವರಿಯಿಂದ ಪ್ರಾರಂಭ

By Staff
|
Google Oneindia Kannada News

ಮಂಗಳೂರು-ಬೆಂಗಳೂರು ರೈಲು 2005 ಜನವರಿಯಿಂದ ಪ್ರಾರಂಭ
ಮಂಗಳೂರು-ಪುತ್ತೂರು ನಡುವಣ ರೈಲು ಸಂಚಾರ

ಮಂಗಳೂರು : ಬಹು ನಿರೀಕ್ಷೆಯ ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ಯಾಸೆಂಜರ್‌ ರೈಲು ಓಡಾಟ 2005 ನೇ ಇಸವಿಯ ಜನವರಿ ತಿಂಗಳ ವೇಳೆಗೆ ಪ್ರಾರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ನಿತೀಶ್‌ ಕುಮಾರ್‌ ತಿಳಿಸಿದ್ದಾರೆ.

2005ರ ಡಿಸೆಂಬರ್‌ ವೇಳೆಗೆ ಮಂಗಳೂರು-ಸಕಲೇಶಪುರ ನಡುವಣ ಗೇಜ್‌ ಪರಿವರ್ತನೆ ಕಾರ್ಯ ಮುಕ್ತಾಯವಾಗಲಿದೆ ಹಾಗೂ 2005ರ ಜನವರಿ ವೇಳೆಗೆ ಬೆಂಗಳೂರು-ಮಂಗಳೂರು ನಡುವಣ ರೈಲು ಸಂಚಾರವೂ ಪ್ರಾರಂಭವಾಗಲಿದೆ ಎಂದು ಸಚಿವ ನಿತೀಶ್‌ ಕುಮಾರ್‌ ಭಾನುವಾರ (ಡಿ.28) ತಿಳಿಸಿದರು. ಮಂಗಳೂರು ಮತ್ತು ಪುತ್ತೂರು ನಡುವಣ ಪ್ಯಾಸೆಂಜರ್‌ ರೈಲಿಗೆ ಹಸಿರು ನಿಶಾನೆ ತೋರಿಸಿದ ನಂತರ ನಿತೀಶ್‌ ಮಾತನಾಡುತ್ತಿದ್ದರು.

ಬ್ರಾಡ್‌ಗೇಜ್‌ಗೆ ಹೊಸದಾಗಿ ಪರಿವರ್ತನೆಗೊಂಡಿರುವ ಮಾರ್ಗದಲ್ಲಿ ಮಂಗಳೂರು-ಪುತ್ತೂರು ರೈಲು ಸಂಚಾರ ಆರಂಭವಾಗಿದ್ದು , ಡಿ.29ರ ಸೋಮವಾರದಿಂದ ರೈಲು ಸಂಚಾರ ನಿಯಮಿತವಾಗಿ ಆರಂಭವಾಗಲಿದೆ.

2004ರ ಮಾರ್ಚ್‌ ವೇಳೆಗೆ ಪುತ್ತೂರು ಮತ್ತು ಕುಕ್ಕೆ ಸುಬ್ರಹ್ಮಣ್ಯ ನಡುವಣ ಗೇಜ್‌ ಪರಿವರ್ತನೆ ಕಾರ್ಯ ಕೊನೆಗೊಳ್ಳಲಿದೆ ಎಂದು ಸಚಿವ ನಿತೀಶ್‌ಕುಮಾರ್‌ ಇದೇ ಸಂದರ್ಭದಲ್ಲಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X