ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಲ್ಲಿ ಸಮಾವೇಶ, ಗದ್ದರ್‌ ಕಂಚಿನ ಕಂಠದ ಗುಡುಗು

By Staff
|
Google Oneindia Kannada News

ಚಿಕ್ಕಮಗಳೂರಲ್ಲಿ ಸಮಾವೇಶ, ಗದ್ದರ್‌ ಕಂಚಿನ ಕಂಠದ ಗುಡುಗು
ಕೋಮು ಸೌಹಾರ್ದತೆಗೆ ನಾಡಿನ ಅನೇಕ ಸಂಘಟನೆಗಳ ದೊಡ್ಡ ಮಿಲನ

ಚಿಕ್ಕಮಗಳೂರು : ಅಲ್ಲಿ ಮುಸ್ಲಿಮರೂ ಸೇರಿದಂತೆ ಅಸಂಖ್ಯಾತ ಕೋಮು ಸೌಹಾರ್ದಾಕಾಂಕ್ಷಿಗಳಿದ್ದರು. ಎಲ್ಲರು ಬಿಟ್ಟ ಕಣ್ಣು ಬಿಟ್ಟುಕೊಂಡೇ ನೋಡುವ ಹಾಗೆ ಮಾಡಿದ್ದು ಕ್ರಾಂತಿಕವಿ ಗದ್ದರ್‌. ನಾಡಿನ ಅನೇಕ ಸಂಘಟನೆಗಳು ಒಂದೆಡೆ ಸೇರಿ ನಡೆಸಿದ ಬೃಹತ್‌ ಕೋಮು ಸೌಹಾರ್ದತಾ ಸಮಾವೇಶವಿದು.

ನಗರದ ಸಂತೇ ಮೈದಾನದ ಹತ್ತಿರದ ಗದ್ದೆ ಮೈದಾನದಲ್ಲಿ ಭಾನುವಾರ (ಡಿ. 29) ಒಂದು ಬೇರೆಯದೇ ಹಬ್ಬದ ವಾತಾವರಣ. ಶಾಂತಿ ಸೌಹಾರ್ದತೆ ಬಿಂಬಿಸುವ ಬ್ಯಾನರ್‌ಗಳ ಹಾರಾಟ. ಕೋಮುವಾದಿಗಳ ವಿರುದ್ಧ ಜೋರಾಗೇ ಏಳುತ್ತಿದ್ದ ಘೋಷಣೆಗಳು. ಶಾಂತಿ ಸ್ಥಾಪನೆಯ ಹಾದಿಯಲ್ಲಿ ಇಡಬೇಕಾದ ಹೆಜ್ಜೆಗಳ ಕುರಿತು ಭಾಷಣಗಳು. ನಡು ನಡುವೆ ಹಾಡು. ಅದರಲ್ಲೂ ಕ್ರಾಂತಿ ಕವಿ ಗದ್ದರ್‌ ಕಂಚಿನ ಕಂಠ ಸಮಾವೇಶದ ದೊಡ್ಡ ಸೆಳಕು. ಹಾಡುತ್ತಲೇ ದಣಿಯದೆ ಹೆಜ್ಜೆ ಹಾಕುವ ಗದ್ದರ್‌ ಜೊತೆಗೆ ಅನೇಕರು ದನಿಗೂಡಿಸಿದ್ದೂ ಉಂಟು.

ಬಾಬಾಬುಡನ್‌ಗಿರಿಯನ್ನು ಅಯೋಧ್ಯೆಯಾಗಿಸಿ, ಕರ್ನಾಟಕವನ್ನು ಗುಜರಾತ್‌ ಮಾಡೋಕೆ ಬಿಡುವುದಿಲ್ಲ ಎಂಬುದು ಅಲ್ಲಿ ಸೇರಿದ್ದ ಎಲ್ಲರ ಆಶಯವಾಗಿತ್ತು. ಪಕ್ಷಭೇದ ಮರೆತು ಸಂಘಟಿತರಾಗಿ ಹೋರಾಟಬೇಕೆಂದು ಸಮಾವೇಶದಲ್ಲಿ ಅನೇಕರು ಸಂಕಲ್ಪ ಮಾಡಿದರು. ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧ ಸಮರ ಸಾರಬೇಕೆಂದು ಕೆಲವರು ಕರೆ ಕೊಟ್ಟರು.

ನಿಡುಮಾಮಿಡಿ ಚೆನ್ನಮಲ್ಲ ಸ್ವಾಮೀಜಿ ‘ಗಿರಿ ಹಿಡಿದ ಗ್ರಹಣ’ ಧ್ವನಿಸುರುಳಿಯನ್ನು ಅನಾವರಣಗೊಳಿಸಿದರು. ಕುವೆಂಪು ಸೌಹಾರ್ದ ಸಂದೇಶ ಹೊತ್ತ ಧ್ವಜವನ್ನು ಚಿತ್ರದುರ್ಗದ ಮುರುಘರಾಜೇಂದ್ರ ಶರಣರು ಇನ್ನು ಮುಂದೆ ಹಾರಿಸಲು ಚಾಲನೆ ಕೊಟ್ಟರು.

ಭಾಷಣ, ಹಾಡು-ಕುಣಿತಗಳ ನಂತರ ಸಾವಿರಾರು ಮಂದಿ ಇದ್ದ ಆಳೆತ್ತರದ ಬಾಬಾಬುಡನ್‌ಗಿರಿ ಚಿತ್ರ ಹಾಗೂ ಶಾಂತಿಮಂತ್ರ ತೋರುವ ಫಲಕ, ನೂರಾರು ಬ್ಯಾನರುಗಳೊಂದಿಗೆ ಮೆರವಣಿಗೆ ನಡೆಯಿತು. ರತ್ನಗಿರಿ ರಸ್ತೆ, ಆಜಾದ್‌ ಮೈದಾನದ ಮೂಲಕ ಜಿಲ್ಲಾ ಆಟದ ಮೈದಾನವನ್ನು ಪ್ರವೇಶಿಸಿದ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದವರೂ ಇದ್ದದ್ದು ವಿಶೇಷ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X