ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಮ್ಕಾ ವಿಶ್ವ ದಾಖಲೆ ಪುಸ್ತಕ ಸೇರಿದ ವಾಜಪೇಯಿ ಬರ್ತಡೇ ಲಡ್ಡು

By Staff
|
Google Oneindia Kannada News

ಲಿಮ್ಕಾ ವಿಶ್ವ ದಾಖಲೆ ಪುಸ್ತಕ ಸೇರಿದ ವಾಜಪೇಯಿ ಬರ್ತಡೇ ಲಡ್ಡು
3 ಸಾವಿರ ಕಿಲೋ ತೂಕದ ಲಡ್ಡು ತುಂಬಿಸುವ ಡಬ್ಬಕ್ಕೇ 14 ಸಾವಿರ ರುಪಾಯಿ

ಲಕ್ನೋ : ಮೊನ್ನೆ ಕ್ರಿಸ್‌ಮಸ್‌ ದಿನ ಪ್ರಧಾನಿ ವಾಜಪೇಯಿ ಬರ್ತಡೇಗೆಂದು ಅವರ ಅಭಿಮಾನಿ ತಯಾರಿಸಿದ್ದ ಲಡ್ಡು ಲಿಮ್ಕಾ ವಿಶ್ವ ದಾಖಲೆ ಪುಸ್ತಕ ಸೇರಿದೆ.

ಬರೋಬ್ಬರಿ 3 ಸಾವಿರ ಕಿಲೋ ತೂಕದ ಲಡ್ಡು ಮಾಡಲು 30 ಕ್ವಿಂಟಾಲ್‌ ಬೂಂದಿಕಾಳು ಬಳಸಲಾಗಿತ್ತು. 7 ಘನ ಮೀಟರ್‌ ಡಬ್ಬದಲ್ಲಿ ಲಡ್ಡು ತುಂಬಿಸಿಡಲಾಗಿತ್ತು. ಈ ಡಬ್ಬದ ಬೆಲೆಯೇ 14 ಸಾವಿರ ರುಪಾಯಿ ! 26 ಬಾಣಸಿಗರು ಈ ಭಾರೀ ಲಡ್ಡುವನ್ನು ಶುದ್ಧ ತುಪ್ಪ ಹಾಕಿ ಮಾಡಿದ್ದರು.

ತಯಾರಿಸಿದ ಲಡ್ಡುವನ್ನು ರಾಜಭವನಕ್ಕೆ ದೊಡ್ಡ ಟ್ರಾಲಿಯಾಂದರಲ್ಲಿ ಒಯ್ಯಲಾಯಿತು. ಆಮೇಲೆ ಹಜರತ್‌ಗಂಜ್‌ನ ಹನುಮಂತನ ಗುಡಿಗೆ ತರಲಾಯಿತು. ಇಂತಹ ಬೃಹತ್‌ ಲಡ್ಡು ಮಾಡುವ ಕೆಲಸ ಒಪ್ಪಿಸಿದ್ದು ಬಿಜೆಪಿ ನಾಯಕ ನೃಪೇಂದ್ರ ಪಾಂಡೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲೆಂದು ಇದು ಮತ್ತೊಬ್ಬ ಬಿಜೆಪಿ ಮುಖಂಡರ ಹಾರೈಕೆಯ ಪರಿಯೇ ಎಂಬ ಪ್ರಶ್ನೆಗೆ ಪಾಂಡೆ ಉತ್ತರಿಸಿದ್ದು ಹೀಗೆ- ವಾಜಪೇಯಿ ನಿಸ್ವಾರ್ಥ ಮನುಷ್ಯ. ಅವರಲ್ಲಿನ ಮಾನವೀಯತೆ ಎಂಥವರೂ ಅನುಕರಿಸಬಹುದಾದದ್ದು. ಅವರಿಗೆ ಏನಾದರೊಂದು ಸರ್‌ಪ್ರೆೃಸ್‌ ಸಿಹಿ ಕೊಡಬೇಕೆನಿಸಿತು. ಅದಕ್ಕೇ ಅತಿ ದೊಡ್ಡ ಲಡ್ಡು ಮಾಡಿಸಿದೆ. ಇದು ವಾಜಪೇಯಿಯವರಿಗೆ ನನ್ನ ಗೌರವ ಅಷ್ಟೆ !

ಚಿತ್ರಗಾರನ ಇನ್ನೊಂದು ಉಡುಗೊರೆ : ಹಾಗೆ ನೋಡಿದರೆ ವಾಜಪೇಯಿ ಹುಟ್ಟುಹಬ್ಬ ಇನ್ನೂ ಮುಗಿದಿಲ್ಲ. ಇದೇ ಲಕ್ನೋದ ರಾಜೇಂದ್ರ ಕರಣ್‌ ಎಂಬ ಚಿತ್ರ ಕಲೆಗಾರ ವಾಜಪೇಯಿಯವರ ಹಳೆಯ ದಿನಗಳನ್ನು ನೆನಪಿಸುವ 52 ವಿವಿಧ ಚಿತ್ರಗಳನ್ನು ಬಿಡಿಸಿದ್ದಾರೆ. ಒಂದಾನೊಂದು ಕಾಲದಲ್ಲಿ ವಾಜಪೇಯಿ ಲಕ್ನೋದ ಬೀದಿಗಳಲ್ಲಿ ಸೈಕಲ್‌ ತುಳಿದುಕೊಂಡು ‘ರಾಷ್ಟ್ರ ಧರ್ಮ’ ಪತ್ರಿಕೆ ಮಾರುತ್ತಿದ್ದ ಗಳಿಗೆಯಿಂದ ಹಿಡಿದು ಕವಿತೆ ಹುಟ್ಟಿದ ಸಮಯದವರೆಗೆ ವಾಜಪೇಯಿ ಚಹರೆಗಳು ಚಿತ್ರದಲ್ಲಿ ಮೂಡಿವೆ. ಚಾರ್‌ಬಾಗ್‌ ರೈಲ್ವೇಸ್‌ನಲ್ಲಿ ಪ್ರದರ್ಶನಕ್ಕೆ ಇರುವ ಈ ಚಿತ್ರಗಳನ್ನು ನೋಡಲು ಇನ್ನೂ ನೂಕುನುಗ್ಗಲು.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X