ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್‌, ಚೀನಾ ಕ್ರಾಂತಿಯ ಕುರಿತು ಮಾತು ನಿಲ್ಲಿಸಿ -ಮಟ್ಟೆಣ್ಣವರ್‌

By Staff
|
Google Oneindia Kannada News

ಫ್ರಾನ್ಸ್‌, ಚೀನಾ ಕ್ರಾಂತಿಯ ಕುರಿತು ಮಾತು ನಿಲ್ಲಿಸಿ -ಮಟ್ಟೆಣ್ಣವರ್‌
ನಾಗರಿಕರ ಮೇಲೆ ಭ್ರಷ್ಟಾಚಾರದ ಪರಿಣಾಮಗಳು ಸಂಕಿರಣದಲ್ಲಿ ಬಾಂಬ್‌ ಹೀರೋ

ಬೆಂಗಳೂರು : ಭ್ರಷ್ಟಾಚಾರದ ವಿರುದ್ಧದ ತಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ತಮ್ಮ ಹೋರಾಟವನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಗಿರೀಶ್‌ ಲೋಕನಾಥ್‌ ಮಟ್ಟೆಣ್ಣವರ್‌ ಹೇಳಿದ್ದಾರೆ.

ಭ್ರಷ್ಟಾಚಾರದ ವಿರುದ್ಧದ ಹೋರಾಟ ತನ್ನೊಬ್ಬನದಲ್ಲ . ಲಕ್ಷಾಂತರ ಮಂದಿ ರೊಚ್ಚಿಗೆದ್ದಿದ್ದಾರೆ. ಈವರೆಗೆ ಹೊಟ್ಟೆಯಲ್ಲಿದ್ದ ಸಿಟ್ಟು ಈಗ ರಟ್ಟೆಗೆ ಬಂದಿದೆ. ಜನರ ಆಕ್ರೋಶವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕರ ಭವನದಲ್ಲಿ ಬಾಂಬ್‌ ಇಡುವ ಮೂಲಕ ಸುದ್ದಿಯಾದ ಗಿರೀಶ್‌ ಹೇಳಿದರು. ಅವರು ಗುರುವಾರ (ಡಿ.25) ನಡೆದ ನಾಗರಿಕರ ಮೇಲೆ ಭ್ರಷ್ಟಾಚಾರದ ಪರಿಣಾಮಗಳು ಎನ್ನುವ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು. ಭ್ರಷ್ಟಾಚಾರ ವಿರೋಧಿ ವೇದಿಕೆ ಈ ಕಾರ್ಯಕ್ರಮ ಏರ್ಪಡಿಸಿತ್ತು .

Girish Loknath Mattennavarಅನ್ಯಾಯವನ್ನು ತಡೆಗಟ್ಟಲು ದೇವರು ಬರುತ್ತಾನೆ ಎನ್ನುವ ಭ್ರಮೆಯಲ್ಲಿ ನಾವು ಹೋರಾಟದ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ಸಮಾಜದಲ್ಲಿ ಸ್ವಲ್ಪ ಮಟ್ಟಿಗಾದರೂ ಹೋರಾಟದ ಕಿಚ್ಚು ಹಚ್ಚುವುದು ತಮ್ಮ ಗುರಿ ಎಂದು ಗಿರೀಶ್‌ ತಿಳಿಸಿದರು. ಚೀನಾ, ರಷ್ಯಾ, ಫ್ರಾನ್ಸ್‌ ಮುಂತಾದ ದೇಶಗಳಲ್ಲಿ ನಡೆದ ಕ್ರಾಂತಿಯ ಕುರಿತು ಮಾತನಾಡುವುದನ್ನು ಬಿಟ್ಟು , ದೇಶದಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವಂತೆ ಗಿರೀಶ್‌ ಜನತೆಗೆ ಕರೆ ನೀಡಿದರು.

ಪ್ರತಿಯಾಬ್ಬರೂ ತಮ್ಮನ್ನು ಜಾತಿಯಿಂದ ಗುರ್ತಿಸಿಕೊಳ್ಳುತ್ತಾರೆ, ಭಾರತೀಯ ಎನ್ನುವ ಕುರಿತು ಯಾರಲ್ಲಿಯೂ ಅಭಿಮಾನ ಕಾಣುತ್ತಿಲ್ಲ ಎಂದು ವಿಷಾದಿಸಿದ ಮಟ್ಟೆಣ್ಣವರ್‌, ಯಾವುದೇ ಕಾರಣಕ್ಕೂ ಲಂಚ ಕೊಡುವುದಿಲ್ಲ ಎಂದು ಜನತೆ ಪ್ರತಿಜ್ಞೆ ಸ್ವೀಕರಿಸಬೇಕೆಂದರು. ನಕ್ಸಲೀಯರೊಂದಿಗೆ ತಮಗೆ ಸಂಪರ್ಕವಿದೆ ಎನ್ನುವ ಆರೋಪಗಳನ್ನು ಅವರು ನಿರಾಕರಿಸಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಕವಿ ಸುಮತೀಂದ್ರ ನಾಡಿಗ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X