ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟ್ಟು ಬಿಟ್ಟ ಕೃಷ್ಣ ;ನಕಲಿ ಸ್ಟಾಂಪ್‌ಪೇಪರ್‌ ಹಗರಣ ತನಿಖೆ ಸಿಬಿಐಗೆ

By Staff
|
Google Oneindia Kannada News

ಪಟ್ಟು ಬಿಟ್ಟ ಕೃಷ್ಣ ;ನಕಲಿ ಸ್ಟಾಂಪ್‌ಪೇಪರ್‌ ಹಗರಣ ತನಿಖೆ ಸಿಬಿಐಗೆ
ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ ತನಿಖೆ ಸಿಬಿಐಗೆ ಹಸ್ತಾಂತರ -ಖರ್ಗೆ

ಬೆಂಗಳೂರು : ಕುತೂಹಲಕಾರಿ ರಾಜಕೀಯ ಬೆಳವಣಿಗೆಯಾಂದರಲ್ಲಿ ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಶುಕ್ರವಾರ (ಡಿ.26) ನಡೆದ ಸಂಪುಟ ಸಭೆಯಲ್ಲಿ ಛಾಪಾ ಹಗರಣವನ್ನು ಸಿಬಿಐಗೆ ಒಪ್ಪಿಸಲು ನಿರ್ಧರಿಸಲಾಯಿತು. ಈ ನಿರ್ಣಯವನ್ನು ಕೈಗೊಳ್ಳುವ ಮುನ್ನ ಸಂಪುಟ ಸಭೆ ಸುಮಾರು ಐದು ತಾಸುಗಳ ಚರ್ಚೆ ನಡೆಸಿತು. ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ ಪ್ರಕರಣವನ್ನು ಸಿಬಿಐಗೆ ವಹಿಸುವ ತೀರ್ಮಾನಕ್ಕೆ ಬರಲಾಯಿತು ಎಂದರು.

ರಾಷ್ಟ್ರೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಪ್ರಕರಣದ ತನಿಖೆಯನ್ನು ಏಕಛತ್ರಿಯಡಿ ತರುವಂತೆ ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್‌ಗೆ ಮನವಿ ಸಲ್ಲಿಸುವ ಹಿನ್ನೆಲೆಯಲ್ಲಿ , ರಾಜ್ಯ ಸರ್ಕಾರ ಈ ನಿರ್ಣಯ ಕೈಗೊಂಡಿದೆ ಎಂದು ಖರ್ಗೆ ಹೇಳಿದರು. ಯಾವುದೇ ಒತ್ತಡ ಅಥವಾ ಹೆದರಿಕೆಯ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುತ್ತಿಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದರು.

ಮಣಿದ ಸರ್ಕಾರ : ಬಹುಕೋಟಿ ನಕಲಿ ಸ್ಟಾಂಪ್‌ ಪೇಪರ್‌ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸದಿರಲು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ನೇತೃತ್ವದ ರಾಜ್ಯ ಸರ್ಕಾರ ಈ ಮುನ್ನ ನಿರ್ಧರಿಸಿತ್ತು . ಸ್ಟಾಂಪಿಟ್‌ ಎನ್ನುವ ವಿಶೇಷ ತನಿಖಾ ದಳವನ್ನು ಛಾಪಾ ಪಾಪದ ತನಿಖೆಗೆ ನೇಮಿಸಿದ್ದ ಸರ್ಕಾರ, ಪ್ರಕರಣದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯವನ್ನೂ ರೂಪಿಸಿತ್ತು . ಆದರೆ, ಪ್ರತಿಪಕ್ಷಗಳ ನೇರ ದಾಳಿ ಹಾಗೂ ಕೇಂದ್ರ ಸರ್ಕಾರದ ಪರೋಕ್ಷ ಒತ್ತಡಕ್ಕೆ ಮಣಿದಿರುವ ಕೃಷ್ಣ ಸರ್ಕಾರ, ಪ್ರಕರಣದ ತನಿಖೆಯನ್ನು ಕೊನೆಗೂ ಸಿಬಿಐಗೆ ಒಪ್ಪಿಸಿದೆ.

ಸ್ಟಾಂಪ್‌ ಪೇಪರ್‌ ಹಗರಣದಲ್ಲಿ ಸಚಿವ ರೋಷನ್‌ ಬೇಗ್‌ ಅವರ ಸಹೋದರ ರೆಹಾನ್‌ ಬೇಗ್‌ ಅವರನ್ನು ಸ್ಟಾಂಪಿಟ್‌ ತಂಡ ವಶಕ್ಕೆ ತೆಗೆದುಕೊಂಡಿದೆ.

(ಪಿಟಿಐ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X