ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈ ಕಿಸಾನ್‌ ! ಬರಲಿದೆ ರೈತರಿಗಾಗೇ ಟೀವಿ ಚಾನೆಲ್ಲು , ಕಾಲ್‌ಸೆಂಟರ್‌

By Staff
|
Google Oneindia Kannada News

ಜೈ ಕಿಸಾನ್‌ ! ಬರಲಿದೆ ರೈತರಿಗಾಗೇ ಟೀವಿ ಚಾನೆಲ್ಲು , ಕಾಲ್‌ಸೆಂಟರ್‌
ಬೆಂಬಲ ಬೆಲೆ ಕುಸಿದರೂ ದುಡ್ಡು ಕಟ್ಟಿಕೊಡುವ ಬೆಳೆ ವಿಮೆ ಪ್ರಾಯೋಗಿಕ ಯೋಜನೆ

ಬೆಂಗಳೂರು : ರೈತರ ಬೌದ್ಧಿಕ ವಿಕಾಸದ ಉಮೇದಿನಿಂದ ಮುಂದಿನ ವರ್ಷ ಜನವರಿಯಲ್ಲಿ ಕೇಂದ್ರ ಸರ್ಕಾರ ಕಿಸಾನ್‌ ಕಾಲ್‌ ಸೆಂಟರ್‌ಗಳನ್ನು ತೆರೆಯಲಿದ್ದು, ಕೃಷಿಗಾಗಿಯೇ ಮೀಸಲಾದ ಒಂದು ಟೀವಿ ಚಾನೆಲ್ಲನ್ನೂ ಪ್ರಾರಂಭಿಸಲಿದೆ ಎಂದು ಕೃಷಿ ಸಚಿವ ರಾಜ್‌ನಾಥ್‌ಸಿಂಗ್‌ ಶುಕ್ರವಾರ (ಡಿ. 26) ಪ್ರಕಟಿಸಿದರು.

ಕೃಷಿ ವಿಷಯದಲ್ಲಿ ರೈತರ ಸಕಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡುವ ಸಲುವಾಗಿ ರಾಜ್ಯ ಮಟ್ಟದಲ್ಲಿ ಕಾಲ್‌ಸೆಂಟರ್‌ಗಳನ್ನು ಸ್ಥಾಪಿಸಲಾಗುವುದು. ಈ ಕಾಲ್‌ ಸೆಂಟರ್‌ಗಳಿಗೆ ಉಚಿತ ದೂರವಾಣಿ ಕರೆಗಳನ್ನು ಮಾಡುವ ಸೌಲಭ್ಯವಿರುತ್ತದೆ. ಕರೆ ಮಾಡಿ, ತಮ್ಮ ತೊಂದರೆಯನ್ನು ಹೇಳಿಕೊಂಡು ರೈತರು ಸೂಕ್ತ ಪರಿಹಾರ ಪಡೆಯಬಹುದು ಎಂದರು.

ದೂರದರ್ಶನದ ಮೂಲ ಸೌಕರ್ಯಗಳನ್ನು ಬಳಸಿಕೊಂಡು ರೈತರಿಗಾಗಿಯೇ ಜೈ ಕಿಸಾನ್‌ ಎಂಬ ಹೊಸ ಟೀವಿ ಚಾನೆಲ್ಲನ್ನೂ ಪ್ರಾರಂಭಿಸಲಾಗುವುದು. ಶುರುವಿಗೆ ದಿನಂಪ್ರತಿ ಒಂದು ತಾಸಿನ ಕೃಷಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುವುದು. ಕ್ರಮೇಣ ಇದನ್ನು ನಿರಂತರ ಕಾರ್ಯಕ್ರಮ ಪ್ರಸಾರ ಮಾಡುವ ಚಾನೆಲ್ಲನ್ನಾಗಿ ಪರಿವರ್ತಿಸಲಾಗುವುದು. ಆಯಾ ಪ್ರದೇಶದ ರೈತರ ಬೆಳೆಗಳ ವಿವರ, ಭೌಗೋಳಿಕ ಸ್ಥಿತಿ, ಹವಾಮಾನ ವಿವರಣೆ, ಮಳೆಯ ವಿವರ ಮೊದಲಾದ ವಿಷಯಗಳನ್ನು ಚಾನೆಲ್ಲು ಪ್ರಸಾರ ಮಾಡಲಿದೆ ಎಂದು ಸಚಿವರು ತಿಳಿಸಿದರು.

ರೈತರಿಗೆ ಕೊಡುವ ಬೆಳೆ ಸಾಲದ ಬಡ್ಡಿ ದರವನ್ನು ಯಾವುದೇ ಕಾರಣಕ್ಕೂ 9 ಪ್ರತಿಶತಕ್ಕಿಂತ ಹೆಚ್ಚು ಮಾಡಕೂಡದೆಂದು ತೀರ್ಮಾನಿಸಲಾಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶೇ. 8.5 ಬಡ್ಡಿ ದರದಲ್ಲಿ ಸಾಲ ಕೊಡಲು ಮುಂದಾಗಿರುವುದು ಸಂತೋಷದ ಸಂಗತಿ. 13 ರಾಜ್ಯಗಳ 18 ಜಿಲ್ಲೆಗಳಲ್ಲಿ ಕ್ರಾಂತಿಕಾರಿ ಬೆಳೆ ವಿಮೆ ಪ್ರಾಯೋಗಿಕ ಯೋಜನೆಯಾಂದನ್ನು ಈಗಾಗಲೇ ಜಾರಿಗೆ ತರಲಾಗಿದೆ. ಈ ವಿಮೆ ಕೇವಲ ಬೆಳೆ ಹಾನಿಯಷ್ಟೇ ಅಲ್ಲದೆ, ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಕುಸಿತವಾದರೆ ಅದನ್ನು ಕಟ್ಟಿಕೊಡುವ ಸೌಲಭ್ಯವನ್ನೂ ಒಳಗೊಂಡಿದೆ ಎಂದು ಹೇಳಿದರು.

ಇವತ್ತು ದೇಶದಲ್ಲಿ ಮಾಹಿತಿಯ ಅತ್ಯವಶ್ಯಕತೆ ಇರುವುದು ರೈತರಿಗೆ. ಅದನ್ನು ಅವರ ಮನೆಗೆ ತಲುಪಿಸುವ ಉದ್ದೇಶದಿಂದ ಹೊಸ ಟೀವಿ ಚಾನೆಲ್‌ ಮತ್ತು ಕಾಲ್‌ಸೆಂಟರ್‌ಗಳನ್ನು ಸ್ಥಾಪಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ ಎಂದು ರಾಜ್‌ನಾಥ್‌ಸಿಂಗ್‌ ತಿಳಿಸಿದರು.

ಸುದ್ದಿಗಾರರ ಜೊತೆ ಮಾತಾಡುವ ಮುನ್ನ ಇಲ್ಲಿನ ಕರಾವಳಿ ಮೀನುಗಾರಿಕಾ ಎಂಜಿನಿಯರಿಂಗ್‌ ಕುರಿತ ಕೇಂದ್ರ ಸಂಸ್ಥೆಯ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X