ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸವರ್ಷದ ಗಿಫ್ಟಾಗಿ ಬೆಂಗಳೂರಿಗರಿಗೆ ಹೈಸ್ಪೀಡ್‌ ಇಂಟರ್ನೆಟ್‌

By Staff
|
Google Oneindia Kannada News

ಹೊಸವರ್ಷದ ಗಿಫ್ಟಾಗಿ ಬೆಂಗಳೂರಿಗರಿಗೆ ಹೈಸ್ಪೀಡ್‌ ಇಂಟರ್ನೆಟ್‌
ರೂ.999 ರ ಪ್ಯಾಕೇಜ್‌- ಸಂಪರ್ಕ ಒಂದು, ಸವಲತ್ತು ಹಲವಾರು

ಬೆಂಗಳೂರು : ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಕೊಡುಗೆಯಾಗಿ ಸೂಪರ್‌ ಸ್ಪೀಡ್‌ ಇಂಟರ್ನೆಟ್‌ ಸಂಪರ್ಕವನ್ನು ಭಾರತೀಯ ಸಂಚಾರಿ ನಿಗಮ ಲಿಮಿಟೆಡ್‌ (ಬಿಎಸ್‌ಎಲ್‌ಎಲ್‌) ಬೆಂಗಳೂರಿನ ನಾಗರಿಕರಿಗೆ ಕಲ್ಪಿಸಿದೆ. ಇದರಿಂದಾಗಿ, ದೇಶದಲ್ಲಿಯೇ ಅತ್ಯಧಿಕ ವೇಗದ ಇಂಟರ್ನೆಟ್‌ ಸಂಪರ್ಕದ ಸವಲತ್ತು ಹೊಂದಿರುವ ಮೊದಲ ನಗರ ಎನ್ನುವ ಅಗ್ಗಳಿಕೆ ಬೆಂಗಳೂರಿನ ಪಾಲಾಗಿದೆ.

ಅತ್ಯಧಿಕ ವೇಗದ ಇಂಟರ್ನೆಟ್‌, ಟೆಲೆಫೊನಿ, ಟೀವಿ, ವಿಡಿಯಾ, ವಿಡಿಯಾ ಕಾನ್ಫರೆನ್ಸಿಂಗ್‌, ಗೇಮಿಂಗ್‌ ಮತ್ತು ಇ-ಲರ್ನಿಂಗ್‌ ಸವಲತ್ತುಗಳನ್ನು ಬಿಎಸ್‌ಎಲ್‌ಎಲ್‌ ಒದಗಿಸಿರುವ ನೂತನ ಪ್ಯಾಕೇಜ್‌ನಿಂದ ಪಡೆಯಬಹುದಾಗಿದೆ. ಇವಿಷ್ಟೂ ಸವಲತ್ತುಗಳು ಒಂದೇ ಒಂದು ಸಂಪರ್ಕದಿಂದ ದೊರೆಯುವುದು ನೂತನ ಯೋಜನೆಯ ವಿಶೇಷ.

ನಾಲ್ಕು ಎಕ್ಸ್‌ಚೇಂಜ್‌ಗಳ ಮೂಲಕ ಬಿಎಸ್‌ಎಲ್‌ಎಲ್‌ನ ನೂತನ ಯೋಜನೆಯು ಗ್ರಾಹಕರಿಗೆ ತಲುಪಲಿದೆ. ಅವುಗಳೆಂದರೆ- ಸೆಂಟ್ರಲ್‌, ಅಲಸೂರು, ಕೋರಮಂಗಲ ಹಾಗೂ ನಗರ ಟೆಲಿಫೋನ್‌ ಎಕ್ಸ್‌ಚೇಂಜ್‌. ಮೊದಲ ಹಂತವಾಗಿ ಮಾರ್ಚ್‌ 2004ರವರೆಗೆ ಕೇವಲ 1 ಸಾವಿರ ಸಂಪರ್ಕಗಳಿಗೆ ಮಾತ್ರ ಈ ಸವಲತ್ತು ದೊರೆಯಲಿದ್ದು , ನಂತರದಲ್ಲಿ ಪ್ರತಿ ತಿಂಗಳೂ 500 ಸಂಪರ್ಕಗಳು ಸೇರ್ಪಡೆಯಾಗಲಿವೆ.

ಐ ಸ್ಪೇಷಿಯಲ್‌ ಕಮ್ಯುನಿಕೇಷನ್‌ ಸಹಯೋಗದೊಂದಿಗೆ ಬಿಎಸ್‌ಎಲ್‌ಎಲ್‌ ಹೈಸ್ಪೀಡ್‌ ಇಂಟರ್ನೆಟ್‌ ಸೇವೆಯನ್ನು ಒದಗಿಸುತ್ತಿದೆ. ಈ ಸವಲತ್ತು ಪಡೆಯಲು ಸೆಟ್‌-ಟಾಪ್‌ ಬಾಕ್ಸ್‌ಗಳು ಅಗತ್ಯ. ಗೃಹೋಪಯೋಗಿ ಸಂಪರ್ಕಗಳ ಪ್ಯಾಕೇಜ್‌ಗೆ 999 ರುಪಾಯಿಯ ಮಾಸಿಕ ಶುಲ್ಕವನ್ನು ಗೊತ್ತುಪಡಿಸಲಾಗಿದೆ. ವಾಣಿಜ್ಯ ಸಂಪರ್ಕಗಳ ಶುಲ್ಕವನ್ನು ನಂತರದಲ್ಲಿ ಪ್ರಕಟಿಸಲಾಗುವುದು ಎಂದು ಬಿಎಸ್‌ಎಲ್‌ಎಲ್‌ ಅಧ್ಯಕ್ಷ ಪ್ರೀತ್‌ಪಾಲ್‌ ಸಿಂಗ್‌ ತಿಳಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X