ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಾಪಾ ಪಾಪದಲ್ಲಿ ಪತ್ರಕರ್ತನ ಡೀಲು ! ತೆಲಗಿ ಹೇಳಿದ ಇನ್ನಷ್ಟು ಸತ್ಯ

By Staff
|
Google Oneindia Kannada News

ಛಾಪಾ ಪಾಪದಲ್ಲಿ ಪತ್ರಕರ್ತನ ಡೀಲು ! ತೆಲಗಿ ಹೇಳಿದ ಇನ್ನಷ್ಟು ಸತ್ಯ
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಛಗನ್‌ ಭುಜ್‌ಬಲ್‌ ರಾಜೀನಾಮೆ

ಬೆಂಗಳೂರು : ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್‌ ಕರೀಂ ತೆಲಗಿ ನಾರ್ಕೋ ಅನಾಲಿಸಿಸ್‌ (ಮಂಪರು ಪರೀಕ್ಷೆ) ನಲ್ಲಿ ಆಂಗ್ಲ ದೈನಿಕದ ಒಬ್ಬ ಪತ್ರಪಕರ್ತ, ಇಬ್ಬರು ಮಂತ್ರಿಗಳು, ನಾಲ್ವರು ಐಪಿಎಸ್‌ ಅಧಿಕಾರಿಗಳು, ಮೂವರು ಎಸಿಪಿಗಳು ಹಾಗೂ ನಾಲ್ವರು ಇನ್ಸ್‌ಪೆಕ್ಟರ್‌ಗಳ ಹೆಸರನ್ನು ಹೇಳಿದ್ದಾನೆಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ‘ಸ್ಟಾಂಪಿಟ್‌’ ಅಧಿಕಾರಿಗಳು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತೆಲಗಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿದಾಗ ಹಲವು ಮಹತ್ವದ ರಹಸ್ಯಗಳು ಬೆಳಕಿಗೆ ಬಂದಿವೆ ಎನ್ನಲಾಗುತ್ತಿದೆ. 1998ರಿಂದಲೇ ರಾಜ್ಯದಲ್ಲಿ ನಕಲಿ ಛಾಪಾ ಕಾಗದದ ಜಾಲ ತಳವೂರಿತ್ತು. ಆದ ಕಾರಣ ಸ್ಟಾಂಪ್‌ ಆದಾಯ ಗಣನೀಯವಾಗಿ ಕುಸಿದಿತ್ತು. 1999ರಲ್ಲಿ ಒಬ್ಬ ಮಂತ್ರಿಗಳ ಗಮನಕ್ಕೆ ಈ ವಿಚಾರ ಬಂದರೂ ಅವರು ಸುಮ್ಮನಿದ್ದರು. ಬಂಧಿತ ತೆಲಗಿ ಸಹಚರನೊಬ್ಬ ಆ ಮಂತ್ರಿಯನ್ನು ಪದೇ ಪದೇ ಭೇಟಿಯಾಗುತ್ತಿದ್ದ ಎಂಬ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸರು ಹಾಗೂ ಕೆಲವು ರಾಜಕಾರಣಿಗಳಿಗೆ ಹರಗಣದಿಂದ ಆಗಾಗ ಹಣ ಸಿಕ್ಕಿರುವುದು ನಿಜ. ಆದರೆ ಆಂಗ್ಲ ಪತ್ರಿಕೆಯ ಒಬ್ಬ ಪತ್ರಕರ್ತ ತನ್ನ ಛಾಪಾ ಕಾಗದದ ವ್ಯವಹಾರದಲ್ಲಿ ಸಲಹೆಗಾರನಾಗಿದ್ದುಕೊಂಡು ಸಾಕಷ್ಟು ಹಣ ಮಾಡಿದ್ದಾನೆ ಎಂಬ ವಿಚಾರವನ್ನು ತೆಲಗಿ ಬಾಯಿಬಿಟ್ಟಿದ್ದಾನೆ.

ಭುಜ್‌ಬಲ್‌ ರಾಜೀನಾಮೆ : ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಛಗನ್‌ ಭುಜ್‌ಬಲ್‌ ಮಂಗಳವಾರ (ಡಿ.23) ರಾತ್ರಿ ದಿಢೀರನೆ ರಾಜೀನಾಮೆ ಕೊಟ್ಟಿದ್ದಾರೆ. ತಮ್ಮ ರಾಜೀನಾಮೆಗೆ ಖಾಸಗಿ ಟಿವಿ ಚಾನೆಲ್‌ ಒಂದರ ಮೇಲೆ ನಡೆದ ದಾಳಿಯ ನೈತಿಕ ಹೊಣೆಯ ಸಬೂಬನ್ನು ಭುಜ್‌ಬಲ್‌ ಹೇಳಿದ್ದಾರೆ. ಆದರೆ ಅನೇಕ ರಾಜಕೀಯ ಪಂಡಿತರ ಪ್ರಕಾರ ನಕಲಿ ಛಾಪಾ ಕಾಗದ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪದಿಂದ ಭುಜ್‌ಬಲ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಗೃಹ ಸಚಿವನಾಗಿರುವ ಕಾರಣ ಚಾನೆಲ್‌ ಮೇಲೆ ನಡೆದಿರುವ ದಾಳಿಯ ನೈತಿಕ ಹೊಣೆಯನ್ನು ಹೊರಲೇ ಬೇಕಾಗುತ್ತದೆ. ನನ್ನ ರಾಜೀನಾಮೆಗೂ ಛಾಪಾ ಕಾಗದ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭುಜ್‌ಬಲ್‌ ಸ್ಪಷ್ಟಪಡಿಸಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X