ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸಮಸ್‌ ರಜೆಗೆ ‘ಹಾಸ್ಯೋತ್ಸವ 2 ಕೆ 3’!

By Staff
|
Google Oneindia Kannada News

ಕ್ರಿಸಮಸ್‌ ರಜೆಗೆ ‘ಹಾಸ್ಯೋತ್ಸವ 2 ಕೆ 3’!
ಎಚ್ಚೆನ್‌ ಕಲಾಕ್ಷೇತ್ರದಲ್ಲಿ ಹಾಸ್ಯೋತ್ಸವ ; ಈ ಸಲ 4 ಸಾವಿರ ಅಭಿಮಾನಿಗಳಿಗೆ ಕೂರುವ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು : ಡಿಸೆಂಬರ್‌ 25 ಕ್ರಿಸ್‌ಮಸ್‌ ರಜೆಯನ್ನು ಹೊಟ್ಟೆ ಹುಣ್ಣಾಗುವಂತೆ ನಗುವ ಮೂಲಕ ಕಳೆಯುವ ಅವಕಾಶ ಬಂದಿದೆ. ಅವತ್ತು ನಗರದ ಎಚ್ಚೆನ್‌ ಕಲಾಕ್ಷೇತ್ರದಲ್ಲಿ ‘ಹಾಸ್ಯೋತ್ಸವ 2 ಕೆ 3’.

ವಿಡಂಬನೆ, ವ್ಯಂಗ್ಯ, ನಗೆಹನಿ, ಹಾಸ್ಯ ರಸಾನುಭವ- ಇವನ್ನೆಲ್ಲ ಹಂಚಿಕೊಳ್ಳಲು ಪತ್ರಿಕಾ ಲೋಕದ ಧೀಮಂತರಾದ ಟಿಎಸ್ಸಾರ್‌ ಮತ್ತು ವೈಯೆನ್ಕೆ ನೆನಪುಗಳು ಧಾರಾಳ ಸರಕನ್ನು ಒದಗಿಸಲಿವೆ. ವಿಜಯ ಕರ್ನಾಟಕ ಪತ್ರಿಕೆ. ಸಂಪಾದಕ ವಿಶ್ವೇಶ್ವರ ಭಟ್‌ ಹಾಗೂ ನಟ ಅನಂತನಾಗ್‌ ವೈಯೆನ್ಕೆ ಚಟಾಕಿಗಳನ್ನು ನೆನಪಿಸಲಿದ್ದು, ಹಿರಿಯ ಪತ್ರಕರ್ತ ಬಿ.ವಿ.ವೈಕುಂಠರಾಜು ಟಿಎಸ್ಸಾರ್‌ ಬಗ್ಗೆ ಮಾತನಾಡಲಿದ್ದಾರೆ. ಸಂಗೀತದಲ್ಲಿ ಹಾಸ್ಯ ಕುರಿತು ಆರ್‌.ಕೆ.ಪದ್ಮನಾಭ, ಸಾವಿನಲ್ಲಿ ಹಾಸ್ಯದ ಬಗೆಗೆ ರಿಚಡ್‌ ಲೂಯಿಸ್‌ ಹಾಗೂ ಫನ್‌ ಎನ್‌ಸೈಕ್ಲೋಪಿಡಿಯಾ ಕುರಿತು ವೈ.ವಿ.ಗುಂಡೂರಾವ್‌ ಮಾತನಾಡಲಿದ್ದಾರೆ. ಮಿಮಿಕ್ರಿ ದಯಾನಂದ್‌ರ ಹಾಸ್ಯ ಕಾರ್ಯಕ್ರಮದ ಬೋನಸ್ಸೂ ಇದೆ.

Reminiscence of YNKಈ ಹಿಂದಿನ ಹಾಸ್ಯೋತ್ಸವಗಳಲ್ಲಿ ನಾ.ಕಸ್ತೂರಿ, ಟಿ.ಪಿ.ಕೈಲಾಸಂ, ರಾಶಿ, ಊೕಚಿ ನಾಡಿಗೇರ್‌ ಕೃಷ್ಣರಾವ್‌, ಪಾ.ವೆಂ.ಆಚಾರ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಹಾಗೂ ದಾಶರಥಿ ದೀಕ್ಷಿತರನ್ನು ಸ್ಮರಿಸಲಾಗಿತ್ತು. ಸಾಕಷ್ಟು ನಗೆ ಕಾರ್ಯಕ್ರಮಗಳು ಈ ಹಾಸ್ಯ ಧೀಮಂತರ ಕುರಿತೇ ಹೆಣಯಲಾಗಿದ್ದವು. ಈ ಸಲ ವೆಯನ್ಕೆ ಹಾಗೂ ಟಿಎಸ್ಸಾರ್‌ ನೆನಪುಗಳ ಪಲುಕು ಕಚಗುಳಿಯ ನೆಪ.

ಹಾಸ್ಯೋತ್ಸವದ ಸಂಚಾಲಕರಾದ ಕೃಷ್ಣ ಸುಬ್ಬರಾವ್‌, ಬೇಲೂರು ರಾಮಮೂರ್ತಿ ಹಾಗೂ ಕೊರವಂಜಿ ಟ್ರಸ್ಟ್‌ನ ಶಿವಕುಮಾರ್‌ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ಕೊಟ್ಟರು. ಹಾಸ್ಯೋತ್ಸವಕ್ಕೆ ಕಳೆದ ವರ್ಷ ಸಾಕಷ್ಟು ಜನ ಜಮಾಯಿಸಿದ್ದರು. ಸ್ಥಳಾವಕಾಶದ ಕೊರತೆಯಾಗಿತ್ತು. ಹಾಗಾಗಿ ಈ ಬಾರಿ ಎಚ್ಚೆನ್‌ ಕಲಾಕ್ಷೇತ್ರದ ಹೊರಾಂಗಣದಲ್ಲಿ ಶಾಮಿಯಾನ ಹಾಕಿ, ಅಲ್ಲಿ ಹಾಸ್ಯೋತ್ಸವ ನಡೆಸಲಾಗುತ್ತದೆ. ಕಲಾಕ್ಷೇತ್ರದ ಒಳಗೆ ದೊಡ್ಡ ಪರದೆ ಮೇಲೆ ಉತ್ಸವದ ಕ್ಷಣಗಳನ್ನು ತೋರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.

ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಶುರುವಾಗಲಿದ್ದು, ದಿನವಿಡೀ ಕಚಗುಳಿ. ಅ.ರಾ.ಮಿತ್ರ ಉಸ್ತುವಾರಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ನಗೆ ಕಾರಂಜಿ, ರಸಪ್ರಶ್ನೆ ಮೊದಲಾದ ಐಟಂಗಳಿವೆ. ಇದೇ ಸಂದರ್ಭದಲ್ಲಿ ಹಾಸ್ಯ ಬರಹಗಾರರ 18 ಕೃತಿಗಳನ್ನೂ ಅನಾವರಣ ಮಾಡಲಾಗುವುದು. ಐಸ್‌ ಟಿ.ವಿ.ಯಲ್ಲಿ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಗಾನ ವಿನೋದಿನಿ ತಂಡದವರಿಂದ ಹಾಡು- ಹಸೆಯೂ ಉಂಟು. ಹೋದ ವರ್ಷದ ಹಾಸ್ಯೋತ್ಸವದ ಸಿ.ಡಿ.ಗಳನ್ನು ಮಾರಾಟಕ್ಕೆ ಇಡಲಾಗುವುದು. ಎರಡು ಸಿ.ಡಿ.ಗಳ ಒಂದು ಸೆಟ್‌ಗೆ 300 ರುಪಾಯಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X