ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಧಿತನು ನಕಲಿ ಸದ್ದಾಂ! ನೈಜ ಸದ್ದಾಂ 2 ವರ್ಷದಲ್ಲಿ ಮತ್ತೆ ಗಾದಿಗೆ

By Staff
|
Google Oneindia Kannada News

ಬಂಧಿತನು ನಕಲಿ ಸದ್ದಾಂ! ನೈಜ ಸದ್ದಾಂ 2 ವರ್ಷದಲ್ಲಿ ಮತ್ತೆ ಗಾದಿಗೆ
ಸದ್ದಾಂ ಬಂಧನದ ಸುದ್ದಿ ಅಮೆರಿಕನ್ನರಿಗೆ ಕ್ರಿಸ್‌ಮಸ್‌ ಉಡುಗೊರೆ ಮಾತ್ರ -ಗುಲ್ಬರ್ಗಾ ಜ್ಯೋತಿಷಿ

ಗುಲ್ಬರ್ಗಾ : ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್‌, ಇನ್ನು ಮೂರು ವರ್ಷಗಳಲ್ಲಿ ಮತ್ತೆ ಇರಾಕಿನ ಅಧ್ಯಕ್ಷರಾಗಲಿದ್ದಾರೆ ಎಂದು ಗುಲ್ಬರ್ಗಾದ ಖ್ಯಾತ ಜ್ಯೋತಿಷಿ ಡಾ.ಜಲಾಲುದ್ದೀನ್‌ ಹುಸೇನ್‌ ಭವಿಷ್ಯ ನುಡಿದಿದ್ದಾರೆ.

ಪ್ರಸ್ತುತ ಅಮೆರಿಕ ಪಡೆಗಳ ಬಂಧನದಲ್ಲಿರುವ ವ್ಯಕ್ತಿ ಸದ್ದಾಂ ಹುಸೇನರ ನಕಲಿ ಎಂದು ಡಾ.ಜಲಾಲುದ್ದೀನ್‌ ಹೇಳಿದ್ದಾರೆ. ತಮ್ಮ ಹೇಳಿಕೆಯು ಜ್ಯೋತಿಷ್ಯ ಶಾಸ್ತ್ರಗಳನ್ನು ಆಧರಿಸಿದೆ ಎಂದು ಸೋಮವಾರ (ಡಿ.22) ಸುದ್ದಿಗಾರರೊಂದಿಗೆ ಮಾತನಾಡಿದ ಜಲಾಲುದ್ದೀನ್‌ ತಿಳಿಸಿದರು.

ಜನ್ಮ ದಿನಾಂಕ ಹಾಗೂ ಚಂದ್ರನ ಚಲನೆಯ ಮೇಲೆ ವ್ಯಕ್ತಿಯಾಬ್ಬನ ಮುಂದಿನ ದಿನಗಳನ್ನು ನಿಖರವಾಗಿ ಗುರ್ತಿಸಬಹುದಾಗಿದೆ. ಆದರೆ, ಈ ರೀತಿಯ ಗ್ರಹಿಕೆಗೆ ಅತ್ಯಂತ ಆಳವಾದ ಪಾಂಡಿತ್ಯ ಅಗತ್ಯ ಎಂದು ಜಲಾಲುದ್ದೀನ್‌ ಹೇಳಿದರು. ಅಂದಹಾಗೆ, ಜಲಾಲುದ್ದೀನ್‌ ಅವರು ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಜ್ಯೋತಿಷಿ.

ಸದ್ದಾಂ ಹುಸೇನ್‌ ಅವರ ಜನ್ಮ ದಿನಾಂಕ ಏಪ್ರಿಲ್‌ 28, 1937. ಈ ಜನ್ಮ ದಿನಾಂಕದ ಪ್ರಕಾರ ಸದ್ದಾಂ ಹುಸೇನ್‌ ಅತ್ಯಂತ ಬುದ್ಧಿವಂತ ಹಾಗೂ ಚಾಣಾಕ್ಷ . ಮೋಸಗಾರ ಕೂಡ. ಸದ್ದಾಂ ಹುಸೇನ್‌ ಅವರನ್ನು ಬಂಧಿಸಿದ್ದೇವೆ ಎನ್ನುವ ಅಮೆರಿಕದ ಹೇಳಿಕೆ ಆ ದೇಶದ ಜನರಿಗೆ ಕ್ರಿಸ್‌ಮಸ್‌ ಉಡುಗೊರೆ ಮಾತ್ರ, ಎಂದು ಜಲಾಲುದ್ದೀನ್‌ ಬಣ್ಣಿಸಿದರು.

ರಿಪಬ್ಲಿಕನ್‌ ಗಾರ್ಡ್‌ಗಳ ರಕ್ಷಣೆಯಲ್ಲಿ ಸದ್ದಾಂ ಹುಸೇನ್‌ ಸುರಕ್ಷಿತವಾಗಿದ್ದಾನೆ. ನಿಜವಾದ ಸದ್ದಾಂಗೆ ಕಿವಿಯಲ್ಲಿ ಕೂದಲುಗಳಿರಲಿಲ್ಲ . ಆದರೆ, ಪ್ರಸ್ತುತ ಬಂಧನಕ್ಕೊಳಗಾಗಿರುವ ವ್ಯಕ್ತಿಗೆ ಕಿವಿಯಲ್ಲಿ ಕೂದಲುಗಳಿವೆ. ಅದೇರೀತಿ, ಸದ್ದಾಂ ತಲೆಯ ಮೇಲಿದ್ದ ಹುಟ್ಟು ಗುರುತೊಂದು ಬಂಧಿತ ವ್ಯಕ್ತಿಯಲ್ಲಿಲ್ಲ . ಈ ಕಾರಣದಿಂದಾಗಿ ಬಂಧಿತ ವ್ಯಕ್ತಿ ಸದ್ದಾಂ ಹುಸೇನನ ನಕಲಿ ಎಂದು ಜಲಾಲುದ್ದೀನ್‌ ವಾದಿಸಿದರು.

ಬುಷ್‌ಗೆ ಇದೇ ಕೊನೆಯ ಪಾಳಿ : ಸದ್ದಾಂ ಹುಸೇನ್‌ ಮತ್ತೆ ಇರಾಕಿನ ಅಧ್ಯಕ್ಷರಾಗುತ್ತಾರೆ ಹಾಗೂ ಅಮೆರಿಕನ್‌ ಜನತೆಗೆ ಷಾಕ್‌ ನೀಡುತ್ತಾರೆ ಎಂದು ಭವಿಷ್ಯ ನುಡಿದ ಜಲಾಲುದ್ದೀನ್‌, ಅಮೆರಿಕಾ ಅಧ್ಯಕ್ಷ ಬುಷ್‌ ಅವರಿಗೆ ಇದೇ ಕೊನೆಯ ಪಾಳಿ. ಅವರು ಮತ್ತೆ ಅಮೆರಿಕಾ ಅಧ್ಯಕ್ಷರಾಗಿ ಚುನಾಯಿತರಾಗುವುದಿಲ್ಲ ಎಂದರು.

ನರಹಂತಕ ವೀರಪ್ಪನ್‌ನಿಂದ ರಾಜ್‌ಕುಮಾರ್‌ ಬಿಡುಗಡೆ ಹಾಗೂ ಮಾಜಿ ಸಚಿವ ನಾಗಪ್ಪನವರ ಹತ್ಯೆಯ ಕುರಿತ ತಮ್ಮ ಭವಿಷ್ಯ ನಿಜವಾಗಿದೆ ಎಂದು ಡಾ.ಜಲಾಲುದ್ದೀನ್‌ ಹೇಳಿಕೊಂಡರು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X