ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಾಪಾ ಪಾಪ : ರೋಷನ್‌ ಸೋದರ ರೆಹಾನ್‌ ಪೊಲೀಸ್‌ ವಶಕ್ಕೆ

By Staff
|
Google Oneindia Kannada News

ಛಾಪಾ ಪಾಪ : ರೋಷನ್‌ ಸೋದರ ರೆಹಾನ್‌ ಪೊಲೀಸ್‌ ವಶಕ್ಕೆ
ಇದು ರಾಜಕೀಯ ಹುನ್ನಾರ- ರೆಹಾನ್‌

ಬೆಂಗಳೂರು : ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶನಿವಾರ (ಡಿ. 20) ವಿಶೇಷ ತನಿಖಾ ತಂಡ, ಸ್ಟಾಂಪಿಟ್‌ಗೆ ಶರಣಾಗಿರುವ ಸಚಿವ ರೋಷನ್‌ ಬೇಗ್‌ ಸೋದರನನ್ನು ಜನವರಿ 1, 2004 ರ ವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ.

ಆರೋಪಿ ರೆಹಾನ್‌ ಬೇಗ್‌ ಅವರನ್ನು ಹೆಚ್ಚುವರಿ ವಿಚಾರಣೆಗಾಗಿ ಪೊಲೀಸ್‌ ವಶಕ್ಕೆ ಒಪ್ಪಿಸಿ 9ನೇ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ಚಂದ್ರಶೇಖರ ಬಿ. ಹಿಪ್ಪರಗಿ ಸೋಮವಾರ (ಡಿ. 22) ಆದೇಶವಿತ್ತರು. ರೆಹಾನ್‌ ಬ್ಯಾಂಕ್‌ ಖಾತೆಗಳನ್ನು ಕೆದಕುವ ಹಾಗೂ ಆತ ಪ್ರಕರಣದಲ್ಲಿ ಶಾಮಾಲಾಗಿರುವ ಬಗ್ಗೆ ಹೊಸತೊಂದು ಸಾಕ್ಷ ್ಯದ ವಾಸನೆ ಬಡಿರುವುದನ್ನು ಪತ್ತೆ ಮಾಡುವ ಉದ್ದೇಶದಿಂದ ವಿಚಾರಣೆಗೆ ತಮ್ಮ ವಶಕ್ಕೆ ಒಪ್ಪಿಸಬೇಕೆಂದು ವಿಶೇಷ ತನಿಖಾ ತಂಡ, ಸ್ಟಾಂಪಿಟ್‌ ನ್ಯಾಯಾಲಯವನ್ನು ಕೇಳಿತ್ತು.

ಸ್ಟಾಂಪಿಟ್‌ ಈಗಾಗಲೇ ತಮ್ಮ ಕಕ್ಷಿದಾರನನ್ನು 26 ಸಲ ವಿಚಾರಣೆ ಮಾಡಿದೆ. ‘ಪಾಲಿಗ್ರಾಫ್‌’ ಪರೀಕ್ಷೆಗೂ ಆತ ಒಳಪಟ್ಟಿದ್ದಾರೆ. ಇನ್ನೂ ವಿಚಾರಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ರೆಹಾನ್‌ ಬೇಗ್‌ ಪರ ವಕೀಲ ಪ್ರತಿಕ್ರಿಯಿಸಿದರು.

ರೆಹಾನ್‌ಗೆ ಜಾಮೀನು ಕೋರಿ ವಕೀಲರು ಅರ್ಜಿ ಸಲ್ಲಿಸಿದ್ದು, ಅದಕ್ಕೆ ಏನಾದರೂ ತಕರಾರು ಇದ್ದರೆ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸ್ಟಾಂಪಿಟ್‌ಗೆ ಮ್ಯಾಜಿಸ್ಟ್ರೇಟ್‌ ಸೂಚಿಸಿದರು. ಜಾಮೀನು ಅರ್ಜಿಯಲ್ಲಿ ಉಲ್ಲೇಖವಾಗಿರುವಂತೆ ರೆಹಾನ್‌ ಬೇಗ್‌ ವೈದ್ಯಕೀಯ ಪದವೀಧರ. ಕ್ಲಿನಿಕಲ್‌ ಪ್ಯಾಥಾಲಜಿ ವಿಷಯದಲ್ಲಿ ಒಂದು ಸ್ನಾತಕೋತ್ತರ ಡಿಪ್ಲೊಮಾ ಕೂಡ ಮಾಡಿದ್ದಾರೆ.

ನ್ಯಾಯಾಲಯದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ರೆಹಾನ್‌ ಬೇಗ್‌, ತಾನು ನಿರ್ದೋಷಿ. ರಾಜಕೀಯ ಒತ್ತಡಕ್ಕೆ ಮಣಿದು ಸ್ಟಾಂಪಿಟ್‌ ತನ್ನನ್ನು ಪ್ರಕರಣದಲ್ಲಿ ಸಿಲುಕಿಸುತ್ತಿದೆ ಎಂದು ದೂರಿದರು.

ತೆಲಗಿ ಜೊತೆ ಬರೀ ಎಣ್ಣೆ ವ್ಯಾಪಾರ ಮಾಡಿದ್ದೆ : ‘ಏಳು ವರ್ಷಗಳ ಹಿಂದೆ ಪಾಮೊಲಿನ್‌ ಎಣ್ಣೆ ಹಾಗೂ ಸೀಮೆಎಣ್ಣೆ ವ್ಯಾಪಾರ ಮಾಡುತ್ತಿದ್ದಾಗ ಮೂರು ತಿಂಗಳ ಮಟ್ಟಿಗೆ ಅಬ್ದುಲ್‌ ಕರೀಂ ತೆಲಗಿ ಜೊತೆ ವ್ಯವಹರಿಸಿದ್ದುಂಟು. ಆದರೆ ಛಾಪಾ ಕಾಗದ ವ್ಯಾಪಾರದ ಬಗ್ಗೆ ಏನೇನೂ ಗೊತ್ತಿಲ್ಲ. ಸದ್ಯಕ್ಕೆ ಬೀಸೋ ದೊಣ್ಣೆಯಿಂದ ತಾನು ಪಾರಾದರೆ ಸಾಕು ಎಂಬ ಮನೋಭಾವನೆಯಿಂದ ತೆಲಗಿ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾನೆ. ನನ್ನ ಅಣ್ಣನನ್ನು ರಾಜಕೀಯವಾಗಿ ಮುಗಿಸಲು ಹೊಸೆದಿರುವ ಸಂಚು ಇದು’ ಎಂದು ರೆಹಾನ್‌ ಆವೇಶದಿಂದ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X