ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ನಡೆಯಿತು ಕರೀಂ ಲಾಲ ತೆಲಗಿ ಸುಳ್ಳು ಪತ್ತೆ ಪರೀಕ್ಷೆ !

By Staff
|
Google Oneindia Kannada News

ಕೊನೆಗೂ ನಡೆಯಿತು ಕರೀಂ ಲಾಲ ತೆಲಗಿ ಸುಳ್ಳು ಪತ್ತೆ ಪರೀಕ್ಷೆ !
ತೆಲಗಿ ಬಾಯಲ್ಲಿ ಯಾರ್ಯಾರ ಹೆಸರು ಉದುರಿರಬಹುದು ಎಂಬುದು ಉಳಿದಿರುವ ಕುತೂಹಲ

ಬೆಂಗಳೂರು : ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್‌ ಕರೀಂ ತೆಲಗಿಯನ್ನು ಶುಕ್ರವಾರ (ಡಿ. 19) ನಗರದಲ್ಲಿ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಯಿತು.

ಪುಣೆ ಕೋರ್ಟಿನ ಆದೇಶದ ಮೇರೆಗೆ ವಿಧಿ ವಿಜ್ಞಾನ ಪ್ರಯೋಗಾಲಯ (ಫೊರೆನ್ಸಿಕ್‌ ಲ್ಯಾಬ್‌) ದಲ್ಲಿ ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಯಿತು ಎಂದು ‘ಸ್ಟಾಂಪಿಟ್‌’ ಮುಖ್ಯಸ್ಥ ಶ್ರೀಕುಮಾರ್‌ ಸುದ್ದಿಗಾರರಿಗೆ ಹೇಳಿದರು. ಮಹಾರಾಷ್ಟ್ರದಲ್ಲಿ ನಕಲಿ ಛಾಪಾ ಕಾಗದ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತೆಲಗಿಯನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಅನುಮತಿ ಕೋರಿ ಪುಣೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಕೋರ್ಟು ಮನವಿಗೆ ಸ್ಪಂದಿಸಿ, ಪರೀಕ್ಷೆಗೆ ಅವಕಾಶ ಮಾಡಿಕೊಡಿ ಎಂದು ಕರ್ನಾಟಕಕ್ಕೆ ಆದೇಶ ಕೊಟ್ಟಿತು.

ತೆಲಗಿ ಆರೋಗ್ಯ ಮೊದಲೇ ಹದಗೆಟ್ಟಿದೆ. ಆತನ ಮೇಲೆ ಸುಳ್ಳು ಪತ್ತೆ ಪರೀಕ್ಷೆ ಹೇರುವುದು ಅಪಾಯಕಾರಿಯಾಗಬಲ್ಲದು. ಸಾಲದ್ದಕ್ಕೆ ಸುಳ್ಳು ಪತ್ತೆ ಪರೀಕ್ಷೆ ಹುರುಳಿಲ್ಲದ್ದು ಎಂದು ತೆಲಗಿ ಪರ ವಕೀಲ ನಾಣಯ್ಯ ಇತ್ತೀಚೆಗಷ್ಟೇ ಹೇಳಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X