• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾನನಷ್ಟ : ಪತ್ರಕರ್ತ ಹಾಗೂ ಮೂವರು ಲೇಖಕರಿಗೆ ಜೈಲುಶಿಕ್ಷೆ

By Staff
|

ಮಾನನಷ್ಟ : ಪತ್ರಕರ್ತ ಹಾಗೂ ಮೂವರು ಲೇಖಕರಿಗೆ ಜೈಲುಶಿಕ್ಷೆ

ಪ್ರಾಧ್ಯಾಪಕರಾದ ರಂಗಾರೆಡ್ಡಿ , ಬಿ.ಗಂಗಾಧರಮೂರ್ತಿ ಹಾಗೂ ಶಿವಲಿಂಗಯ್ಯ ಅವರಿಗೆ ಶಿಕ್ಷೆ

ಕೋಲಾರ : ಕೋಲಾರದ ‘ಸಂಚಿಕೆ’ ದಿನಪತ್ರಿಕೆಯ ಸಂಪಾದಕ ಹಾಗೂ ಗೌರಿಬಿದನೂರು ನ್ಯಾಷನಲ್‌ ಕಾಲೇಜಿನ ಮೂವರು ಪ್ರಾಧ್ಯಾಪಕರಿಗೆ ಕೋಲಾರದ ಪ್ರಥಮ ದರ್ಜೆ ನ್ಯಾಯಾಲಯ ಮಾನನಷ್ಟ ಪ್ರಕರಣವೊಂದರಲ್ಲಿ 6 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ.

ನ್ಯಾಷನಲ್‌ ಕಾಲೇಜಿನ ಪ್ರಾಧ್ಯಾಪಕರಾದ ಬಸವರಾಜು ಅವರು ಸಲ್ಲಿಸಿದ್ದ ಮಾನನಷ್ಟ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ನಾಲ್ವರು ಆರೋಪಿಗಳಿಗೆ 6 ತಿಂಗಳ ಸಾದಾ ಸಜೆ ಹಾಗೂ ತಲಾ 3 ಸಾವಿರ ರುಪಾಯಿ ದಂಡ ವಿಧಿಸಿತು.

ತಮ್ಮ ಹಾಗೂ ಪಾಂಡುರಂಗ ನಾಯಕ್‌, ಮಹಮದ್‌ ಸಲೀಂ ಮತ್ತು ಸೋಮಶೇಖರ್‌ ಎನ್ನುವವರ ವಿರುದ್ಧ ಆಪಾದಿತರು ಸಂಚಿಕೆ ಪತ್ರಿಕೆಯಲ್ಲಿ ಮಾನನಷ್ಟವಾಗುವಂಥ ಹೇಳಿಕೆ ಪ್ರಕಟಿಸಿದ್ದಾರೆ ಎಂದು ಬಸವರಾಜು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. 1998ರಲ್ಲಿ ನಡೆದ ಕಾಲೇಜು ಪ್ರಾಧ್ಯಾಪಕರ ರಾಷ್ಟ್ರವ್ಯಾಪಿ ಮುಷ್ಕರದ ಸಂದರ್ಭದಲ್ಲಿ ಸಂಚಿಕೆ ಪತ್ರಿಕೆಯಲ್ಲಿ ಈ ವಿವಾದಿತ ಹೇಳಿಕೆ ಪ್ರಕಟವಾಗಿತ್ತು .

ಶಿಕ್ಷೆಗೆ ಗುರಿಯಾಗಿರುವ ನ್ಯಾಷನಲ್‌ ಕಾಲೇಜಿನ ಪ್ರಾಧ್ಯಾಪಕರಾದ ರಂಗಾರೆಡ್ಡಿ , ಬಿ.ಗಂಗಾಧರಮೂರ್ತಿ ಹಾಗೂ ಶಿವಲಿಂಗಯ್ಯ ಅವರು ಲೇಖಕರಾಗಿಯೂ ಪ್ರಸಿದ್ಧರಾಗಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more