ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಡು-ನಾಟಕ- ನೃತ್ಯ ವೈಭವದ ಉಡುಪಿ ಉತ್ಸವಕ್ಕೆ ಅಂತಿಮ ಸಿದ್ಧತೆ

By Staff
|
Google Oneindia Kannada News

ಹಾಡು-ನಾಟಕ- ನೃತ್ಯ ವೈಭವದ ಉಡುಪಿ ಉತ್ಸವಕ್ಕೆ ಅಂತಿಮ ಸಿದ್ಧತೆ
ಉತ್ಸವದಲ್ಲಿ ಹರಿಪ್ರಸಾದ್‌ ಚೌರಾಸಿಯಾ ಬಾನ್ಸುರಿ, ಕೆರೆಮನೆ ಶಂಭು ಹೆಗಡೆ ಯಕ್ಷಗಾನ

ಉಡುಪಿ : ಡಿಸೆಂಬರ್‌ 22ರಿಂದ ಜನವರಿ 21, 2004 ರವರೆಗೆ ನಡೆಯಲಿರುವ ಉಡುಪಿ ಉತ್ಸವದ ಅಂತಿಮ ರೂಪುರೇಷೆ ಸಿದ್ಧವಾಗಿದೆ.

ಅಜ್ಜರ ಕಾಡು, ಮಲ್ಪೆ ಕಡಲತೀರ, ಕಾರ್ಕಳ, ಕೊಲ್ಲೂರು, ಹಿರ್ಗೀನ, ಬಂಟಕಲ್ಲು - ಈ ಜಾಗೆಗಳಲ್ಲಿ ವಿವಿಧ ಅವಧಿಗಳಲ್ಲಿ ಉಡುಪಿ ಉತ್ಸವದ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಎಸ್‌.ಆರ್‌.ಉಮಾಶಂಕರ್‌ ಮಂಗಳವಾರ (ಡಿ. 17) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿ. 22 ರಂದು ಉತ್ಸವದ ಉದ್ಘಾಟನೆಯಾಗಲಿದ್ದು, ಆ ದಿನ ಸಾಯಂಕಾಲ 6 ಗಂಟೆಯಿಂದ 8ರವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ. ಜಾನಪದ ನೃತ್ಯ ತಂಡಗಳು, 10- 12 ಟ್ಯಾಬ್ಲೋಗಳು ಹಾಗೂ ಎನ್‌ಸಿಸಿ ಕೆಡೆಟ್‌ಗಳು ಮೆರವಣಿಗೆಯಲ್ಲಿ ಭಾಗವಹಿಸುವರು. ಸಚಿವರಾಜ ಡಿ.ಬಿ.ಇನಾಂದಾರ್‌, ರಮಾನಾಥ ರೈ, ಜೆ.ಅಲೆಗ್ಸಾಂಡರ್‌, ಮಲ್ಲಿಕಾರ್ಜುನ ನಾಗಪ್ಪ, ವಸಂತ ಸಾಲ್ಯಾನ್‌ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

ಡಿ.29ರಂದು ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ಸಂಜೆ ಕಾವ್ಯ, ಕುಂಚ, ನೃತ್ಯ ಹಾಗೂ ಗಾಯನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರಮೇಶ ರಾವ್‌ ಕುಂಚ ಕಲೆ ಮೂಡಿಸಲಿದ್ದು, ಶತಾವಧಾನಿ ಆರ್‌. ಗಣೇಶ್‌ ಕಾವ್ಯ ವಾಚನ ಮಾಡುವರು. ಚಂದ್ರಶೇಖರ ಕೆದ್ಲಾಯ ಅವರ ಸಂಗೀತ ಏರ್ಪಾಟಾಗಿದೆ. ಬೆಂಗಳೂರಿನ ತಂಡದವರು ನಾಟ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ರಂಗಾಯಣ, ಉಡುಪಿ ರಂಗಭೂಮಿ, ಬೆಂಗಳೂರಿನ ಸಮುದಾಯ, ಶಿವಮೊಗ್ಗದ ಸಹ್ಯಾದ್ರಿ ರಂಗತಂಡ ಮೊದಲಾದವರಿಂದ ಜನವರಿ 5 ರಿಂದ 9ರವರೆಗೆ ನಾಟಕೋತ್ಸವ ಕೂಡ ನಡೆಯಲಿದೆ. ಶಂಭು ಹೆಗಡೆ ಯಕ್ಷಗಾನ, ಹರಿಪ್ರಸಾದ್‌ ಚೌರಾಸಿಯಾ ಬಾನ್ಸುರಿ ವಾದನ, ಉನ್ನಿಕೃಷ್ಣನ್‌ ಸಂಗೀತ, ಪುತ್ತೂರು ನರಸಿಂಹ ನಾಯಕ್‌ ಭಕ್ತಿಗೀತೆ, ಪ್ರಹ್ಲಾದ್‌ ಆಚಾರ್ಯರ ಜಾದೂ ಹಾಗೂ ಚಿತ್ರನಟಿ ಶೋಭನಾ ಅವರ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗದ ಪ್ರಮುಖ ಸೆಳಕುಗಳು. ಚಿತ್ರಕಲೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಕೂಡ ಡಿ. 21ರಿಂದ ಜ. 21ರವರೆಗೆ ನಡೆಯಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X