• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಖಾಲಿಯಾಗುತ್ತಿದೆ ಕನ್ನಂಬಾಡಿ ಹೊಟ್ಟೆ, ನೋಡದಿದ್ದರೆ ಕೃಷ್ಣ ನೀ ಕೆಟ್ಟೆ !

By Super
|

ಖಾಲಿಯಾಗುತ್ತಿದೆ ಕನ್ನಂಬಾಡಿ ಹೊಟ್ಟೆ, ನೋಡದಿದ್ದರೆ ಕೃಷ್ಣ ನೀ ಕೆಟ್ಟೆ ! 79 ಅಡಿಗೆ ಕುಸಿದ ನೀರಿನ ಮಟ್ಟ , ಬರುವ ಬೇಸಗೆಯಲ್ಲಿ ಕುಡಿಯುವ ನೀರಿಗೂ ಕಷ್ಟ ಕಷ್ಟ

*ದಟ್ಸ್‌ಕನ್ನಡ ಬ್ಯೂರೊ

ಮುಂದಿನ ವರ್ಷ ಬೇಸಗೆಗೆ ಮುನ್ನವೇ ಕನ್ನಂಬಾಡಿ ಕಟ್ಟೆಯ ವೇಣುಗೋಪಾಲ ಸ್ವಾಮಿಯ ದರ್ಶನವಾಗುವ ಅಪಾಯವಿದೆ. 124.8 ಅಡಿ ನೀರು ತುಂಬಿಟ್ಟುಕೊಳ್ಳಬಲ್ಲ ಕೃಷ್ಣ ರಾಜ ಸಾಗರ ಅಣೆಕಟ್ಟೆಯಲ್ಲೀಗ ಇರುವುದು ಕೆವಲ 79 ಅಡಿ ನೀರು.

ಮೈಸೂರು ಕಾರ್ಯ ಪಡೆಗೆ ಕುಡಿಯುವ ನೀರು ಪೂರೈಕೆಯದ್ದೇ ದೊಡ್ಡ ತಲೆನೋವು. ಇತ್ತೀಚೆಗೆ ಪಡೆಯ ಅಧಿಕಾರಿಗಳು ಹಾಗೂ ವಾಣಿ ವಿಲಾಸ ಕೇಂದ್ರದ ಅಧಿಕಾರಿಗಳು ಕೂತು ಮುಂದಿನ ದಿನಗಳಲ್ಲಿ ಎದುಗಾರಲಿರುವ ನೀರಿನ ಸಮಸ್ಯೆ ನಿವಾರಣೆ ಹೇಗೆ ಎಂಬ ವಿಷಯವಾಗಿ ಎಷ್ಟು ಚರ್ಚಿಸಿದರೂ ದಾರಿ ಮಾತ್ರ ಕಾಣಲಿಲ್ಲ.

ಕಳೆದ ವರ್ಷ ಚಳಿಗಾಲ ಶುರುವಾದಾಗ ಕನ್ನಂಬಾಡಿ ಕಟ್ಟೆಯಲ್ಲಿ 92.89 ಅಡಿ ನೀರಿತ್ತು. ಆದರೆ ಈ ವರ್ಷ ಇದಕ್ಕಿಂತ 14 ಅಡಿಯಷ್ಟು ಕಡಿಮೆ ನೀರು ಇದೆ. ಅಷ್ಟೇ ಅಲ್ಲದೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕನ್ನಂಬಾಡಿ ಕಟ್ಟೆಯ ಒಳ ಹರಿವು ಕೂಡ ತೀರಾ ಕಡಿಮೆ. ಆದರೆ, ಹೊರ ಹರಿವಿನ ಪ್ರಮಾಣ ತಗ್ಗಿಸಲು ದಾರಿಯೇ ಇಲ್ಲ. ಬೆಂಗಳೂರು, ಮಂಡ್ಯ ಹಾಗೂ ಸುತ್ತಮುತ್ತಲ ಜಾಗೆಗಳ ಮಂದಿಗೆ ಕುಡಿಯುವ ನೀರಿಗೆ ಕನ್ನಂಬಾಡಿಯ ಕಾವೇರಿಯೇ ಬೇಕು. ಪ್ರತಿನಿತ್ಯ 2 ಲಕ್ಷ ಲೀಟರ್‌ ನೀರು ಹರಿಸಿದರೆ ಕಟ್ಟೆಯ 1.5 ಟಿಎಂಸಿಯಷ್ಟು ನೀರು ಕಡಿಮೆಯಾಗುತ್ತದೆ. ಇದು ಜನರ ಪ್ರತಿನಿತ್ಯದ ಬೇಡಿಕೆ.

ಬೆಂಗಳೂರು, ಮಂಡ್ಯ ಹಾಗೂ ಸುತ್ತಮುತ್ತಲ ಮಂದಿಗೆ ಹೀಗೇ ನೀರು ಬಿಡುತ್ತಾ ಹೋದರೆ, ಜೂನ್‌ 2004ರವರೆಗೆ 10 ಟಿಎಂಸಿ ನೀರು ಬೇಕು. ಈ ಪೈಕಿ ಬೆಂಗಳೂರಿನವರಿಗೇ 6 ಟಿಎಂಸಿ. ಹೀಗೆ ಮಾಡಿದಾಗ ಪ್ರತಿದಿನ ಕನ್ನಂಬಾಡಿ ಕಟ್ಟೆಯ ನೀರಿನ ಪ್ರಮಾಣ ಅರ್ಧ ಅಡಿ ಕಡಿಮೆಯಾಗುತ್ತಾ ಹೋಗುತ್ತದೆ. ಸಾಲದ್ದಕ್ಕೆ ನೀರಿನ ಮಟ್ಟ 74 ಅಡಿಗೆ ಕುಸಿದರೆ, ಮೈಸೂರಿಗೆ ನೀರು ಬಿಡಲು ಎರಡು ಪಂಪ್‌ಗಳನ್ನು ಬಳಸಬೇಕಾಗುತ್ತದೆ. ಆಗ ನೀರಿನ ಪೋಲು ಇನ್ನಷ್ಟು ಜೋರು. ಕನ್ನಂಬಾಡಿ ಕಟ್ಟೆಯ ಹೊಟ್ಟೆಯಲ್ಲಿ ಒಟ್ಟು 49 ಟಿಎಂಸಿ ನೀರು ತುಂಬಿಸಿಕೊಳ್ಳುವಷ್ಟು ಜಾಗವಿದೆ. ಈಗ ಇಲ್ಲಿರುವುದು ಕೇವಲ 15 ಟಿಎಂಸಿ ನೀರು ಮಾತ್ರ. ಕುಡಿಯೋಕೆಂದೇ ಇನ್ನು 7 ತಿಂಗಳ ಅವಧಿಗೆ 10 ಟಿಎಂಸಿ ನೀರು ಬೇಕಾದರೆ, ಬೇಸಾಯಕ್ಕೆ ದೇವರೇ ಗತಿ.

ಮೈಸೂರು ಕಾರ್ಯ ಪಡೆ ಕನ್ನಂಬಾಡಿಯಲ್ಲದೆ ಇತರೆ ನೀರಿನ ಮೂಲಗಳ ಆಳವನ್ನೂ ಅಳೆದಿದೆ. ಕೊಳವೆ ಬಾವಿಗಳ ನೀರಿನ ಮಟ್ಟವೂ ಗೋವಿಂದ. 2 ಸಾವಿರ ಲಕ್ಷದಷ್ಟು ನೀರು ಇಟ್ಟುಕೊಂಡಿರಬೇಕಾಗಿದ್ದ ಕೊಳವೆ ಬಾವಿಯ ತಳದಲ್ಲಿ ನೋಡಿದರೆ, ಇಕುವುದು ಏಳೇ ಲಕ್ಷ ಲೀಟರ್‌ ನೀರು. ಕೊನೆಗೆ ಅಧಿಕಾರಿಗಳು ದಾರಿಯಾವುದಯ್ಯಾ ನೀರಿಗೆ ಅಂತ ತಲೆ ಕೆರೆದುಕೊಳ್ಳಬೇಕಾಯಿತು.

ಬಯಲು ಸೀಮೆಯ ಮಂದಿ ಏನು ಮಾಡುವುದು ಅಂತ ತಲೆ ಕೆರೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕೃಷ್ಣ ತಮ್ಮ ಕೃಷ್ಣಾ ಮೇಲ್ದಂಡೆ ಯೋಜನೆಯ ಸಾಹಸ ಗಾಥೆಯನ್ನು ಸಿಕ್ಕಸಿಕ್ಕವರ ಹತ್ತಿರ ಹೇಳುತ್ತಿದ್ದಾರೆ. ಹಾಗೆಯೇ ಎಚ್‌.ಕೆ.ಪಾಟೀಲರ ಜಲ ಸಂಪನ್ಮೂಲ ಖಾತೆಯನ್ನು ಕಿತ್ತುಕೊಂಡು ರಾಜಕೀಯ ಮೂಲ ವ್ಯಾಧಿಗೂ ತುತ್ತಾಗುತ್ತಿದ್ದಾರೆ. ವೇಣುಗೋಪಾಲ ಸ್ವಾಮಿಯ ದರ್ಶನ ಬೇಗ ಆದರೆ ಏನು ಮಾಡೋದಪ್ಪ ... ಕೃಷ್ಣ ಕೃಷ್ಣ ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cauvery river water level in Krishna Raja Sagar Dam reduces to 79 ft. Mysore Task Force officers are scratching their head to face the ahead situation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more