• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕಲಾರಂಗಪ್ರಿಯ’ದ ಕನ್ನಡ ರಾಜ್ಯೋತ್ಸವ

By Staff
|

‘ಕಲಾರಂಗಪ್ರಿಯ’ದ ಕನ್ನಡ ರಾಜ್ಯೋತ್ಸವ

ಸಂಗೀತ ಸಾಧಕ ಮೈಸೂರು ರತನ್‌ ಹಾಗೂ ‘ಅಮೆರಿಕನ್ನಡಿಗ’ ಹರಿಹರೇಶ್ವರರಿಗೆ ಸನ್ಮಾನ

  • ಅಶೋಕ್‌ ಎಚ್‌. ಎಸ್‌., ಮೈಸೂರು

ashokhs@Centillium.com

ಮೈಸೂರಿನ ಕಲಾರಂಗ ಪ್ರಿಯದ 11ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆಯ ಬಗ್ಗೆ ಒಂದು ವರದಿ:

ಹವ್ಯಾಸಿ ಕಲಾವಿದರೂ ಆಗಿರುವ ಕೆಲವು ಮೈಸೂರು ಬಿ. ಇ. ಎಂ. ಎಲ್‌. ಉದ್ಯೋಗಿಗಳಿಂದ 11 ವರ್ಷದ ಕೆಳಗೆ ಸ್ಥಾಪಿತವಾದ ‘ಕಲಾರಂಗ ಪ್ರಿಯ’ ಎಂಬ ಒಂದು ಸಾಂಸ್ಕೃ ತಿಕ ಕಲಾ ಸಂಸ್ಥೆ ತನ್ನ 11 ವರ್ಷದ ಇತಿಹಾಸದಲ್ಲಿ ಹಲವಾರು ಉದಯೋನ್ಮುಖ ಕಲಾವಿದರನ್ನು ಗುರುತಿಸಿ ಅವರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಇದಲ್ಲದೆ ನಮ್ಮ ಕನ್ನಡ ನಾಡಿನ ಹೆಮ್ಮೆಯ ಹಬ್ಬವಾದ ಕನ್ನಡ ರಾಜ್ಯೋತ್ಸವವನ್ನೂ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದ್ದು ತನ್ನ ಧ್ಯೇಯ, ಗುರಿಗಳನ್ನು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಿಡದೆ ಸಾಹಿತ್ಯ ರಂಗಕ್ಕೂ ಪ್ರಸರಿಸಿದೆ. ಈ ಪ್ರಯುಕ್ತ ಕಳೆದ ಐದಾರು ವರ್ಷಗಳಿಂದ ಪ್ರತಿ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡಿನ ವಿವಿಧ ಸಾಹಿತ್ಯ ಹಾಗೂ ಕಲಾಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿರುವವರನ್ನು ಸನ್ಮಾನಿಸುತ್ತಿದೆ.

ದಿ. 14 - 12 - 2003 ರಂದು ಸಂಜೆ 6 ಗಂಟೆಗೆ ಮೈಸೂರಿನ ಕೃಷ್ಣಮೂರ್ತಿಪುರಂ ನ ‘ನಮನ ಕಲಾ ಮಂಟಪ’ದಲ್ಲಿ ’ಕಲಾರಂಗ ಪ್ರಿಯ’ ತನ್ನ 11ನೇ ವರ್ಷದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ತನ್ನ ಕಲಾ ಸಂಘದ ಕಲಾವಿದ ವೃಂದದ ಸುಗಮ ಸಂಗೀತ ಕಾರ್ಯಕ್ರಮದ ಮೂಲಕ ನಡೆಸಿತು. ಈ ಸಂದರ್ಭದಲ್ಲಿ ಕಲಾ ಹಾಗೂ ಸಾಹಿತ್ಯದಲ್ಲಿ ಹೆಸರು ಮಾಡಿರುವ ಇಬ್ಬರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.

Shikaripura Harihareshwaraಸನ್ಮಾನಿತರಲ್ಲಿ ಒಬ್ಬರು ಹರಿಹರೇಶ್ವರ. ವೃತ್ತಿಯಲ್ಲಿ ಇಂಜಿನಿಯರ್‌ ಆಗಿ ಅಮೆರಿಕೆಯಲ್ಲಿ ಉನ್ನತ ವ್ಯಾಸಂಗ ಮುಗಿಸಿ, ಅಲ್ಲೇ ಪ್ರಾಧ್ಯಾಪಕರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಇಷ್ಟೆ ಅಲ್ಲದೆ ಅಮೆರಿಕದಲ್ಲಿ ಕನ್ನಡ ಪರ ಚಟುವಟಿಕೆಗಳಲ್ಲಿ ತಮ್ಮನ್ನು ಬಹಳವಾಗಿ ತೊಡಗಿಸಿ ಕೊಂಡಿದ್ದರು. ಅನೇಕ ಪುಸ್ತಕಗಳು, ಕವನಗಳು ಇವರ ಲೇಖನಿಯಿಂದ ಮೂಡಿವೆ. ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಇವರೀಗ ಮೈಸೂರಿನ ಸರಸ್ವತಿಪುರಂ ನಲ್ಲಿ ತಮ್ಮ ನಿವೃತ್ತ ಜೀವನ ನಡೆಸುತ್ತಿದ್ದಾರೆ.

ಮೈಸೂರು ರತನ್‌ ಎಂದೇ ಖ್ಯಾತರಾಗಿರುವ ಸತ್ಯನಾರಾಯಣ ಅವರು ಈ ಸಮಾರಂಭದಲ್ಲಿ ಸನ್ಮಾನಿತರಾದ ಮತ್ತೊಬ್ಬ ಮುಖ್ಯ ಅತಿಥಿ. ಇವರು ಮೆಟೀರಿಯಲ್‌ ಸೈನ್ಸ್‌ ನಲ್ಲಿ ಪದವೀಧರರಾಗಿ ತಮ್ಮ ವೃತ್ತಿ ಜೀವನದಲ್ಲಿ ಮಾಡಿದ ಸಾಧನೆಗಿಂತ ಪ್ರವೃತ್ತಿಯೇ ಇವರನ್ನು ಜನಪ್ರಿಯತೆಯ ಶಿಖರಕ್ಕೆ ಕೊಂಡೊಯ್ದಿದೆ. ಮೂಲತಃ ಸಂಗೀತಗಾರರ ಕುಟುಂಬದವರಾದ ರತನ್‌ ಚಿಕ್ಕಂದಿನಲ್ಲಿಯೇ ಮ್ಯಾಂಡೋಲಿನ್‌, ಕೀ ಬೋರ್ಡ್‌ ಮುಂತಾದವುಗಳನ್ನು ಲೀಲಾಜಾಲವಾಗಿ ನುಡಿಸುತ್ತಿದ್ದರು. ಸದ್ಯಕ್ಕೆ ಬೆಂಗಳೂರಿನಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಡುತ್ತಾ ಇರುವ ಇವರು ಕೆಲವು ಚಲನಚಿತ್ರಗಳಿಗೂ ಸಂಗೀತ ನೀಡಿದ್ದಾರೆ.

ಮುಂಚೆ ಮೈಸೂರಿನಲ್ಲೇ ಇದ್ದ, ಈಗ ಬೆಂಗಳೂರು ಜೆ. ಪಿ. ನಗರದ ಇಂಡಿಯನ್‌ ಒವರ್‌ ಸೀಸ್‌ ಬ್ಯಾಂಕಿನ ಪ್ರಬಂಧಕರಾಗಿರುವ ಹಾಗೂ ‘ಜಗದ್ಗುರು ಪೀಠ’ ಎಂಬ ಅಂತರರಾಷ್ಟ್ರೀಯ ಆಧ್ಯಾತ್ಮಿಕ ಹಾಗೂ ಸೇವಾ ಸಂಸ್ಥೆಯ ಡೈರೆಕ್ಟರ್‌ ಕೂಡ ಆಗಿರುವ ಅರ್‌. ಪಿ. ಜೋಷಿಯವರು ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇವರು ಹರಿಹರೇಶ್ವರ ಹಾಗೂ ರತನ್‌- ಇಬ್ಬರನ್ನೂ ‘ಕಲಾರಂಗ ಪ್ರಿಯ’ದ ಪರವಾಗಿ ಸನ್ಮಾನಿಸಿದರು.

ತಮ್ಮ ಜೀವನದ ಕೆಲವು ಸಂಗತಿಗಳನ್ನು ಹಂಚಿಕೊಂಡ ಸನ್ಮಾನಿತರಿಬ್ಬರೂ ಈ ಸನ್ಮಾನಕ್ಕೆ ತಾವು ಪಾತ್ರರಲ್ಲ . ಇನ್ನೂ ಅನೇಕರು ತಮಗಿಂತ ಹೆಚ್ಚು ಸಾಧನೆ ಮಾಡಿದವರಿದ್ದಾರೆ ಎಂದು ತಮ್ಮ ಸರಳತೆಯನ್ನು ಬಿಚ್ಚಿಟ್ಟರು. ಇಂದಿನ ಪೀಳಿಗೆಗೆ ಕೆಲವು ಉಪಯುಕ್ತ ಉಪದೇಶಗಳೊಂದಿಗೆ ಇವರು ನೆರೆದ ಸಭಿಕರಿಗೆ ಹಾಗೂ ‘ಕಲಾರಂಗ ಪ್ರಿಯ’ಕ್ಕೆ ತಮ್ಮ ಕೃತಜ್ಞತೆ ಅರ್ಪಿಸಿದರು. ಸಮಾರಂಭದ ಅಧ್ಯಕ್ಷರಾಗಿದ್ದ ಅರ್‌. ಪಿ. ಜೋಶಿಯವರು ನಮ್ಮ ಜೀವನದಲ್ಲಿ ಕಲೆ, ಸಂಸ್ಕೃತಿಯ ಮಹತ್ವ ಏನು, ಇಂದಿನ ತ್ವರಿತಗತಿಯ ಜೀವನದ ಸುಳಿಯಲ್ಲಿ ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿಹೇಳಿದರು.

ನಂತರ ಗಣೇಶ್‌ ಅವರ ಮುಂದಾಳತ್ವದಲ್ಲಿ ‘ಕಲಾರಂಗ ಪ್ರಿಯ’ದ ಸದಸ್ಯರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಲಕ್ಷ್ಮೀಶ್‌, ರೇಖ ಲಕ್ಷೀಶ್‌, ವಿದ್ವಾನ್‌ ಶಿವಶಂಕರ್‌, ಮಾಸ್ಟರ್‌ ವಿನಯ್‌ ಭಾರದ್ವಾಜ್‌ ಮುಂತಾದವರು ಗಣೇಶ್‌ ಜೊತೆಯಲ್ಲಿ ನಮ್ಮ ನಾಡಿನ ಹಲವು ಪ್ರಸಿದ್ಧ ಕವಿಗಳ ಸುಮಧುರ ಗೀತೆಗಳಿಂದ ನೆರೆದಿದ್ದ ಜನ ಸಮೂಹದ ಮನ ಸೂರೆಗೊಂಡರು.

ಮಂಜುನಾಥ್‌ ಅವರ ವಂದನಾರ್ಪಣೆಯಾಂದಿಗೆ ಕಾರ್ಯಕ್ರಮ ರಾತ್ರಿ 9 ಗಂಟೆಗೆ ಮುಗಿಯಿತು.

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more