ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂದರೊ ಮಹಾನುಭಾವಲು, ನನ್ನ ಉಸ್ತಾದ್‌ ಎನ್ನದಿರಿ-ಝಾಕಿರ್‌

By Staff
|
Google Oneindia Kannada News

ಎಂದರೊ ಮಹಾನುಭಾವಲು, ನನ್ನ ಉಸ್ತಾದ್‌ ಎನ್ನದಿರಿ-ಝಾಕಿರ್‌
ಸಂಪ್ರದಾಯ ಹಾಗೂ ಸಂಸ್ಕೃತಿಯಲ್ಲಿ ಭಾರತ ನಂ.1 ಎಂದ ತಬಲಾ ಮಾಂತ್ರಿಕ

ಔರಂಗಾಬಾದ್‌ : ಸಂಗೀತ ಕ್ಷೇತ್ರದಲ್ಲಿ ಅತ್ಯಂತ ಕಿರಿಯನಾದ ತಮ್ಮನ್ನು ಉಸ್ತಾದ್‌ ಹೆಸರಿನಿಂದ ಕರೆಯುವುದು ಬೇಡ ಎಂದು ಖ್ಯಾತ ತಬಲಾ ವಾದಕ ಝಾಕಿರ್‌ ಹುಸೇನ್‌ ಹೇಳಿದ್ದಾರೆ.

ಬಿಸ್ಮಿಲ್ಲಾ ಖಾನ್‌, ರವಿಶಂಕರ್‌ ಪ್ರಸಾದ್‌ ಅಥವಾ ಪಂಡಿತ್‌ ಭೀಮಸೇನ್‌ ಜೋಷಿ ಅವರಂತಹ ಹಿರಿಯ ಕಲಾವಿದರ ಮುಂದೆ ತಾನು ತುಂಬಾ ಚಿಕ್ಕವನು. ಇಂತಹ ಹಿರಿಯರ ಮುಂದೆ ತನ್ನಂಥ ಕಿರಿಯವನನ್ನು ಉಸ್ತಾದ್‌ ಎಂದು ಕರೆಯುವುದು ತಮಗೆ ಸಮಂಜಸವಾಗಿ ತೋರುತ್ತಿಲ್ಲ ಎಂದು ಝಾಕಿರ್‌ ಹುಸೇನ್‌ ಮಂಗಳವಾರ (ಡಿ.16) ತಿಳಿಸಿದರು.

ಎಲ್ಲೋರಾ-ಔರಂಗಾಬಾದ್‌ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳಲು ಔರಂಗಾಬಾದ್‌ಗೆ ಆಗಮಿಸಿರುವ ಅಂತರರಾಷ್ಟ್ರೀಯ ಖ್ಯಾತಿಯ ತಬಲಾ ವಾದಕ ಝಾಕಿರ್‌ ಹುಸೇನ್‌ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ದೀರ್ಘಕಾಲ ಯಾವುದೇ ಗುರುವಿನ ಬಳಿ ತಾವು ಶಾಸ್ತ್ರೀಯವಾಗಿ ತಬಲಾ ಕಲಿತಿಲ್ಲ . ಕಲ್ಪನಾ ಶಕ್ತಿ ಹಾಗೂ ಭಾವಮುದ್ರೆಗಳು ತಮ್ಮ ತಬಲಾ ವಾದನದ ಯಶಸ್ಸಿನ ಗುಟ್ಟು . ಭಾವನೆಗಳ ಅಭಿವ್ಯಕ್ತಿಗೆ ಬಹುಶಃ ತಮ್ಮ ನೃತ್ಯದ ಅಭಿರುಚಿ ಕಾರಣವಾಗಿರಬಹುದು ಎಂದು ಝಾಕಿರ್‌ ಹೇಳಿಕೊಂಡರು.

ರೀಮಿಕ್ಸ್‌ ಹಾಗೂ ಫ್ಯೂಷನ್‌ ಸಂಗೀತದ ದಾಳಿಯಿಂದಾಗಿ ಶಾಸ್ತ್ರೀಯ ಸಂಗೀತ ಅಪಾಯ ಎದುರಿಸುತ್ತಿದೆಯೇ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಝಾಕಿರ್‌ ಹುಸೇನ್‌- ಜಾಗತಿಕ ಹಳ್ಳಿಯ ಪರಿಕಲ್ಪನೆಯ ಸಂದರ್ಭದಲ್ಲಿ ಭಾರತೀಯ ಸಂಗೀತದ ಮೇಲೆ ಪಾಶ್ಚಿಮಾತ್ಯ ಸಂಗೀತದ ಪ್ರಭಾವ ಸಾಧ್ಯವಾಗುತ್ತಿದೆ. ಆದರೆ ಭದ್ರ ತಳಪಾಯ ಹಾಗೂ ಅಪೂರ್ವ ಸಂಪ್ರದಾಯ ಹೊಂದಿರುವ ಭಾರತೀಯ ಸಂಗೀತ ಶಾಶ್ವತವಾಗಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಜಾಗತಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಭಾರತ ನಂ.1 ಅಲ್ಲದಿರಬಹುದು. ಆದರೆ, ಸಂಪ್ರದಾಯ ಹಾಗೂ ಸಂಸ್ಕೃತಿಯಲ್ಲಿ ಭಾರತ ನಂ.1 ಎಂದು ಝಾಕಿರ್‌ ಹುಸೇನ್‌ ಒತ್ತಿ ಹೇಳಿದರು.

(ಏಜನ್ಸೀನ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X