ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ಸಂಪುಟ ಪರಿಷ್ಕರಣೆ : ಜಯಚಂದ್ರ, ಅಲೆಕ್ಸಾಂಡರ್‌ಗೆ ಲಾಟರಿ

By Staff
|
Google Oneindia Kannada News

ಕೃಷ್ಣ ಸಂಪುಟ ಪರಿಷ್ಕರಣೆ : ಜಯಚಂದ್ರ, ಅಲೆಕ್ಸಾಂಡರ್‌ಗೆ ಲಾಟರಿ
ಇನಾಂದಾರ್‌- ರಾಜಾ ಅಮರೇಶ್ವರ ನಾಯಕ್‌ ಕ್ಯಾಬಿನೆಟ್‌ ದರ್ಜೆಗೆ

ಬೆಂಗಳೂರು : ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಇಬ್ಬರು ಸಚಿವರನ್ನು ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದರೊಂದಿಗೆ, ಕಳೆದ ಎರಡು ಮೂರು ದಿನಗಳಿಂದ ಕೇಳಿಬರುತ್ತಿದ್ದ ರಾಜ್ಯ ಸಚಿವ ಸಂಪುಟ ಪರಿಷ್ಕರಣೆ ಕಸರತ್ತಿಗೆ ತೆರೆ ಬಿದ್ದಿದೆ.

ದೆಹಲಿಯಲ್ಲಿನ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿ ಜೆ.ಅಲೆಕ್ಸಾಂಡರ್‌ ಶುಕ್ರವಾರ (ಡಿ.12) ಬೆಳಗ್ಗೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಅವರು ಉಭಯ ಸಚಿವರಿಗೂ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಂಪುಟ ಸಹೋದ್ಯೋಗಿಗಳು ಹಾಜರಿದ್ದರು.

ಇನಾಂದಾರ್‌-ಅಮರೇಶ್ವರ್‌ಗೆ ಬಡ್ತಿ

ಇಬ್ಬರು ಹೊಸ ಸಚಿವರ ಸೇರ್ಪಡೆ ಮಾತ್ರವಲ್ಲದೆ, ಮತ್ತಿಬ್ಬರು ರಾಜ್ಯ ಸಚಿವರನ್ನು ಕೃಷ್ಣ ಕ್ಯಾಬಿನೆಟ್‌ ದರ್ಜೆಗೇರಿಸಿದ್ದಾರೆ. ರಾಜ್ಯ ಸಚಿವರಾದ ಡಿ.ಬಿ.ಇನಾಂದಾರ್‌ ಹಾಗೂ ರಾಜಾ ಅಮರೇಶ್ವರ ನಾಯಕ ಕ್ಯಾಬಿನೆಟ್‌ ದರ್ಜೆಗೆ ಬಡ್ತಿ ಪಡೆದ ಸಚಿವರು.

ಈ ಮುನ್ನ ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಒಂದು ವರ್ಷದ ಹಿಂದಷ್ಟೇ ಸಚಿವ ಸ್ಥಾನ ಕಳಕೊಂಡು, ದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಯಾಗಿ ನೇಮಕ ಹೊಂದಿದ್ದರು. ನುಸಿ ಪೀಡೆ ಔಷಧಿ ಪ್ರಕರಣದಲ್ಲಿ ಜಯಚಂದ್ರ ರಾಜ್ಯದ ರೈತರ ವಿರೋಧಕ್ಕೆ ತುತ್ತಾಗಿದ್ದರು. ಜಯಚಂದ್ರ ಅವರು ಕಳ್ಳಂಬೆಳ್ಳ ಕ್ಷೇತ್ರದ ಶಾಸಕ. ಸಚಿವ ಸ್ಥಾನ ಪಡೆದಿರುವ ಅಲೆಕ್ಸಾಂಡರ್‌ ಬೆಂಗಳೂರಿನ ಭಾರತೀನಗರ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಶಾಸಕರು.

ಕೊಡಗು ವಿಧಾನ ಪರಿಷತ್‌ ಚುನಾವಣೆಯಲ್ಲಿ ಪರಾಭವ ಹೊಂದಿದ್ದ ಟಿ.ಜಾನ್‌ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜಾನ್‌ ಸ್ಥಾನಕ್ಕೆ ಅಲೆಕ್ಸಾಂಡರ್‌ ಅವರನ್ನು ತುಂಬುವ ಮೂಲಕ ಮುಖ್ಯಮಂತ್ರಿ ಕೃಷ್ಣ ತಮ್ಮ ಸಂಪುಟದಲ್ಲಿ ಕ್ರಿಶ್ಚಿಯನ್ನರ ಪ್ರಾತಿನಿಧ್ಯ ಉಳಿಸಿಕೊಂಡಿದ್ದಾರೆ.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X