For Daily Alerts
ಉಡುಪಿಯಲ್ಲಿ ಇನ್ನೊಂದು ಸಮಾಜೋತ್ಸವ, ಅಲ್ಲಿಗೂ ತೊಗಾಡಿಯಾ!
ಉಡುಪಿಯಲ್ಲಿ ಇನ್ನೊಂದು ಸಮಾಜೋತ್ಸವ, ಅಲ್ಲಿಗೂ ತೊಗಾಡಿಯಾ!
ಹಿಂದೂಗಳ ಒಗ್ಗಟ್ಟು ಪ್ರದರ್ಶನ ಜೋರಾಗುತ್ತಿದೆ
ಮಂಗಳೂರು : ದೇವಳದೂರು ಉಡುಪಿಯಲ್ಲಿ ಮೂರು ದಿನಗಳ ಅವಧಿಯ ವಿರಾಟ್ ಹಿಂದೂ ಸಮಾಜೋತ್ಸವ ಡಿಸೆಂಬರ್ 12ರಿಂದ ಶುರುವಾಗಲಿದೆ.
ಗೋಹತ್ಯೆ ನಿಷೇಧ, ಮತಾಂತರ ತಡೆಗೆ ಆಗ್ರಹಿಸುವುದು, ಭಯೋತ್ಪಾದನೆ ಬಗ್ಗೆ ಜನ ಜಾಗೃತಿ ಮೂಡಿಸುವುದು ಹಾಗೂ ಹಿಂದೂಗಳ ಒಗ್ಗಟ್ಟು ಪ್ರದರ್ಶಿಸುವುದು ಈ ಸಮಾಜೋತ್ಸವದ ಉದ್ದೇಶ ಎಂದು ಸಮಾಜೋತ್ಸವ ಆಯೋಜನಾ ಸಮಿತಿಯ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್ ಬುಧವಾರ (ಡಿ. 10) ಸುದ್ದಿಗಾರರಿಗೆ ತಿಳಿಸಿದರು.
ಸಮಾಜೋತ್ಸವದಲ್ಲಿ ವಿವಿಧ ಧಾರ್ಮಿಕ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ. ವಿಶ್ವ ಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಕಾರ್ಯದರ್ಶಿ, ಭಾಷಣ ಭಯಂಕರ ಡಾ. ಪ್ರವೀಣ್ ಭಾಯಿ ತೊಗಾಡಿಯಾ ಈ ಸಮಾಜೋತ್ಸವದಲ್ಲೂ ಹಿಂದೂಗಳನ್ನು ಉದ್ದೇಶಿಸಿ ಮಾತಾಡಲಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು