ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ಎನ್‌ಎಲ್‌ ಸ್ಥಿರ ದೂರವಾಣಿ ಎಸ್‌ಟಿಡಿ ಕರೆಶುಲ್ಕ ಕಡಿತ

By Staff
|
Google Oneindia Kannada News

ಬಿಎಸ್‌ಎನ್‌ಎಲ್‌ ಸ್ಥಿರ ದೂರವಾಣಿ ಎಸ್‌ಟಿಡಿ ಕರೆಶುಲ್ಕ ಕಡಿತ
100 ಕಿ.ಮೀ.ಗಿಂತ ಹೆಚ್ಚು ದೂರದ ಎಸ್‌ಟಿಡಿ ಕರೆಗಳಿಗೆ ಮಾತ್ರ ಈ ಕಡಿತ.

ನವದೆಹಲಿ : ಖಾಸಗಿ ಮೊಬೈಲ್‌ ಫೋನ್‌ಗಳ ಸ್ಪರ್ಧೆಯಿಂದ ಕಂಗೆಟ್ಟಿರುವ ಬಿಎಸ್‌ಎನ್‌ಎಲ್‌ ತನ್ನ ಸ್ಥಿರ ದೂರವಾಣಿ ದರಗಳನ್ನು ಕಡಿತಗೊಳಿಸಿದೆ.

ಎಸ್‌ಟಿಡಿ ದರಗಳಲ್ಲಿ ಶೇ. 25ರಷ್ಟು ಕಡಿತವನ್ನು ಬಿಎಸ್‌ಎನ್‌ಎಲ್‌ ಮಂಗಳವಾರ (ಡಿ.8) ಪ್ರಕಟಿಸಿದೆ. 100 ಕಿ.ಮೀ.ಗಿಂತ ಹೆಚ್ಚು ದೂರದ ಎಸ್‌ಟಿಡಿ ಕರೆಗಳಿಗೆ ಈ ಕಡಿತ ಅನ್ವಯವಾಗಲಿದ್ದು , ದರವನ್ನು ಈಗಿರುವ ರೂ. 2.40ರಿಂದ (ನಿಮಿಷಕ್ಕೆ) ರೂ. 1.80ಕ್ಕೆ ಇಳಿಸಲಾಗಿದೆ. ಪರಿಷ್ಕೃತ ದರ ಡಿ. 15ರಿಂದ ಜಾರಿಗೆ ಬರಲಿದೆ.

100 ಕಿ.ಮೀ.ನ ಒಳಗಿನ ಕರೆಗಳಿಗೆ ಪ್ರಸ್ತುತ ಇರುವ ಶುಲ್ಕವೇ ಮುಂದುವರಿಯಲಿದೆ. ಗ್ರಾಹಕರ ಮುಂದೆ ಹಲವಾರು ಆಯ್ಕೆಗಳು ಲಭ್ಯವಿರುವುದರಿಂದ, ಪ್ರಸಕ್ತ ವರ್ಷದ ಏಪ್ರಿಲ್‌-ಅಕ್ಟೋಬರ್‌ ಅವಧಿಯಲ್ಲಿ 17.9ಲಕ್ಷ ಮಂದಿ ತಮ್ಮ ದೂರವಾಣಿಗಳನ್ನು ಮರಳಿಸಿದ್ದಾರೆ ಎಂದು ಬಿಎಸ್‌ಎನ್‌ಎಲ್‌ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಪ್ರೀತಿಪಾಲ್‌ ಸಿಂಗ್‌ ಸುದ್ದಿಗಾರರಿಗೆ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X