• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಂಪೂಟರ್‌ ಶಿಕ್ಷಣಕ್ಕೆ ಕುಮಾರ್‌ ಮಳವಳ್ಳಿಯಿಂದ 1 ಕೋಟಿ ರು.

By Staff
|

ಕಂಪೂಟರ್‌ ಶಿಕ್ಷಣಕ್ಕೆ ಕುಮಾರ್‌ ಮಳವಳ್ಳಿಯಿಂದ 1 ಕೋಟಿ ರು.

ಸರ್ಕಾರಿ ಶಾಲೆಯ ಮಕ್ಕಳ ಉದ್ಧಾರಕ್ಕೆ ಮಳವಳ್ಳಿ ಕಾಣಿಕೆ

ಬೆಂಗಳೂರು : ಕರ್ನಾಟಕದ ಸರ್ಕಾರಿ ಶಾಲೆಗಳ 4 ರಿಂದ 7 ನೇ ಇಯತ್ತೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಶಿಕ್ಷಣ ಒದಗಿಸಲು 1 ಕೋಟಿ ರುಪಾಯಿ ನೆರವು ಕೊಡುವುದಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅನಿವಾಸಿ ಕನ್ನಡಿಗ ಕುಮಾರ ಮಳವಳ್ಳಿ ಪ್ರಕಟಿಸಿದ್ದಾರೆ.

ಬುಧವಾರ (ಡಿ. 10) ವಿಧಾನಸೌಧದ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ಪ್ರಶಸ್ತಿ ಸ್ವೀಕರಿಸಿ ಹೊರಬಂದ ಮಳವಳ್ಳಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದರು. ಜಗತ್ತಿನಲ್ಲಿ ಶಿಕ್ಷಣ ಸಾಕಷ್ಟು ಮುಂದುವರೆದಿದೆ. ಭಾರತ ಕೂಡ ಆ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು. ಹಳ್ಳಿಗಳಲ್ಲಿರುವ ಮಕ್ಕಳಿಗೂ ಕಂಪ್ಯೂಟರ್‌ ಶಿಕ್ಷಣ ದಕ್ಕುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಕಂಪ್ಯೂಟರ್‌ ಶಿಕ್ಷಣ ಕೊಡಬೇಕು. ಅದಕ್ಕೆ 1 ಕೋಟಿ ರುಪಾಯಿ ನೆರವು ಕೊಡುವುದಾಗಿ ಹೇಳಿದ್ದೇನೆ ಎಂದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣ ಕೊಡಲು ಒಂದು ಯೋಜನೆ ಜಾರಿಗೆ ಬರಲಿದ್ದು, ರಾಜ್ಯ ಮುಖ್ಯ ಕಾರ್ಯದರ್ಶಿ ಪಾಟೀಲ್‌ ಯೋಜನೆಯ ರೂಪುರೇಷೆಯನ್ನು ಹೊಸೆಯಲಿದ್ದಾರೆ.

ಮಳವಳ್ಳಿ ಅವರ ಈ ಧೋರಣೆ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂಥದ್ದು. ಕುಮಾರ್‌ ಮಳವಳ್ಳಿಯಂಥವರ ಸಂಖ್ಯೆ ಹೆಚ್ಚಾಗಲಿ.

(ಇನ್ಫೋ ವಾರ್ತೆ)

ಇದನ್ನೂ ಓದಿ

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಮಳವಳ್ಳಿ-ಜಗದೀಶ್‌ಗೆ ಮಕುಟ

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more