ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾಗಾಂಧಿ ಹುಟ್ಟುಹಬ್ಬ : 40 ಸಾವಿರ ಹೆಂಗಸರಿಗೆ ಸೀರೆ

By Staff
|
Google Oneindia Kannada News

ಸೋನಿಯಾಗಾಂಧಿ ಹುಟ್ಟುಹಬ್ಬ : 40 ಸಾವಿರ ಹೆಂಗಸರಿಗೆ ಸೀರೆ
ಚುನಾವಣೆ ನಾಯಕತ್ವ ಬದಲು- ಕೃಷ್ಣ ಈಗ ಅದನ್ನು ಪೂಜಾರಿಗೆ ಕೊಟ್ಟಿದ್ದಾರೆ !

ಬೆಂಗಳೂರು : ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಬರೋಬ್ಬರಿ ಎರಡು ಗಂಟೆ ತಡವಾಗಿ ಬಂದರು. 10. 30ಕ್ಕೆ ಶುರುವಾಗಬೇಕಿದ್ದ ಕಾರ್ಯಕ್ರಮ 12.30 ಗಂಟೆಗೆ ಪ್ರಾರಂಭವಾಯಿತು. ಸೀರೆ ಪಡೆಯಲು ಕಾಯುತ್ತಿದ್ದ 40 ಸಾವಿರ ಬಡ ಹೆಂಗಸರ ಮುಖ ಬಾಡಿ ಹೋಗಿತ್ತು.

ಮಂಗಳವಾರ (ಡಿ. 09) ಅರಮನೆ ಮೈದಾನದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿ ಬರ್ತಡೇ ಸಮಾರಂಭ ಹಾಗಿತ್ತು. ಅಲ್ಲಿ ಕಾಂಗ್ರೆಸ್‌ ನಾಯಕರ ಪರಸ್ಪರ ಬೆನ್ನು ಚಪ್ಪರಿಕೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಬರಲಿರುವ ಲೋಕಸಭಾ ಚುನಾವಣೆಯನ್ನು ಯಾವುದೇ ಕ್ಷಣವೂ ಎದುರಿಸಲು ಕಾಂಗ್ರೆಸ್‌ ಸಿದ್ಧವಿರುವುದಾಗಿ ಕೃಷ್ಣ ಘೋಷಿಸಿದರು.

ಇತ್ತೀಚಿನ ವಿಧಾನ ಪರಿಷತ್‌ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಿದ್ದ 23 ಸ್ಥಾನಗಳ ಪೈಕಿ 20ರಲ್ಲಿ ಜನಮತ ಸಿಕ್ಕಿರುವುದನ್ನು ಹೇಳಿದ ಕೃಷ್ಣ, ಜನತೆ ಸ್ಟೆತಾಸ್ಕೋಪ್‌ ಹಿಡಿದು ಪಕ್ಷದ ನಾಡಿ ಮಿಡಿತ ಅಳೆಯಲು ನಿಂತಿರುತ್ತಾರೆ ಎಂದರು. ಕೆಲವರು ಮುಂದಿನ ವರ್ಷ ಮಾರ್ಚ್‌- ಏಪ್ರಿಲ್‌ ತಿಂಗಳಲ್ಲೇ ಲೋಕಸಭಾ ಚುನಾವಣೆ ನಡೆಯುತ್ತದೆ ಎನ್ನುತ್ತಿದ್ದಾರೆ. ಯಾವಾಗ ಬೇಕಾದರೂ ಚುನಾವಣೆ ಬರಲಿ. ಎದುರಿಸಲು ನಾವು ಸಿದ್ಧ ಎಂದು ಹೇಳಿದರು.

ದೊಡ್ಡ ದೊಡ್ಡ ಬ್ಯಾನರುಗಳ ನೇತು ಬಿಟ್ಟು , ಜೋರು ಹಬ್ಬದಂತೆ ನಡೆದ ಸೋನಿಯಾ ಹುಟ್ಟುಹಬ್ಬವನ್ನು ವಸಂತ ನಗರದ ರಸ್ತೆಗಳ ಮೇಲೆ ಗಂಟೆಗಟ್ಟಲೆ ಟ್ರಾಫಿಕ್ಕಿಗೆ ಸಿಕ್ಕಿಕೊಂಡವರು ತಮ್ಮ ತಿಥಿ ಎಂದು ಶಪಿಸಿದರು. ಕೃಷ್ಣ ಲೇಟಾಗಿ ಬಂದದ್ದಕ್ಕೆ ರಸ್ತೆಯಲ್ಲಿ ನಿಂತ ಮಂದಿಯ ಕೆಲಸಕ್ಕೆ ಕುತ್ತು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X