• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂದಿನ ವರ್ಷ ಬೇಸಗೇಲಿ ಕರ್ನಾಟಕದಲ್ಲಿ ನೀರಿಗೂ ಬೆಂಕಿ !

By Staff
|

ಮುಂದಿನ ವರ್ಷ ಬೇಸಗೇಲಿ ಕರ್ನಾಟಕದಲ್ಲಿ ನೀರಿಗೂ ಬೆಂಕಿ !

ಕೆರೆ- ಕಟ್ಟೆ, ಕೊಳವೆ ಬಾವಿ ನೀರು ಕೃಷಿಗೆ ಬಳಸಕೂಡದು- ಕೋಳಿವಾಡ್‌

ಬೆಂಗಳೂರು : ಸತತವಾಗಿ ಕಳೆದ ಮೂರು ವರ್ಷ ಮಳೆ ಕೈಕೊಟ್ಟಿರುವ ಕಾರಣ ಮುಂದಿನ ವರ್ಷದ ಬೇಸಗೆಯಲ್ಲಿ ಕರ್ನಾಟಕದಲ್ಲಿ ನೀರಿಗೆ ಹಾಹಾಕಾರ ಎದ್ದೇಳುವ ಅಪಾಯವನ್ನು ಸರ್ಕಾರ ನಿರೀಕ್ಷಿಸಿದೆ.

ಗ್ರಾಮೀಣ ನೀರು ಸರಬರಾಜು ಸಚಿವ ಕೆ.ಬಿ. ಕೋಳಿವಾಡ್‌ ಸೋಮವಾರ (ಡಿ. 08) ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಹೋದ ವರ್ಷ ಮಳೆಯ ಕೊರತೆ ಶೇಕಡಾ 36ರಷ್ಟಿತ್ತು. ಈ ವರ್ಷ ಶೇ. 50ರಷ್ಟಿದೆ. ಕಳೆದ ಮೂರು ವರ್ಷಗಳಿಂದ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಈ ವರ್ಷ ಜಲ ಸಂಪನ್ಮೂಲ ತೀರಾ ಕಡಿಮೆಯಾಗಿರುವುದರಿಂದ ಮುಂದಿನ ವರ್ಷ ಮಾರ್ಚ್‌ನಿಂದ ಮೇ ತಿಂಗಳ ಅವಧಿಯಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ನೀರಿಗೆ ತತ್ವಾರ ಏಳಲಿದೆ ಎಂದು ಕೋಳಿವಾಡ್‌ ಹೇಳಿದರು.

ಸದ್ಯಕ್ಕೆ ಸಂಗ್ರಹವಾಗಿರುವ ನೀರನ್ನು ಸಮರ್ಪಕವಾಗಿ ಬಳಸಿ, ಬೇಸಗೆಯಲ್ಲಿ ಕುಡಿಯುವ ನೀರಿಗೆ ತೀರಾ ತೊಂದರೆಯಾಗದಂತೆ ನೋಡಿಕೊಳ್ಳಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ನೀರು ಕೊಡುತ್ತಿರುವ ಕೊಳವೆ ಬಾವಿಗಳನ್ನು ವಶಪಡಿಸಿಕೊಳ್ಳುವುದು ಹಾಗೂ ಕೃಷಿಗೆ ಕೆರೆ- ಕಟ್ಟೆಗಳ ನೀರಿನ ಬಳಕೆಯನ್ನು ನಿಷೇಧಿಸುವುದು ಈ ನಿಟ್ಟಿನಲ್ಲಿ ಇಟ್ಟಿರುವ ಹೆಜ್ಜೆಗಳು.

ಒಂದು ಕೊಳವೆ ಬಾವಿಯಿಂದ ಇನ್ನೊಂದು ಕೊಳವೆ ಬಾವಿಗೆ ಕನಿಷ್ಠ 500 ಮೀಟರ್‌ ಅಂತರವಿರಬೇಕು. ಈ ಕಡಿವಾಣವನ್ನು ಕಾಯ್ದೆಯ ರೂಪದಲ್ಲಿ ಜಾರಿಗೆ ತಂದು ಅಂತರ್ಜಲ ಕಾಪಾಡಲು ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಒಪ್ಪಿದ್ದಾರೆ ಎಂದು ಕೋಳಿವಾಡ್‌ ಸರ್ಕಾರದ ನಡೆಗಳನ್ನು ಬಿಚ್ಚಿಟ್ಟರು.

ಬೆಳಗಾವಿ ಸ್ಥಿತಿ ತೀರಾ ಅಧ್ವಾನ : ರಾಜ್ಯದಲ್ಲಿ 357 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಪರಿಸ್ಥಿತಿ ತೀರಾ ಅಧ್ವಾನವಾಗಿದೆ. ಜಿಲ್ಲೆಯ 99 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಈಗಲೇ ತತ್ವಾರ ಶುರುವಾಗಿದ್ದು, ಕೆರೆ ನೀರನ್ನು ಕುಡಿಯುವ ಪರಿಸ್ಥಿತಿ ಬಂದಿದೆ. ಕೆರೆ- ಕುಂಟೆ ಹಾಗೂ ಕೊಳವೆಬಾವಿಗಳ ನೀರನ್ನು ಕೃಷಿಗೆ ಬಳಸುವುದನ್ನು ತಪ್ಪಿಸಿದರೆ, ಒಂದು ವರ್ಷ ಕಾಲ 2 ಕೋಟಿ ಮಂದಿಗೆ ಕುಡಿಯುವ ನೀರು ಪೂರೈಸಬಹುದು ಎಂದು ಅಂದಾಜು ಮಾಡಲಾಗಿದೆ. ದುಸ್ಥಿತಿ ಇರುವ ಜಾಗೆಗಳಿಗೆ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರವನ್ನು 40 ಕೋಟಿ ರುಪಾಯಿ ಆರ್ಥಿಕ ಸಹಾಯ ಕೋರಲಾಗಿದೆ. ಆದರೆ ಅದು ಈವರೆಗೆ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದರು.

ಕೇಂದ್ರ ದುಡ್ಡೇ ಕೊಡ್ತಿಲ್ಲ : ವಿವಿಧ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಡಿಯಲ್ಲಿ ಕೇಂದ್ರ ಕೊಟ್ಟಿರುವ ಆರ್ಥಿಕ ನೆರವನ್ನು ಕರ್ನಾಟಕ ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಕಾಶೀರಾಂ ರಾಣಾ ಇತ್ತೀಚೆಗೆ ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೋಳಿವಾಡ್‌, ಅದು ಯಾವುದೋ ಹಳೆಯ ಅಂಕಿ- ಅಂಶಗಳ ಮಾತು. ಆದರೀಗ ನಮ್ಮ ಬೇಡಿಕೆಗೆ ಕೇಂದ್ರ ಸ್ಪಂದಿಸಿಯೇ ಇಲ್ಲ ಎಂದರು.

ರಾಣಾ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ , ಈ ಬಗ್ಗೆ ಒಂದು ಸಮಗ್ರ ವರದಿ ಕೊಡುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಎಂ.ವೈ.ಘೋರ್ಪಡೆ ಅವರಿಗೆ ಸೂಚಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more