ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧ ಮಾಡಿ, ಇಲ್ಲ ವೇ ಮುಸ್ಲಿಂರಾಗಿ -ತೊಗಾಡಿಯಾ ಕರಕರೆ

By Staff
|
Google Oneindia Kannada News

ಯುದ್ಧ ಮಾಡಿ, ಇಲ್ಲ ವೇ ಮುಸ್ಲಿಂರಾಗಿ -ತೊಗಾಡಿಯಾ ಕರಕರೆ
ಕರ್ನಾಟಕದಲ್ಲಿ ಹಕ್ಕಬುಕ್ಕರ ವಿಜಯನಗರ ಸಾಮ್ರಾಜ್ಯದ ಪುನರುಜ್ಜೀವನ....

ಬೆಂಗಳೂರು : ಜಾಗತಿಕ ನಕಾಶೆಯಿಂದ ಪಾಕಿಸ್ತಾನದ ನಕ್ಷೆಯನ್ನು ಅಳಿಸುವವರೆಗೂ ಭಾರತಕ್ಕೆ ಭಯೋತ್ಪಾದನೆಯಿಂದ ಮುಕ್ತಿಯಿಲ್ಲ ಎಂದು ವಿಶ್ವಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ। ಪ್ರವೀಣ್‌ಭಾಯಿ ತೊಗಾಡಿಯಾ ಅಭಿಪ್ರಾಯಪಟ್ಟರು.

ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯ. ಹಿಂದೂಗಳೆಲ್ಲಾ ಒಂದಾಗಿ ಪಾಕ್‌ ವಿರುದ್ಧ ಯುದ್ಧ ಮಾಡಬೇಕು ಅಥವಾ ಸಾಮೂಹಿಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಬೇಕು ಎಂದು ಭಾವಾವೇಶದಿಂದ ನುಡಿದ ತೊಗಾಡಿಯಾ- ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಿಸುವಂತೆ ಸರ್ಕಾರವನ್ನು ಆಗ್ರಹಿಸಿದರು. ಭಾನುವಾರ (ಡಿ.7) ಬೆಂಗಳೂರಿನಲ್ಲಿ ನಡೆದ ವಿರಾಟ್‌ ಹಿಂದೂ ಸಮಾಜೋತ್ಸವದಲ್ಲಿ ತೊಗಾಡಿಯಾ ಮಾತನಾಡುತ್ತಿದ್ದರು.

ಅಗ್ನಿ ಹಾಗೂ ಪೃಥ್ವಿ ಕಿಪ್ಷಣಿಗಳನ್ನು ಪ್ರಯೋಗಿಸಿ ಪಾಕಿಸ್ತಾನವನ್ನು ನಿರ್ಮೂಲನೆ ಮಾಡಿ ಎಂದ ತೊಗಾಡಿಯಾ- ಮಂದಿರವನ್ನು ನಿರ್ಮಿಸುವ ಹಾಗೂ ಹಿಂದೂ ಸಂಸ್ಕೃತಿಯನ್ನು ರಕ್ಷಿಸುವ ಸರ್ಕಾರ ನಮಗೆ ಬೇಕಾಗಿದೆ ಎಂದರು. ಭಾರತದಲ್ಲಿನ 12 ಕೋಟಿ ಮುಸ್ಲಿಮರ ರಕ್ಷಣೆಗೆ ಎಲ್ಲ ರಾಜಕೀಯ ಪಕ್ಷಗಳೂ ಬದ್ಧವಾಗಿವೆ. ಆದರೆ 90 ಕೋಟಿ ಹಿಂದೂಗಳು ದೇಶದಲ್ಲಿ ಅತಂತ್ರರಾಗಿದ್ದಾರೆ. ಹಿಂದೂಗಳು ಪೂಜಿಸುವ ಗೋವನ್ನು ಇಲ್ಲಿ ಕಡಿಯಲಾಗುತ್ತದೆ ಎಂದು ತೊಗಾಡಿಯಾ ಗುಡುಗಿದರು.

ಕರ್ನಾಟಕವನ್ನು ಗುಜರಾತ್‌ ಮಾಡಲಾಗುತ್ತಿದೆ ಎನ್ನುವ ಟೀಕೆಗಳನ್ನು ನಿರಾಕರಿಸಿದ ತೊಗಾಡಿಯಾ- ಹಕ್ಕಬುಕ್ಕರ ವಿಜಯನಗರ ಹಾಗೂ ಶಿವಾಜಿ ಸಾಮ್ರಾಜ್ಯವನ್ನು ರಾಷ್ಟ್ರಾದ್ಯಂತ ನಿರ್ಮಿಸುವುದು ತಮ್ಮ ಗುರಿ ಎಂದು ಘೋಷಿಸಿದರು.

ಮಂದಿರ ನಿರ್ಮಾಣದ ಕೆಲಸ ನಮಗೊಪ್ಪಿಸಿ...

ಸರ್ಕಾರದ ಕೈಲಿ ಮಂದಿರ ನಿರ್ಮಿಸಲು ಸಾಧ್ಯವಾಗದೆ ಹೋದಲ್ಲಿ , ಕಾರ್ಯವನ್ನು ಧರ್ಮಗುರುಗಳಿಗೊಪ್ಪಿಸಲಿ ಎಂದು ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಹಿಂದೂ ಸಮಾಜೋತ್ಸವದಲ್ಲಿ ಹೇಳಿದರು.

ರಾಮ ಮಂದಿರ ನಿರ್ಮಾಣ ಹಿಂದೂಗಳ ಅಭಿಮಾನದ ಸಂಕೇತವಾಗಿದೆ. ಮುಸ್ಲಿಂರಿಗೆ ಅಲ್ಲಾಹ್‌ ಹಾಗೂ ಕ್ರಿಶ್ಚಿಯನ್ನರಿಗೆ ಜೀಸಸ್‌ ಆರಾಧ್ಯದೇವತೆಯಾಗಿರುವಂತೆ ರಾಮ ಹಿಂದೂಗಳಿಗೆ ಆದರ್ಶ. ನಾವು ಅನ್ಯಧರ್ಮಗಳನ್ನು ಗೌರವಿಸುತ್ತೇವೆ. ಅದೇ ರೀತಿ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡು ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಬಾಲಗಂಗಾಧರನಾಥ ಶ್ರೀ ಮುಸ್ಲಿಂ ಜನಾಂಗಕ್ಕೆ ಕರೆ ನೀಡಿದರು. ಆರ್ಟ್‌ ಆಫ್‌ಲಿವಿಂಗ್‌ನ ಶ್ರೀ ರವಿಶಂಕರ್‌ ವೇದಿಕೆಯಲ್ಲಿ ಹಾಜರಿದ್ದರು.

ಅಸ್ಪೃಶ್ಯತೆ ಹಿಂದೂ ಸಾಹಿತ್ಯದಲ್ಲಿಲ್ಲ !

ಹಿಂದೂ ಧರ್ಮದ ಶಾಸ್ತ್ರಗ್ರಂಥಗಳಲ್ಲಿಯೆಲ್ಲಿಯೂ ಅಸ್ಪೃಶ್ಯತೆಯ ಉಲ್ಲೇಖವಿಲ್ಲ . ಅಗತ್ಯವಿದ್ದರೆ ಈ ಕುರಿತು ಸಾಕ್ಷ್ಯಾಧಾರಗನ್ನೊದಗಿಸಲು ತಾವು ಸಿದ್ಧ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಸಂಘ ಪರಿವಾರದ ಕಾರ್ಯಕರ್ತರು ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿದ್ದರು. ನಗರದ ವಿವಿಧ ಭಾಗಗಳಲ್ಲಿ ಕಾರ್ಯಕರ್ತರ ವರ್ಣರಂಜಿತ ಮೆರವಣಿಗೆ ನಡೆಯಿತು. 5 ಸಾವಿರಕ್ಕೂ ಹೆಚ್ಚು ಮಂದಿ ಪೊಲೀಸ್‌ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X