• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೋನ್ವಿಷಯ : ಬಿಎಸ್ಸೆನ್ನೆಲ್‌ಗೆ 8 ನಂಬರು, ಐಎಸ್‌ಡಿ ದರ ಅಗ್ಗ !

By Staff
|

ಫೋನ್ವಿಷಯ : ಬಿಎಸ್ಸೆನ್ನೆಲ್‌ಗೆ 8 ನಂಬರು, ಐಎಸ್‌ಡಿ ದರ ಅಗ್ಗ !

ಇಂಟರ್ನೆಟ್‌ ಸಂಪರ್ಕಕ್ಕೊಂದು ಹೊಸ ಫೋನ್‌ ಬೇಕೆ? ತಿಂಗಳಿಗೆ 499 ರುಪಾಯಿ ಕೊಡಿ

ಬೆಂಗಳೂರು : ನೀವು ನಗರದ ನಾಗರೀಕರಾಗಿದ್ದು, ಟೆಲಿಫೋನ್‌ ಸಂಪರ್ಕ ಇರುವವರಾದರೆ, ಇವೆಲ್ಲವನ್ನೂ ಓದಿಕೊಳ್ಳಿ-
  • ಸದ್ಯದಲ್ಲೇ ಬೆಂಗಳೂರು ನಗರ ವ್ಯಾಪ್ತಿಯ ಭಾರತ್‌ ಸಂಚಾರ್‌ ನಿಗಮ ನಿಯಮಿತದ ಸ್ಥಿರ (ಲ್ಯಾಂಡ್‌ಲೈನ್‌) ಫೋನ್‌ ನಂಬರುಗಳು 8 ಅಂಕಿಗಳಾಗಲಿವೆ. ಗ್ರಾಮಾಂತರ ಪ್ರದೇಶದಲ್ಲಿ 7 ನಂಬರಿನಿಂದ ಆರಂಭವಾಗುವ ಫೋನ್‌ಗಳನ್ನು ಹೊರತುಪಡಿಸಿ, ಮಿಕ್ಕೆಲ್ಲ ಫೋನ್‌ಗಳ ಈಗಿನ ನಂಬರಿಗೆ ಮೊದಲು 2ನ್ನು ಸೇರಿಸಲಾಗುತ್ತದೆ. ಈ ವ್ಯವಸ್ಥೆ ಜನವರಿ 2004ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ.
  • ಅಂತೆಯೇ ರಿಲಯನ್ಸ್‌ನ ಫೋನ್‌ ಸಂಖ್ಯೆಗೆ 3 ಹಾಗೂ ಟಚ್‌ಟೆಲ್‌ ಕಂಪನಿಯ ಫೋನ್‌ ನಂಬರುಗಳಿಗೆ 5ನ್ನು ಸೇರಿಸಲಾಗುವುದು.
  • ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಕೊಡುಗೆಯಾಗಿ ಏಷ್ಯಾದ ದೇಶಗಳಿಗೆ ಮಾಡುವ ಐ.ಎಸ್‌.ಡಿ. ದರಗಳನ್ನು ಕಡಿತಗೊಳಿಸಲಾಗಿದೆ. ಸಿಂಗಪುರ, ಹಾಂಗ್‌ಕಾಂಗ್‌, ಇಂಡೋನೇಷ್ಯ, ಮಲೇಷ್ಯ ಮತ್ತು ಥಾಯ್‌ಲೆಂಡ್‌ಗೆ ದಿನದ ಯಾವುದೇ ಅವಧಿಯಲ್ಲಿ ಕರೆಗಳ ದರವನ್ನು ಈಗಿನ ಪ್ರತಿ ನಿಮಿಷಕ್ಕೆ ಇರುವ 24 ರುಪಾಯಿಯಿಂದ 12 ರು.ಗೆ. ಇಳಿಸಲಾಗಿದೆ. ಈ ಸೌಲಭ್ಯ ಹಾಗೂ ಈಗಾಗಲೇ ಪ್ರಕಟಿಸಿರುವ ಅಮೆರಿಕ, ಯೂರೋಪ್‌ ಮತ್ತು ಕೆನಡಾಗಳಿಗೆ ಮಾಡುವ ಕರೆಗಳ ದರ ಕಡಿತ ಜನವರಿ 15ರವರೆಗೆ ಅನ್ವಯವಾಗಲಿದೆ.
  • ಬೆಂಗಳೂರು ಇಲ್ಲವೇ ದೇಶದ ಯಾವುದೇ ಭಾಗಕ್ಕೆ ಸ್ಥಿರ ದೂರವಾಣಿ ಸ್ಥಳಾಂತರಕ್ಕೆ ವಿಧಿಸಲಾಗುತ್ತಿದ್ದ 60 ರುಪಾಯಿ ಶುಲ್ಕವನ್ನು ರದ್ದು ಪಡಿಸಲಾಗಿದೆ. ಮೂರನೆಯವರ ಹೆಸರಿಗೆ ಫೋನನ್ನು ವರ್ಗಾಯಿಸಲು ಇದ್ದ ಶುಲ್ಕವನ್ನೂ ತೆಗೆದು ಹಾಕಲಾಗಿದೆ. ಸ್ಥಳಾಂತರಗೊಳಿಸಲು ಫೋನ್‌ ಸಂಪರ್ಕ ಸಿಕ್ಕು ಕನಿಷ್ಠ ಒಂದು ವರ್ಷ ಆಗಿರಬೇಕೆಂಬ ನಿಯಮವನ್ನೂ ರದ್ದು ಪಡಿಸಲಾಗಿದೆ.
  • ಈಗ ಒಂದು ಫೋನ್‌ ಸಂಪರ್ಕ ಇರುವವರು ಇಂಟರ್ನೆಟ್‌ಗಾಗಿ ಇನ್ನೊಂದು ಸಂಪರ್ಕ ಬೇಕಾದರೆ, ತಿಂಗಳಿಗೆ 499 ರುಪಾಯಿ ಬಾಡಿಗೆ ಕೊಟ್ಟು ಪಡೆಯಬಹುದು. ಆ ಹೊಸ ಫೋನ್‌ ಕೇವಲ ಇಂಟರ್ನೆಟ್‌ ಬಳಕೆಗೆ ಮಾತ್ರ ಬರುತ್ತದೆಯೇ ವಿನಃ ಕರೆಗಳನ್ನು ಮಾಡುವುದು ಸಾಧ್ಯವಿಲ್ಲ. ಇಂಟರ್ನೆಟ್‌ ಸಂಪರ್ಕದ ದರ ಪ್ರತ್ಯೇಕವಾಗಿರುತ್ತದೆ ಎಂಬುದು ನೆನಪಿರಲಿ. ಈ ಹೊಸ ಇಂಟರ್ನೆಟ್‌ ಫೋನ್‌ ಸಂಪರ್ಕ ಡಿಸೆಂಬರ್‌ 15, 2003ರಿಂದ ಲಭ್ಯ.
  • ಬೆಂಗಳೂರು ದೂರಸಂಪರ್ಕ ಜಿಲ್ಲೆಯ ಪ್ರಧಾನ ಮಹಾ ಪ್ರಬಂಧಕ ಬಿ.ಆರ್‌. ಬಾಳಿಗ ಭಾರತ್‌ ಸಂಚಾರ್‌ ನಿಗಮ (ಬಿಎಸ್ಸೆನ್ನೆಲ್‌) ದ ಈ ಗ್ರಾಹಕ ಉಪಯುಕ್ತ ಮಾಹಿತಿಗಳನ್ನು ಕೊಟ್ಟಿದ್ದಾರೆ.

    (ಇನ್ಫೋ ವಾರ್ತೆ)

    ಮುಖಪುಟ / ವಾರ್ತೆಗಳು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more