ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಎಲ್ಲ ರೀತಿಯ ಬಿಲ್‌ ಪಾವತಿ : ಇನ್ನೂ 35 ಕೇಂದ್ರ

By Staff
|
Google Oneindia Kannada News

ಬೆಂಗಳೂರಲ್ಲಿ ಎಲ್ಲ ರೀತಿಯ ಬಿಲ್‌ ಪಾವತಿ : ಇನ್ನೂ 35 ಕೇಂದ್ರ
ಕರೆಂಟು, ನೀರು, ಫೋನ್‌ ಬಿಲ್‌ ಕಟ್ಟುವ ಕಿಯೋಸ್ಕ್‌ಗಳು

ಬೆಂಗಳೂರು : ನಗರದ ಯಾಂತ್ರಿಕ ಬದುಕಿನಲ್ಲಿ ಅಗತ್ಯ ಸೌಲಭ್ಯಗಳ ಬಿಲ್‌ ಪಾವತಿ ಮಾಡಲು ಸಾಲು ನಿಂತು ಸಾಕಷ್ಟು ಸಮಯ ವ್ಯಯಿಸಬೇಕಿತ್ತು . ಅದರಲ್ಲೂ ನಿಗದಿತ ಸಮಯದಲ್ಲಿ ಮಾತ್ರ ಪಾವತಿ ಸಾಧ್ಯವಿತ್ತು . ಇನ್ನೊಂದು ವಾರದಲ್ಲಿ ಈ ತ್ರಾಸ ನಗರದ ಬಹುತೇಕ ಜನರಿಗೆ ತಪ್ಪಲಿದೆ.

ನೀರು, ವಿದ್ಯುತ್‌ ಹಾಗೂ ದೂರವಾಣಿ ಬಿಲ್‌ ಪಾವತಿಸುವ 24 ಗಂಟೆ ಸೇವಾ ನಿರತವಾಗಿರುವ 35 ಕಿಯೋಸ್ಕ್‌ಗಳು ವಾರದೊಳಗೆ ಕಾರ್ಯಾರಂಭ ಮಾಡಲಿವೆ. ಇದರೊಂದಿಗೆ ನಗರದಲ್ಲಿ ಕಿಯೋಸ್ಕ್‌ಗಳ ಸಂಖ್ಯೆ 38ಕ್ಕೆ ಏರಲಿದೆ.

ಈಗಾಗಲೇ ಜಯನಗರ ನಾಲ್ಕನೇ ಬ್ಲಾಕ್‌, ಮಲ್ಲೇಶ್ವರಂ ಹಾಗೂ ಎಂ.ಎನ್‌.ಕೃಷ್ಣರಾವ್‌ ಪಾರ್ಕ್‌ ಜಲಮಂಡಳಿ ಸೇವಾ ಕೇಂದ್ರಗಳಲ್ಲಿ ಬೆಂಗಳೂರು ಜಲಮಂಡಳಿ ಕಿಯೋಸ್ಕ್‌ಗಳನ್ನು ಅಳವಡಿಸಲಾಗಿದ್ದು , ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ನೂರು ಕಿಯೋಸ್ಕ್‌ಗಳನ್ನು ಹಂತಹಂತವಾಗಿ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಎಂ.ಎನ್‌.ವಿದ್ಯಾಶಂಕರ್‌ ತಿಳಿಸಿದ್ದಾರೆ.

ಒಂದು ವಾರದೊಳಗೆ 35 ಕಿಯೋಸ್ಕ್‌ಗಳನ್ನು ಸ್ಥಾಪಿಸಲಾಗುವುದು. ಇದಲ್ಲದೇ ಮುಂದಿನ ಜನವರಿ ವೇಳೆಗೆ 15 ಹಾಗೂ ಮಾರ್ಚ್‌ ವೇಳೆಗೆ 50 ಕಿಯೋಸ್ಕ್‌ಗಳನ್ನು ಅಳವಡಿಸಲಾಗುವುದು. ಇದರಿಂದ ಗ್ರಾಹಕರು ಸ್ಥಳೀಯ ಪ್ರದೇಶಗಳಲ್ಲಿಯೇ ಬಿಲ್‌ ಪಾವತಿಸಬಹುದು ಎಂದು ಹೇಳಿದರು.

ಈ ಕಿಯೋಸ್ಕ್‌ಗಳಲ್ಲಿ ನೀರಿನ ಬಿಲ್‌ ಜತೆಗೆ ವಿದ್ಯುತ್‌ ಹಾಗೂ ಟೆಲಿಫೋನ್‌ ಬಿಲ್‌ಗಳನ್ನು ಹಣ ಅಥವಾ ಚೆಕ್‌ ರೂಪದಲ್ಲಿ ಪಾವತಿಸಬಹುದು ಎಂದರು.

ಈ ಕೇಳಗಿನ ಪ್ರದೇಶಗಳಲ್ಲಿರುವ ಜಲಮಂಡಳಿ ಸೇವಾಕೇಂದ್ರದಲ್ಲಿ ಕಿಯೋಸ್ಕ್‌ ಅಳವಡಿಸಲಾಗುವುದು.

ಕತ್ರಿಗುಪ್ಪೆ ಸೇವಾಕೇಂದ್ರ, ಬನಗಿರಿ, ಜಯನಗರ ಟಿಬ್ಲಾಕ್‌, ಬಿಟಿಎಂ ಲೇಔಟ್‌, ಜೆಪಿ ನಗರ 3ನೇ ಹಂತ, ಕೋರಮಂಗಲ, ಚಾಮರಾಜಪೇಟೆ, ಮಲ್ಲೇಶ್ವರಂ, ಯಶವಂತಪು, ಕೆ.ಜಿ.ಟವರ್‌, ಕುಮಾರಪಾರ್ಕ್‌, ಆರ್‌.ಟಿ.ನಗರ, ಸಂಜಯನಗರ, ಹಲಸೂರು, ಜಾನ್ಸನ್‌ ಮಾರುಕಟ್ಟೆ , ಇಂದಿರಾನಗರ, ಫ್ರೇಜರ್‌ ಟೌನ್‌, ಮಚಲಿಬೆಟ್ಟ, ಹೊಸಹಳ್ಳಿ, ವಿಜಯನಗರ, ಕೇತಮಾರನಹಳ್ಳಿ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್‌, ಮೈಸೂರು ರಸ್ತೆ , ಪಶ್ಚಿಮ ಕಾರ್ಡ್‌ ರಸ್ತೆ , ಚಿಕ್ಕಲಾಲ್‌ಬಾಗ್‌, ಎಚ್‌.ಜಿ.ಆರ್‌. ಕೋಲ್ಸ್‌ ಪಾರ್ಕ್‌, ವಿ.ವಿ.ಪುರಂ, ಹಾಗೂ ಬನ್ನಪ್ಪ ಪಾರ್ಕ್‌ ಜಲಮಂಡಳಿ ಸೇವಾಕೇಂದ್ರ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X