ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯ ವಿಚಾರಣೆ: ಸಿವಿಲ್‌ಕೋರ್ಟ್‌ ಆವರಣದಲ್ಲಿ ಹೊಸ ಕೋರ್ಟ್‌

By Staff
|
Google Oneindia Kannada News

ಜಯ ವಿಚಾರಣೆ: ಸಿವಿಲ್‌ಕೋರ್ಟ್‌ ಆವರಣದಲ್ಲಿ ಹೊಸ ಕೋರ್ಟ್‌
ಡಿ.6ರಂದು ವಿಶೇಷ ನ್ಯಾಯಾಲಯಕ್ಕೆ ಮುಖ್ಯ ನ್ಯಾಯಾಧೀಶರ ನೇಮಕ ಸಂಭವ

ಬೆಂಗಳೂರು : ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಎರಡು ಪ್ರಕರಣಗಳ ವಿಚಾರಣೆಗೆ ನಗರದ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ಆವರಣದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು. ಇದಕ್ಕೆ ಶುಕ್ರವಾರ (ಡಿ. 05) ಕರ್ನಾಟಕ ಹೈ ಕೋರ್ಟ್‌ ಒಪ್ಪಿಗೆ ಸೂಚಿಸಿದೆ.

ನಗರದ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಆವರಣದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂಬ ಸರ್ಕಾರದ ಪ್ರಸ್ತಾವನೆಯನ್ನು ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಎನ್‌.ಕೆ.ಜೈನ್‌ ಒಪ್ಪಲಿಲ್ಲ. ಅದು ಜಯಲಲಿತಾ ಅವರ ವಿಚಾರಣೆಗೆ ಸೂಕ್ತ ಜಾಗವಲ್ಲ ಎಂದು ಮುಖ್ಯ ನ್ಯಾಯಾಧೀಶರು ಅಭಿಪ್ರಾಯಪಟ್ಟು, ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ಆವರಣದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಲು ಅನುಮತಿ ಕೊಟ್ಟರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ ಸುದ್ದಿಗಾರರಿಗೆ ಹೇಳಿದರು.

ರಾಜ್ಯದ ಅಡ್ವೊಕೇಟ್‌ ಜನರಲ್‌ ಎ.ಎನ್‌.ಜಯರಾಂ ಜೊತೆಯಲ್ಲಿ ನಾನು ಗುರುವಾರ ಮುಖ್ಯ ನ್ಯಾಯಾಧೀಶರೊಟ್ಟಿಗೆ ವಿಶೇಷ ನ್ಯಾಯಾಲಯ ಎಲ್ಲಿ ಸ್ಥಾಪಿಸಬೇಕು ಎಂಬ ವಿಷಯವಾಗಿ ಚರ್ಚಿಸಿದ್ದೆ. ಈ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಜಾಗಕ್ಕೆ ಸರ್ಕಾರ ಸೆಷನ್ಸ್‌ ನ್ಯಾಯಾಲಯಗಳ ನಾಲ್ವರು ಮುಖ್ಯ ನ್ಯಾಯಾಧೀಶರ ಹೆಸರನ್ನು ಶಿಫಾರಸ್ಸು ಮಾಡಿದೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮತ್ತು ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸ್ಥಾನಕ್ಕೂ ಕೆಲವು ವಕೀಲರ ಹೆಸರನ್ನು ಸೂಚಿಸಿದ್ದೇವೆ. ಬಹುಶಃ ಶನಿವಾರ (ಡಿ.06) ಮುಖ್ಯ ನ್ಯಾಯಾಧೀಶರ ನೇಮಕವಾಗಲಿದೆ ಎಂದರು.

ಜಯಲಲಿತಾ ಅಕ್ರಮ ಆಸ್ತಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಡವೆಗಳೂ ಸೇರಿದಂತೆ 66.65 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಗಳ ವಿಲೇವಾರಿ ಆಗುವವರೆಗೆ ಈ ಆಸ್ತಿಯನ್ನು ರಾಜ್ಯ ಖಜಾನೆಯಲ್ಲಿ ಇಡಲು ನಿರ್ಧರಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಜಯಲಲಿತಾ ಅವರಿಗೆ ‘ಝಡ್‌’ ಮಾದರಿಯ ಭದ್ರತೆಯನ್ನು ಒದಗಿಸಲಾಗುವುದು ಎಂದು ಹೇಳಿದರು.

ಜಯಲಲಿತಾ ಕೋರ್ಟಿಗೆ ಬರಲೇಬೇಕು : ಕೋರ್ಟಿಗೆ ಖುದ್ದು ಜಯಲಲಿತಾ ಹಾಜರಾಗುವರೇ ಎಂಬ ಪ್ರಶ್ನೆಗೆ, ಅಪರಾಧಿ ಪ್ರಕ್ರಿಯಾ ಸಂಹಿತೆಯ 313ನೇ ಸೆಕ್ಷನ್‌ ಹಾಗೂ ಸುಪ್ರಿಂಕೋರ್ಟ್‌ ಆದೇಶದ ಪ್ರಕಾರ ಅವರು ಕೋರ್ಟಿಗೆ ಹಾಜರಾಗಲೇಬೇಕು ಎಂದು ಚಂದ್ರೇಗೌಡ ಉತ್ತರಿಸಿದರು.

ಸುಪ್ರಿಂಕೋರ್ಟ್‌ ಕೊಟ್ಟಿರುವ ಗಡುವಿನಂತೆ ಡಿಸೆಂಬರ್‌ 25ನೇ ತಾರೀಕಿನ ಹೊತ್ತಿಗೆ ವಿಶೇಷ ನ್ಯಾಯಾಲಯದ ಸ್ಥಾಪನೆ ಆಗಲಿದೆ ಎಂದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X