ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಳಿಸಿದ ಮೇಕಪ್ಪು : ಸಿನಿಮಾ ಕಲಾವಿದ ‘ಮೇಕಪ್‌ನಾಣಿ’ ಇನ್ನಿಲ್ಲ

By Staff
|
Google Oneindia Kannada News

ಅಳಿಸಿದ ಮೇಕಪ್ಪು : ಸಿನಿಮಾ ಕಲಾವಿದ ‘ಮೇಕಪ್‌ನಾಣಿ’ ಇನ್ನಿಲ್ಲ
ನಾಣಿ ಸಾವಿಗೆ ಕಲಾವಿದರ ಸಂತಾಪ

ಬೆಂಗಳೂರು : ಮೇಕಪ್‌ ನಾಣಿ ಎಂದೇ ಹೆಸರಾಗಿದ್ದ ಕಲಾವಿದ ಬೆಳವಾಡಿ ನಂಜುಂಡಯ್ಯ ನಾರಾಯಣ ಗುರುವಾರ (ಡಿ. 04) ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ರಂಗ ಕಲೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ನಟ, ನಿರ್ದೇಶಕ ಹಾಗೂ ಮೇಕಪ್‌ ಕಲಾವಿದರಾಗಿ ಕೆಲಸ ಮಾಡಿದ್ದ ನಾಣಿ ತಮ್ಮ ಸಂಸಾರದವರೂ ಸೇರಿದಂತೆ ಅಪಾರ ಕಲಾ ಮಿತ್ರರನ್ನು ಅಗಲಿದ್ದಾರೆ. ಇವರ ಪತ್ನಿ ಭಾರ್ಗವಿ ನಾರಾಯಣ್‌ ಹಾಗೂ ಪುತ್ರಿ ಸುಧಾ ಬೆಳವಾಡಿ ಕಿರುತೆರೆ ಕಲಾವಿದರು. ಮಗ ಪ್ರಕಾಶ್‌ ಬೆಳವಾಡಿ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಿರ್ದೇಶಕರಾಗಿ ಬೆನ್ನುತಟ್ಟಿಸಿಕೊಂಡವರು. ಇವರಲ್ಲದೆ ಇನ್ನೂ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ನಾಣಿ ಅಗಲಿದ್ದಾರೆ.

ಎಂದಿನಂತೆ ತಾವು ಕೆಲಸ ಮಾಡುತ್ತಿದ್ದ ಸತ್ಯಸಾಯಿ ಟೂರಿಸ್ಟ್‌ ಸಂಸ್ಥೆಗೆ ಗುರುವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ನಾಣಿ ಹೋದರು. ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುರ್ಚಿಯ ಮೇಲೆ ಎದೆ ಹಿಡಿದುಕೊಂಡು ಕುಸಿದರು. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಮೃತಪಟ್ಟರು.

1949ರಲ್ಲಿ ರಂಗಭೂಮಿ ಪ್ರವೇಶಿಸಿದ ನಾಣಿ ರಂಗ ಮೇಲ್ವಿಚಾರಕ, ವಿನ್ಯಾಸಕಾರ, ನಿರ್ದೇಶಕ, ಮೇಕಪ್‌ ಕಲಾವಿದ, ನಟ- ಹೀಗೆ ಬಹುಮುಖ ಪ್ರತಿಭೆ ತೋರಿದವರು. ಮುಯ್ಯಿ, ಆಕ್ಸಿಡೆಂಟ್‌ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ನಾಣಿ ಅಬಚೂರಿನ ಪೋಸ್ಟಾಫೀಸ್‌ ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದರು. ನಾಟಕ ಅಕಾಡೆಮಿ, ಗೊರೂರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ನಾಣಿ, ಮುಂಬಯಿಯಲ್ಲಿ ನಡೆದ ಮೊದಲ ವಿಶ್ವ ಥಿಯೇಟರ್‌ ಸಮಾವೇಶದ ಪ್ರತಿನಿಧಿಯ ಗೌರವ ಸಂಪಾದಿಸಿದ್ದರು.

ಸಾವಿರದ ಒಂಬೈನೂರ ಅರುವತ್ತು ಎಪ್ಪತ್ತರ ದಶಕದಲ್ಲಿ ಮುಖ್ಯಮಂತ್ರಿ ಚಂದ್ರು, ಕಪ್ಪಣ್ಣ ಹಾಗೂ ತಮ್ಮಂಥ ಕಲಾವಿದರನ್ನು ಗುರುತಿಸಿದ ಹಿರಿಯ ಚೇತನ ನಾಣಿ. ಅವರು ಒಬ್ಬ ವ್ಯಕ್ತಿಯಾಗಿರಲಿಲ್ಲ, ಸಂಸ್ಥೆಯಾಗಿದ್ದರು ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಆರ್‌.ನಾಗೇಶ್‌ ಸಂತಾಪ ಸೂಚಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X