ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಚಡ್ಡಿ ಬಿಸುಟು ಬಂದವರೊಂದಿಗೆ ಗುದ್ದಾಡುವುದು ಸಾಧ್ಯವೇ ?’

By Staff
|
Google Oneindia Kannada News

‘ಚಡ್ಡಿ ಬಿಸುಟು ಬಂದವರೊಂದಿಗೆ ಗುದ್ದಾಡುವುದು ಸಾಧ್ಯವೇ ?’
ಬೆಂಗಳೂರನ್ನು ಗುಜರಾತ್‌ ಮಾಡಹೊರಟಿರುವ ಸಂಘ ಪರಿವಾರ- ಕಾರ್ನಾಡ್‌ ಆರೋಪ

ಚಡ್ಡಿ ಹಾಕಿಕೊಂಡು ಬಂದವರೊಂದಿಗೆ ಕುಸ್ತಿಯಾಡಬಹುದು. ಆದರೆ ಚಡ್ಡಿ ಬಿಟ್ಟುಬಂದವರೊಂದಿಗೆ ಗುದ್ದಾಡುವುದು ಹೇಗೆ ?

ಕುವೆಂಪು ಅವರ ಈ ಮಾತನ್ನು ನೆನಪಿಸಿಕೊಂಡವರು ಹಿರಿಯ ವಿಮರ್ಶಕ ಡಾ.ಕೆ.ಮರುಳಸಿದ್ಧಪ್ಪ . ಹೀನ ಉದ್ದೇಶವನ್ನು ಹೊಂದಿರುವ ಸಂಘ ಪರಿವಾರದವರೊಂದಿಗೆ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ ಮರುಳಸಿದ್ಧಪ್ಪ , ತಮ್ಮ ಮಾತಿಗೆ ಪೂರಕವಾಗಿ ಕುವೆಂಪು ಅವರ ಮಾತನ್ನು ನೆನಪಿಸಿಕೊಂಡರು. ಬುಧವಾರ (ಡಿ.3) ಸುದ್ದಿಗೋಷ್ಠಿಯಲ್ಲಿ ಮರುಳಸಿದ್ಧಪ್ಪ ಮಾತನಾಡುತ್ತಿದ್ದರು.

ಮುಸ್ಲಿಂ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದ ಮೈದಾನವನ್ನು ಸಂಘ ಪರಿವಾರ ತಮ್ಮ ಶಕ್ತಿ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿದೆ. ಇದು ಸಂಘಪರಿವಾರದ ನಿಜವಾದ ಉದ್ದೇಶವನ್ನು ತಿಳಿಸುತ್ತದೆ. ಶೇ.1ರಷ್ಟಿರುವ ಹಿಂದುತ್ವವಾದಿಗಳು ಬಹು ಸಂಖ್ಯಾತರ ಬ್ರೆೃನ್‌ವಾಷ್‌ ಮಾಡುತ್ತಿದ್ದಾರೆ ಎಂದು ಮರುಳಸಿದ್ಧಪ್ಪ ಆಪಾದಿಸಿದರು.

ತೊಗಾಡಿಯ ಕ್ರಿಮಿನಲ್‌: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜ್ಞಾನಪೀಠ ಪ್ರಶಸ್ತಿ ವಿಜೇತ ಹಾಗೂ ಬಾಬಾಬುಡನ್‌ ಗಿರಿ ಸೌಹಾರ್ದ ವೇದಿಕೆ ಅಧ್ಯಕ್ಷ ಗಿರೀಶ್‌ ಕಾರ್ನಾಡ್‌, ಕರ್ನಾಟವನ್ನು ಗುಜರಾತ್‌ ಮಾಡಲು ಹೊರಟಿರುವ ಮೂಲಭೂತವಾದಿಗಳ ಪ್ರಯತ್ನಗಳನ್ನು ನಾಗರಿಕರು ಪ್ರತಿಭಟಿಸಬೇಕು ಎಂದು ಕರೆ ನೀಡಿದರು.

ಡಿ.7ರಂದು ಬೆಂಗಳೂರಿನಲ್ಲಿ ಸಂಘ ಪರಿವಾರ ಹಮ್ಮಿಕೊಂಡಿರುವ ವಿರಾಟ್‌ ಹಿಂದೂ ಪ್ರದರ್ಶನವನ್ನು ಟೀಕಿಸಿದ ಕಾರ್ನಾಡ್‌, ಬೆಂಗಳೂರನ್ನು ಗುಜರಾತ್‌ ಮಾಡುವ ಉದ್ದೇಶದಿಂದ ಸಂಘ ಪರಿವಾರ ತೊಗಾಡಿಯನಂಥ ಕ್ರಿಮಿನಲ್‌ನನ್ನು ಬೆಂಗಳೂರಿಗೆ ಕರೆಸುತ್ತಿದೆ ಎಂದರು.

ಶೂದ್ರ ಶ್ರೀನಿವಾಸ್‌, ಜಿ.ಕೆ.ಗೋವಿಂದರಾವ್‌, ಕೆ.ಎಸ್‌.ವಿಮಲ, ಡಾ.ವಿಜಯಮ್ಮ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X