ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಗರಣಗಳ ನಾಡಲ್ಲಿ ‘ಪ್ರಾಮಾಣಿಕರ ಪಕ್ಷ’ದ ಹುಟ್ಟು !

By Staff
|
Google Oneindia Kannada News

ಹಗರಣಗಳ ನಾಡಲ್ಲಿ ‘ಪ್ರಾಮಾಣಿಕರ ಪಕ್ಷ’ದ ಹುಟ್ಟು !
ಚುನಾವಣಾ ಕಣಕ್ಕೆ ಧುಮುಕುವ ಗುರಿಯೂ ಈ ಪಕ್ಷಕ್ಕೆ ಇದೆ...

ಬೆಂಗಳೂರು : ‘ಪ್ರಾಮಾಣಿಕ ಪಕ್ಷ’ ಎಂಬ ಹೆಸರಿನ ರಾಜಕೀಯ ಪಕ್ಷವೊಂದು ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ದಿಢೀರನೆ ಜನ್ಮ ತಳೆದಿದೆ. ಭ್ರಷ್ಟಾಚಾರ ಹಾಗೂ ಭ್ರಷ್ಟರ ನಿರ್ಮೂಲನೆ ಈ ಪಕ್ಷದ ಏಕೈಕ ಉಮೇದಿ.

ಎನ್‌ಡಿಟಿವಿ ಈ ಪಕ್ಷ ಜನ್ಮ ತಳೆದಿರುವ ವರದಿಯನ್ನು ಪ್ರಸಾರ ಮಾಡಿತು. ಕೆಲವು ಸ್ನೇಹಿತರು ಒಂದೆಡೆ ಸೇರಿ ಈ ಪಕ್ಷ ಹುಟ್ಟುಹಾಕಿ, ಚಿಹ್ನೆಯನ್ನು ಬೀದಿಬೀದಿಗಳಲ್ಲಿ ತೋರಿಸಿದ್ದರ ಪರಿಣಾಮ ಅನೇಕರು ಪಕ್ಷ ಸೇರಿದ್ದಾರೆ. ಟೀವಿಯಲ್ಲಿ ನಮ್ಮ ದೇಶದ್ದಷ್ಟೇ ಅಲ್ಲದೆ ಜಗತ್ತಿನ ಹತ್ತು ಹಲವು ಹಗರಣಗಳನ್ನು ನೋಡಿ ಬೇಸತ್ತು , ಇಂತಹ ಹಗರಣಗಳನ್ನು ಮಟ್ಟ ಹಾಕಲು ಏನಾದರೂ ಮಾಡಬೇಕೆಂಬ ಗುರಿಯಿಂದ ‘ಪ್ರಾಮಾಣಿಕ ಪಕ್ಷ’ ಕಟ್ಟಿದ್ದೇವೆ ಎಂದು ಪಕ್ಷದ ಅಧ್ಯಕ್ಷ ಕೇಶವನ್‌ ವಿ.ಚಲಂ ಹೇಳಿದರು.

ಮುಂದಿನ ಚುನಾವಣೆಯಲ್ಲಿ ಕಣಕ್ಕೆ ಇಳಿಯಲು ಕೂಡ ನಿರ್ಧರಿಸಿರುವ ಈ ಪಕ್ಷ ಹೆಂಡದ ಹೊಳೆ ಹರಿಸುವುದಿಲ್ಲ, ಚಿತ್ರತಾರೆಯನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದಿಲ್ಲ. ಪ್ರಾಮಾಣಿಕರಿಗಷ್ಟೇ ಇಲ್ಲಿ ಜಾಗ ಎಂದು ಹೇಳಿಕೊಂಡಿದೆ.

ನಮ್ಮಲ್ಲಿ ಅನೇಕ ಪ್ರಾಮಾಣಿಕ ರಾಜಕಾರಣಿಗಳೂ ಇದ್ದಾರೆ. ಆದರೆ ಒತ್ತಡಗಳು ಅವರ ಬಾಯಿ ಮುಚ್ಚಿಸಿವೆ. ಇನ್ನು ಕೆಲವರ ಕ್ರಾಂತಿಯ ದನಿ ಕೇಳುತ್ತಲೇ ಇಲ್ಲ. ಹಾಗೆ ಪ್ರಾಮಾಣಿಕವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡಬಯಸುವ ಮನಸ್ಸುಗಳಿಗೆ ಪಕ್ಷ ಸ್ವಾಗತಿಸುತ್ತದೆ. ಪಕ್ಷವನ್ನು ಇನ್ನೂ ಸಾಕಷ್ಟು ಜನ ಸೇರುತ್ತಾರೆ ಎಂಬ ವಿಶ್ವಾಸ ನಮಗಿದೆ ಎನ್ನುತ್ತಾರೆ ಪಕ್ಷದ ಕಾರ್ಯಕರ್ತೆ ಸುನಿತ ಪೈ.

ಒಂದು ರಾಜಕೀಯ ಪಕ್ಷವನ್ನು ನೋಂದಾಯಿಸಲು ಅದರಲ್ಲಿ ಕನಿಷ್ಠ 100 ಸದಸ್ಯರು ಇರಬೇಕು ಎಂದು ಚುನಾವಣಾ ಆಯೋಗ ಹೇಳಿದೆ. ಸದ್ಯಕ್ಕೆ 50 ಸದಸ್ಯರು ಪ್ರಾಮಾಣಿಕ ಪಕ್ಷದಲ್ಲಿದ್ದಾರೆ. ಇನ್ನೂ 50 ಪ್ರಾಮಾಣಿಕರು ಪಕ್ಷ ಸೇರುವ ಕಾಲ ದೂರವಿಲ್ಲ. ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡೋಣ ಬನ್ನಿ ಎನ್ನುತ್ತಾರೆ ಸುನಿತ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X